Advertisement

ಪಂಚಮಸಾಲಿ ಶ್ರೀಗಳಿಂದ ಕಿತ್ತೂರಿಗೆ ಪಾದಯಾತ್ರೆ 

05:20 PM May 24, 2018 | |

ದಾವಣಗೆರೆ: ಪಂಚಮಸಾಲಿ ಸಮಾಜದ ಜಾಗೃತಿ, ಕಿತ್ತೂರು ರಾಣಿ ಚೆನ್ನಮ್ಮನ ಕೋಟೆ, ಸಮಾಧಿ ರಾಷ್ಟ್ರೀಯ ಸ್ಮಾರಕ
ನಿರ್ಮಾಣಕ್ಕಾಗಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ಕಿತ್ತೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.

Advertisement

ಬುಧವಾರ, ಹರಿಹರದ ಶ್ರೀಪೀಠದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮೇ 31ರಂದು ಪೀಠದ ಆವರಣದಿಂದ ನಮ್ಮ ನಡಿಗೆ ಕಿತ್ತೂರು ಚೆನ್ನಮ್ಮನ ನಾಡಿನ ಕಡೆಗೆ- ಸದ್ಭಾವನಾ ಯಾತ್ರೆ ಹೆಸರಲ್ಲಿ ಆರಂಭ ಆಗುವ ಪಾದಯಾತ್ರೆಗೆ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ| ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡುವರು. ಯಾತ್ರೆ ಜೂ.10ರವರೆಗೆ ಸಾಗಲಿದೆ ಎಂದರು.

ಯಾತ್ರೆಯ ಉದ್ದಕ್ಕೂ ಧಾರ್ಮಿಕ ಸಭೆ ನಡೆಸಲಾಗುವುದು. ಬೆಳಗ್ಗೆ ವೇಳೆ ಯೋಗ, ಭಜನೆ, ಧ್ಯಾನ, ಪ್ರಾಣಾಯಾಮದ ಬಗ್ಗೆ ತಿಳಿಸಿಕೊಡಲಾಗುವುದು. ಇಡೀ ಪಾದಯಾತ್ರೆಗೆ ಪಂಚಮಸಾಲಿ ಪೀಠ ನೇತೃತ್ವ ವಹಿಸಲಿದೆ. ಎಲ್ಲಾ ಸಮಾಜದ
ಬಾಂಧವರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಅವರು ಕೋರಿದರು. 

1824ರಲ್ಲಿ ಮೊಟ್ಟ ಮೊದಲ ಬಾರಿಗೆ ದೇಶದ ಸ್ವತಂತ್ರಕ್ಕಾಗಿ ಹೋರಾಟ ಮಾಡಿದ್ದು ಕಿತ್ತೂರು ರಾಣಿ ಚೆನ್ನಮ್ಮ. ನಾವು ಅವರನ್ನು ನಾಡಿನ ಮಾತೆ ಎಂಬುದಾಗಿ ಪೂಜಿಸಬೇಕು. ಈಗಾಗಲೇ ಸಂಸತ್‌ ಭವನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ
ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಆದರೆ, ಕಿತ್ತೂರಿನಲ್ಲಿನ ಕೋಟೆ, ಬೈಲಹೊಂಗಲದಲ್ಲಿರುವ ಚೆನ್ನಮ್ಮನವರ ಸಮಾಧಿ ಇದೀಗ ಪಾಳು ಬಿದ್ದಿವೆ. ಇವನ್ನು ಅಭಿವೃದ್ಧಿ ಪಡಿಸುವ ಜೊತೆಗೆ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲು ಪಾದಯಾತ್ರೆ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಅವರು ತಿಳಿಸಿದರು.

ಸಮಾಜದ ಮುಖಂಡ ಬಾವಿ ಬೆಟ್ಟಪ್ಪ ಮಾತನಾಡಿ, 31ರಂದು ಸಂಜೆ 4ಕ್ಕೆ ಪೀಠದ ಆವರಣದಿಂದ ಆರಂಭವಾಗುವ ಪಾದಯಾತ್ರೆ ಹರಿಹರೇಶ್ವರ ದೇವಸ್ಥಾನ ತಲುಪಿ, ಅಲ್ಲಿಂದ ಕೋಡ್ಯಾಲ ಹೊಸಪೇಟೆಯಲ್ಲಿ ಮೊದಲ ದಿನದ ಯಾತ್ರೆ ಅಂತ್ಯಗೊಳ್ಳಲಿದೆ. ಜೂ. 1ರಂದು ರಾಣಿಬೆನ್ನೂರು, 2ರಂದು ಮೋಟೆಬೆನ್ನೂರು, 3ರಂದು ಹಾವೇರಿ, 4ರಂದು ಬಂಕಾಪುರ, 5ರಂದು ತಡಸ ಕತ್ರಿ, 7ರಂದು ಹುಬ್ಬಳ್ಳಿ, 8ರಂದು ಕಿತ್ತೂರು ಪ್ರವೇಶ ಮಾಡಲಿದೆ. 9ರಂದು ಅಲ್ಲಿಂದ ಬೈಲಹೊಂಗಲಕ್ಕೆ ಸಾಗಲಿದೆ. 10ರಂದು ಬೈಲಹೊಂಗಲ ಅಥವಾ ಕಿತ್ತೂರಿನಲ್ಲಿ ಸಮಾರೋಪ ನಡೆಯಲಿದೆ ಎಂದರು.

Advertisement

ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಮುಖಂಡರಾದ ಅಣಸಿ ಸಿದ್ದಣ್ಣ, ಜಿ.ಪಿ. ಪಾಟೀಲ್‌, ಮಲ್ಲಣ್ಣ
ಸುದ್ದಿಗೋಷ್ಠಿಯಲ್ಲಿದ್ದರು.

ವೀರಶೈವ- ಲಿಂಗಾಯತ ಸಮುದಾಯದಿಂದ 52 ಜನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಂಚಮಸಾಲಿ ಸಮಾಜದಿಂದ 20 ಜನ ಶಾಸಕರು ಆಯ್ಕೆಯಾಗಿದ್ದಾರೆ. ಇವೆಲ್ಲರ ಪ್ರತಿನಿಧಿ ಶಾಮನೂರುಗೆ ಡಿಸಿ ಎಂ ಸ್ಥಾನ ನೀಡಬೇಕು. 
ಬಿ.ಸಿ. ಉಮಾಪತಿ, ಪ್ರಧಾನ
ಧರ್ಮದರ್ಶಿ, ಪಂಚಮಸಾಲಿ ಪೀಠ 

Advertisement

Udayavani is now on Telegram. Click here to join our channel and stay updated with the latest news.

Next