Advertisement

ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಲನಚಿತ್ರಗಳು ನಿರ್ಮಾಣಗೊಳ್ಳಬೇಕು : ಪ್ರಕಾಶ್ ಜಾವಡೇಕರ್

08:02 PM Jan 16, 2021 | Team Udayavani |

ಪಣಜಿ : ಚಲನಚಿತ್ರ ನಿರ್ಮಾಣಕ್ಕೆ ಭಾರತದಲ್ಲಿ ಉತ್ತಮ ಸ್ಥಳಗಳಿವೆ ಹಾಗಾಗಿ ಭಾರತದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಗಳು ನಿರ್ಮಾಣಗೊಳ್ಳಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸರಣ ಮಂತ್ರಿ ಪ್ರಕಾಶ್ ಜಾವಡೇಕರ್ ಕರೆ ನೀಡಿದ್ದಾರೆ.

Advertisement

ಪಣಜಿ ಸಮೀಪದ ಬಾಂಬೋಲಿಂ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ “51 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ”ದ ಉಧ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು 2020 ರ ಜನವರಿಯಲ್ಲಿ ಕರೋನಾ ಸೋಂಕು ಭಾರತಕ್ಕೆ ಬಂದಿತ್ತು, 2021 ರ ಜನವರಿಯಲ್ಲಿ ಕರೋನಾ ವೈರಸ್‍ಗೆ ಲಸಿಕೆ ಬಿಡುಗಡೆಯಾಗಿದೆ. ಇಂತಹ ಮಹಾಮಾರಿಯ ವಿರುದ್ಧ ಭಾರತ ಹೋರಾಟ ನಡೆಸಿ ಜಯಗಳಿಸಿದೆ. ಈ ಹಿಂದಿನಂತೆಯೇ ಮುಂಬರುವ ಚಲನಚಿತ್ರೋತ್ಸವಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಮೂಲಕ ಉತ್ಸಾಹದಿಂದ ಆಚರಿಸಲಾಗುವು ಎಂಬ ವಿಶ್ವಾಸವಿದೆ ಎಂದರು.

ಲಾಕ್‍ಡೌನ್ ಸಂದರ್ಭದಲ್ಲಿ ದಿನಪತ್ರಿಕೆಯ ಮಾರಾಟ ಗಣನೀಯ ಪ್ರಮಾಣದಲ್ಲಿ ಇಳಿಮುಖವಾದಂತೆ ಕಂಡರೂ ಕೂಡ ಇಂದು ಪತ್ರಿಕೆಯ ಆನ್ ಲೈನ್ ಓದುಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದಿದ್ದಾರೆ.
ಈ ವೇಳೆ ಚಲಚಿತ್ರೋತ್ಸವದ ಮುಖ್ಯ ಅತಿಥಿಯಾಗಿದ್ದ ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಸುದೀಪ್ ಅವರು ಚಲನಚಿತ್ರ ಕ್ಷೇತ್ರರಂಗದ ಎಲ್ಲ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.

ನಂತರ ಮಾತನಾಡಿದ ಕಿಚ್ಚ ಸುದೀಪ್ “ಎಲ್ಲರಿಗೂ ಕನ್ನಡ ಚಿತ್ರರಂಗದ ಪರವಾಗಿ ಕಿಚ್ಚನಿಂದ ನಮಸ್ತೆ” ಎಂದು ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು. ಸಿನೆಮಾ ಎನ್ನುವುದು ಒಂದು ಭ್ರಾತೃತ್ವವಾಗಿದ್ದು ಅದು ನಮ್ಮ ನಿಮ್ಮನ್ನು ಜಗತ್ತಿನಾದ್ಯಂತ ಕರೆದೊಯ್ಯುತ್ತದೆ. ಇಷ್ಟೇ ಅಲ್ಲದೆಯೇ ಪ್ರಪಂಚದಾದ್ಯಂತದ ಪ್ರತಿ ಬ್ರಾತೃತ್ವದ ಸಂಸ್ಕೃತಿಗೆ ನಿಮ್ಮನ್ನು ಹತ್ತಿರವಾಗಿಸುತ್ತದೆ ಎಂದರು.

