Advertisement

Parashurama Theme Park: ಮಠಾಧೀಶರ ಬೆಂಬಲದೊಂದಿಗೆ ಹೋರಾಟ: ಮಿಥುನ್‌ ರೈ

11:27 PM Nov 07, 2023 | Team Udayavani |

ಮಂಗಳೂರು: ಕಾರ್ಕಳ ಬೈಲೂರಿನ ಗೋಮಾಳ ಜಾಗದಲ್ಲಿ ಅನಧಿಕೃತವಾಗಿ ಪರಶುರಾಮ ಥೀಮ್‌ ಪಾರ್ಕ್‌ ನಿರ್ಮಿಸಿ ಕಂಚಿನ ಬದಲು ಫೈಬರ್‌ನಿಂದ ಪರಶುರಾಮನ ಪ್ರತಿಮೆ ಸ್ಥಾಪಿಸಲಾಗಿದೆ. ಇದು ಸನಾತನ ಹಿಂದೂ
ಧರ್ಮ ಮತ್ತು ಪರಶುರಾಮ ದೇವರಿಗೆ ಮಾಡಿದ ಅನ್ಯಾಯವಾಗಿದ್ದು ಮಠಾಧೀಶರ ಬೆಂಬಲದೊಂದಿಗೆ ಹೋರಾಟ
ಮುಂದುವರಿಸಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್‌ ರೈ ಹೇಳಿದ್ದಾರೆ.

Advertisement

ದ.ಕ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿ, ಕಂಚಿನ ಪ್ರತಿಮೆ ಎಂದು ಹೇಳಿ ಫೈಬರ್‌ ಪ್ರತಿಮೆ ಮಾಡಿ ನಂಬಿಕೆಗೆ ದ್ರೋಹವೆಸಗಲಾಗಿದೆ. ಕಂದಾಯ ಇಲಾಖೆಯ ಆಕ್ಷೇಪದ ನಡುವೆಯೂ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಗೋಮಾಳ ಜಾಗದಲ್ಲಿ ಅನಧಿಕೃತವಾಗಿ ಪಾರ್ಕ್‌ ನಿರ್ಮಿಸಲಾಗಿದೆ ಎಂದರು.

ಈ ಬಗ್ಗೆ ಶುಕ್ರವಾರದಿಂದಲೇ ಎಲ್ಲ ಮಠಾಧೀಶರ ಬಳಿಗೆ ತೆರಳಿ ಬೆಂಬ ಲಿಸಲು ವಿನಂತಿಸುವೆ. ಈಗಾಗಲೇ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಅವರು ತನಿಖೆಗೆ ಸೂಚನೆ ನೀಡಿದ್ದು ಲೋಕಾಯುಕ್ತಕ್ಕೂ ದೂರು ಸಲ್ಲಿಸ ಲಾಗುವುದು ಎಂದು ಹೇಳಿದರು.

ಸುನಿಲ್‌ ಕುಮಾರ್‌ ಅಮಾನತುಗೊಳಿಸಿ
ಸುನಿಲ್‌ ಕುಮಾರ್‌ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿರುವು ದಕ್ಕೆ ನಕಲಿ ಪ್ರತಿಮೆಯೇ ಉದಾಹರಣೆ. ಹೀಗಾಗಿ ಸುನಿಲ್‌ ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ಅಮಾನತುಗೊಳಿಸಬೇಕು. ಇದರಲ್ಲಿ ಭಾಗಿಯಾದ ಅಧಿಕಾರಿಗಳನ್ನು ಕೂಡ ಅಮಾನತುಗೊಳಿಸಬೇಕು ಎಂದರು.

ನಾಯಕರಾದ ಶುಭೋದ್‌ ರಾವ್‌, ಪ್ರವೀಣ್‌ಚಂದ್ರ ಆಳ್ವ, ಎ.ಸಿ. ವಿನಯರಾಜ್‌, ಅನಿಲ್‌ ಪೂಜಾರಿ, ಪ್ರಕಾಶ್‌ ಸಾಲಿಯಾನ್‌, ಮೋಹನ್‌ ಕೋಟ್ಯಾನ್‌, ವಿಶ್ವಾಸ್‌ದಾಸ್‌, ಅಪ್ಪಿ, ವಿಕಾಸ್‌ ಶೆಟ್ಟಿ, ದುರ್ಗಾ ಪ್ರಸಾದ್‌, ಶಾಂತಲಾ ಗಟ್ಟಿ, ರಾಕೇಶ್‌ ದೇವಾಡಿಗ, ರಮೇಶ್‌ ಕಾಂಚನ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next