Advertisement

ಬೈಕ್ ಢಿಕ್ಕಿ ಹೊಡೆದು ಪೊಲೀಸ್ ಬಸ್ ಬೆಂಕಿಗಾಹುತಿ : ಮೂವರು ಬೈಕ್ ಸವಾರರು ಸಜೀವ ದಹನ

11:43 AM Oct 12, 2022 | Team Udayavani |

ಪಾಟ್ನಾ : ಪೊಲೀಸ್ ಬಸ್ ಗೆ ಬೈಕೊಂಡು ಢಿಕ್ಕಿ ಹೊಡೆದ ಪರಿಣಾಮ ಬಸ್ಸಿಗೆ ಬೆಂಕಿ ಹೊತ್ತಿಕೊಂಡು ಮೂವರು ಬೈಕ್ ಸವಾರರು ಸಜೀವ ದಹನಗೊಂಡ ಘಟನೆ ಪಾಟ್ನಾದ ಚಪ್ರಾ – ಸಿವಾನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

Advertisement

ಬುಧವಾರ ಮುಂಜಾನೆ ಈ ಅವಘಡ ಸಂಭವಿಸಿದ್ದು ಬೈಕ್ ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಚಪ್ರಾ – ಸಿವಾನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎದುರು ಬದಿಯಲ್ಲಿ ಹೋಗುತ್ತಿದ್ದ ಪೊಲೀಸ್ ಬಸ್ ಗೆ ಢಿಕ್ಕಿ ಹೊಡೆದಿದೆ, ಪರಿಣಾಮ ಬೈಕ್ ಸವಾರರು ಬಸ್ಸಿನಡಿ ಸಿಲುಕಿಕೊಂಡು ಸುಮಾರು ೯೦ ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿದೆ ಈ ವೇಳೆ ಬಸ್ಸಿನ ಡೀಸೆಲ್ ಟ್ಯಾಂಕ್ ಗೆ ಬೆಂಕಿ ಹೊತ್ತಿಕೊಂಡು ಬಸ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ, ಬಸ್ಸಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬಸ್ಸಿನಡಿ ಸಿಲುಕಿದ್ದ ಮೂವರು ಬೈಕ್ ಸವಾರರು ಸಜೀವ ದಹನಗೊಂಡಿದ್ದಾರೆ, ಈ ವೇಳೆ ಬಸ್ಸಿನಲ್ಲಿದ್ದ ಪೊಲೀಸ್ ಸಿಬಂದಿಗಳು ಕೂಡಲೇ ಕೆಳಗಿಳಿದು ಪಾರಾಗಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next