Advertisement

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

10:09 PM Nov 24, 2024 | Team Udayavani |

ನವದೆಹಲಿ: ದೇಶಿ ನಿರ್ಮಿತ ಪಿನಾಕಾ ಮಲ್ಟಿ ಬ್ಯಾರಲ್‌ ರಾಕೆಟ್‌ ಲಾಂಚರ್‌(ಎಂಬಿಆರ್‌ಎಲ್‌) ಮೇಲೆ ಜಾಗತಿಕ ಆಸಕ್ತಿ ಹೆಚ್ಚುತ್ತಿದೆ. ಪರಿಣಾಮ ಈ ಪಿನಾಕಾ ರಾಕೆಟ್‌ಗಳನ್ನು ಅರ್ಮೇನಿಯಾ ಖರೀದಿಸುತ್ತಿದೆ.

Advertisement

ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಈ ರಾಕೆಟ್‌ಗಳು ಪೂರೈಕೆಯು, ಆಕಾಶ್‌ ಏರ್‌ ಡಿಫೆನ್ಸ್‌ ಕ್ಷಿಪಣಿ ವ್ಯವಸ್ಥೆಯ ಪೂರೈಕೆಯ ಸಂದರ್ಭದಲ್ಲಿ ಶುರುವಾಗಿದೆ.

ಅರ್ಮೇನಿಯಾಗೆ ಮೊದಲ ಹಂತದ ಪಿನಾಕಾ ರಾಕೆಟ್‌ಗಳನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಪಿನಾಕಾ ರಾಕೆಟ್‌ಗಳ ದಾಳಿ ನಡೆಸುವ ಭಾರೀ ಸಾಮರ್ಥ್ಯವನ್ನು ಹೊಂದಿದ್ದು, 80 ಕಿ.ಮೀ. ದೂರದ ಗುರಿಯನ್ನು ತಲುಪುತ್ತವೆ. ಈ ರಾಕೆಟ್‌ಗೆ ಪೂರೈಕೆ ಸಂಬಂಧಿಸಿದಂತೆ ಭಾರತೀಯ ಕಂಪನಿಗಳು ಮತ್ತು ಅರ್ಮೇನಿಯಾ ಮಧ್ಯೆ 2 ವರ್ಷಗಳ ಹಿಂದೆಯೇ ಒಪ್ಪಂದ ಮಾಡಿಕೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next