Advertisement

ಅಪಘಾತದಲ್ಲಿ ಸಾವು ಎಂಬ ಸುದ್ದಿ ವೈರಲ್: ವಿಡಿಯೋ ಮಾಡಿ “ನಾನು ಜೀವಂತವಾಗಿದ್ದೇನೆ..” ಎಂದ ನಟಿ

03:29 PM Feb 28, 2024 | Team Udayavani |

ಮುಂಬಯಿ: ಇತ್ತೀಚೆಗೆ ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ನಟ – ನಟಿಯರು ಸೇರಿದಂತೆ 9 ಮಂದಿ ಮೃತಪಟ್ಟಿದ್ದರು ಎನ್ನುವ ಸುದ್ದಿಯೊಂದು ಹೊರಬಿದ್ದಿತ್ತು. ಈ ಘಟನೆಯಲ್ಲಿ ʼ ಪಂಚಾಯತ್ 2ʼ ವಿನ ನಟಿ ಆಂಚಲ್ ತಿವಾರಿ ಕೂಡ ಸಾವನ್ನಪಿದ್ದಾರೆ ಎಂದು ವರದಿ ಆಗಿತ್ತು.

Advertisement

ಬಿಹಾರದ ಕೈಮೂರ್ನ್ ದೇವಕಲಿದಲ್ಲಿ ಭಾನುವಾರ(ಫೆ.25 ರಂದು) ಕಾರು ಹಾಗೂ ಬೈಕ್‌ ಗಳ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಇದರಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದರು. ಇದರಲ್ಲಿ ಭೋಜ್‌ ಪುರಿಯ ನಟ – ನಟಿ ಹಾಗೂ ಗಾಯಕರು ಕೂಡ ಇದ್ದರು ಎಂದು ವರದಿಯಾಗಿತ್ತು.

ʼಪಂಚಾಯತ್ 2ʼ ಮೂಲಕ ಖ್ಯಾತರಾಗಿದ್ದ ನಟಿ ಆಂಚಲ್ ತಿವಾರಿ ಮತ್ತು ಗಾಯಕ ಛೋಟು ಪಾಂಡೆ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಫೋಟೋ ಸಮೇತ ಸುದ್ದಿ ಹರಿದಾಡಿತ್ತು.

ಈ ಘಟನೆಯ ಬಗ್ಗೆ ವಿಚಾರ ಹೊರಬೀಳುತ್ತಿದ್ದಂತೆ ಆಂಚಲ್, ಅಪಘಾತದಲ್ಲಿ ತಾನು ಸಾವನ್ನಪ್ಪಿಲ್ಲ. ತನಗೇನು ಆಗಿಲ್ಲ ಎಂದು ವಿಡಿಯೋವೊಂದನ್ನು ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಆಂಚಲ್ ಹೆಸರಿನ ಭೋಜ್‌ಪುರಿ ನಟಿ ಸಾವನ್ನಪ್ಪಿದ್ದು, ಅವಳ ಫೋಟೋ ಬದಲು ಸುದ್ದಿ ಮಾಧ್ಯಮಗಳು ʼಪಂಚಾಯತ್‌ -2ʼ ನಟಿಯ ಫೋಟೋವನ್ನು ಬಳಸಿಕೊಂಡು ಸುದ್ದಿಯನ್ನು ಬಿತ್ತರಿಸಿದೆ ಎಂದು ಅಂಚಲ್‌ ಹೇಳಿದ್ದಾರೆ.

Advertisement

“ಇದೊಂದು ಸುಳ್ಳು ಸುದ್ದಿ. ಅಪಘಾತದಲ್ಲಿ ಮೃತಪಟ್ಟಿದ್ದು ಭೋಜ್‌ ಪುರಿ ನಟಿ ಅಂಚಲ್‌.  ನಿಜವಾದ ಆಂಚಲ್‌ ನಿಮ್ಮ ಮುಂದೆ ಸುರಕ್ಷಿತವಾಗಿದ್ದಾರೆ. ನಾನು ಹಿಂದಿ ಸಿನಿಮಾದ ನಟಿಯಾಗಿದ್ದೇನೆ. ಭೋಜ್‌ ಪುರಿಯಿಂದ ನನಗೆ ಯಾವ ಸಂಪರ್ಕವೂ ಇಲ್ಲ. ಮಾಧ್ಯಮದವರು ಸುದ್ದಿಯನ್ನು ಬಿತ್ತರಿಸುವ ಮುನ್ನ ದಯವಿಟ್ಟು ಪರಿಶೀಲನೆ ಮಾಡಿಕೊಳ್ಳಿ. ನಿಮ್ಮಿಂದ ನನ್ನ ಸ್ನೇಹಿತರು ಹಾಗೂ ಪೋಷಕರಿಗೆ ಬಹಳ ತೊಂದರೆ ಆಗಿದೆ. ಆದಷ್ಟು ಬೇಗ ಇದನ್ನು ಸರಿ ಮಾಡಿ” ಎಂದು ನಟಿ ವಿಡಿಯೋ ಮೂಲಕ ಹೇಳಿದ್ದಾರೆ.

“ಜನರು ತನ್ನನ್ನು ಪೂನಂ ಪಾಂಡೆಗೆ ಹೋಲಿಸುತ್ತಿದ್ದಾರೆ. ನಾನು ಪಬ್ಲಿಕ್‌ ಸ್ಟಂಟ್‌ ಮಾಡುತ್ತಿದ್ದೇನೆ ಹೇಳುತ್ತಿದ್ದಾರೆ. ಇದೆಲ್ಲಾ ಮಾಡಿರುವುದು ಮೀಡಿಯಾದವರು ನನ್ನಲ್ಲ” ಎಂದು ಅವರು ಹೇಳಿದ್ದಾರೆ.

ʼಪಂಚಾಯತ್ 2‌ʼರಲ್ಲಿ ಪರಮೇಶ್ವರ್ ಅವರ ಮಗಳು ರವೀನಾ ಪಾತ್ರದಲ್ಲಿ ಆಂಚಲ್ ನಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next