Advertisement

Pankaj Advani ಬಿಲಿಯರ್ಡ್ಸ್ ಹಾಲ್‌ ಆಫ್ ಫೇಮ್‌ ಗೌರವ

11:56 PM Mar 19, 2024 | Team Udayavani |

ಹೊಸದಿಲ್ಲಿ: ಬಾರತದ ಖ್ಯಾತ ಬಿಲಿಯರ್ಡ್ಸ್‌ ಪಟು ಪಂಕಜ್‌ ಆಡ್ವಾಣಿ ಅವರು ಚೀನದ ಶಾಂಗ್ರಾವೊ ಸಿಟಿ “ವರ್ಲ್ಡ್ ಬಿಲಿಯರ್ಡ್ಸ್‌ ಮ್ಯೂಸಿಯಂ’ನ ಪ್ರತಿಷ್ಠಿತ ಹಾಲ್‌ ಆಫ್ ಫೇಮ್‌ ಗೌರವಕ್ಕೆ ಭಾಜನರಾಗಿದ್ದಾರೆ.

Advertisement

ಬಿಲಿಯರ್ಡ್ಸ್‌ಗೆ ಸಲ್ಲಿಸಿದ ಅಪಾರ ಸೇವೆಯನ್ನು ಪರಿಗಣಿಸಿ ಆಡ್ವಾಣಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. “ದೇಶವನ್ನು ಹಾಗೂ ವಿಶ್ವ ಬಿಲಿಯರ್ಡ್ಸ್‌ ಸಮುದಾಯವನ್ನು ಪ್ರತಿನಿಧಿಸುತ್ತಿರುವುದಕ್ಕೆ ಕೃತಜ್ಞನಾಗಿ ದ್ದೇನೆ. ಕಠಿನ ದುಡಿಮೆ, ಬದ್ಧತೆ ಹಾಗೂ ಸಾಧನೆಗೆ ಸಂದ ಗೌರವ ಇದಾಗಿದೆ. ಮುಂದೆಯೂ ಎಲ್ಲರೂ ಹೆಮ್ಮೆಪಡುವಂತೆ ಮಾಡುವುದು ನನ್ನ ಗುರಿ’ ಎಂಬುದಾಗಿ ಪಂಕಜ್‌ ಆಡ್ವಾಣಿ ಈ ಸಂದರ್ಭದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next