Advertisement

ಗಮನ ಸೆಳೆದಿದೆ ಚಾಕೋಲೇಟ್‌ ರಾಕೆಟ್‌ !

07:00 PM Jan 04, 2022 | Team Udayavani |

ರಾಕೆಟ್‌, ಮಿಸೈಲ್‌ಗ‌ಳು ದೇಶದ ರಕ್ಷಣೆಗಾಗಿ ಯುದ್ಧರಂಗದಲ್ಲಿ ಬಳಕೆ ಮಾಡುವಂಥವುಗಳು. ಚಾಕೋಲೇಟ್‌ ಸಿರಪ್‌ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳಿಂದ ಅದನ್ನು ತಯಾರು ಮಾಡಲು ಸಾಧ್ಯವೇ? ಸಾಧ್ಯವೆಂದು ಸ್ವಿಜರ್ಲೆಂಡ್‌ನ‌ ಪ್ರಸಿದ್ಧ ಕೇಕ್‌ ತಯಾರಕ ಅಮೌರಿ ಗುಯಿಕಾನ್‌ ತೋರಿಸಿಕೊಟ್ಟಿದ್ದಾರೆ.

Advertisement

ಚಾಕೋಲೇಟ್‌ ಸಿರಪ್‌ ಮತ್ತು ಸಂಬಂಧಿತ ವಸ್ತುಗಳಿಂದ ರಾಕೆಟ್‌ ಸಿದ್ಧಪಡಿಸುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಜಗತ್ತಿನಾದ್ಯಂತ ಅದಕ್ಕೆ 3 ಲಕ್ಷಕ್ಕಿಂತಲೂ ಅಧಿಕ ಮೆಚ್ಚುಗೆ ವ್ಯಕ್ತವಾಗಿದೆ. ಬಿಳಿಯ ಬಣ್ಣದ ಕ್ರೀಮ್‌ನಂತೆ ಇರುವ ವಸ್ತುವಿನಿಂದ ಅದರ ತಳಹದಿ ರಚಿಸಿ, ಅದರ ಮೇಲೆ, ರಾಕೆಟ್‌ ಅನ್ನು ಕೂರಿಸಲಾಗಿದೆ. ಸರಿ ಸುಮಾರು ಅರ್ಧ ಚಂದ್ರಾಕೃತಿಯಲ್ಲಿ ಅದು ಇರುವಂತೆ ಭಾಸವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next