Advertisement

ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ : ಕೋವಿಡ್ 19 ಹಿನ್ನೆಲೆಯಲ್ಲಿ ಪ್ರತಿ ವರ್ಷ ನವೆಂಬರ್ ನಲ್ಲಿ ನಡೆಯಬೇಕಿದ್ದ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಪ್ರಸಕ್ತ ವರ್ಷ ಎರಡು ತಿಂಗಳ ನಂತರ ಅಂದರೆ ಜನವರಿಯಲ್ಲಿ ಆಯೋಜಿಸಲಾಗುತ್ತಿದೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ಜಗತ್ತಿನ ಚಲನಚಿತ್ರ ಕ್ಷೇತ್ರಕ್ಕೆ ಒಂದು ಉತ್ತಮ ವೇದಿಕೆಯಾಗಿದೆ. ಪ್ರಸಕ್ತ ವರ್ಷ ಗೋವಾ ಸ್ವಾತಂತ್ರ್ಯಗೊಂಡು 60 ವರ್ಷ ಪೂರ್ಣಗೊಂಡಿದೆ. ಗೋವಾ ರಾಜ್ಯಕ್ಕೆ ಪ್ರವಾಸೋದ್ಯಮ ಮತ್ತು ಮನೋರಂಜನೆ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದೆ. ಗೋವಾದಲ್ಲಿ ಹೆಚ್ಚು ಚಲನಚಿತ್ರಗಳು ನಿರ್ಮಾಣಗೊಳ್ಳಬೇಕು, ಗೋವಾದಲ್ಲಿ ಚಲನಚಿತ್ರ ನಿರ್ಮಾಣಕ್ಕೆ ಹೆಚ್ಚು ಹೂಡಿಕೆಯಾಗಬೇಕು ಎಂದು ಹೇಳಿದರು.

ಉಧ್ಘಾಟನಾ ಸಮಾರಂಭದಲ್ಲಿ ಬಂಗ್ಲಾದೇಶದ ಕಮೀಶನರ್ ಮೊಹಮ್ಮದ್ ಇಮ್ರಾನ್ ಉಪಸ್ಥಿತರಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಓನ್‍ಲೈನ್ ಫಿಲ್ಮ ಬಜಾರ್ ಉಧ್ಘಾಟನೆ ನೆರವೇರಿಸಿದರು. ಮಾಹಿತಿ ಮತ್ತು ಪ್ರಸರಣ ಖಾತೆಯ ಸಹ ಕಾರ್ಯದರ್ಶಿ ನಿರ್ಜಾ ಶೇಖರ್ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ನಿಶ್ಕಾ ಚೋಪ್ರಾ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ವಿವಿಧ ದೇಶಗಳಿಂದ ಆಗಮಿಸಿದ ಚಲನಚಿತ್ರ ಕ್ಷೇತ್ರದ ಕಲಾವಿದರು, ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆಯಿತು. ಸಮಾರಂಭದಲ್ಲಿ ಕಿಚ್ಚ ಸುದೀಪ ಅವರನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗೋಲ್ಡನ್ ಪಿಕೋಕ್ ನೀಡಿ ಸನ್ಮಾನಿಸಿದರು. ಫೆಸ್ಟಿವಲ್ ಉಪನಿರ್ದೇಶಕ ಚೈತನ್ಯಪ್ರಸಾದ್ ವಂದನಾರ್ಪಣೆಗೈದರು.

ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಹಿನ್ನೆಲೆಯಲ್ಲಿ ಪಣಜಿಯ ಐನೊಕ್ಸ ಪರಿಸರದಲ್ಲಿ ಜನವರಿ 24 ರ ವರೆಗೆ ವಿವಿಧ ದೇಶಗಳ ಆಯ್ದ 200 ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next