Advertisement

ವಿಂಡೀಸಿಗೆ ಮುನ್ನಡೆ ತಂದಿತ್ತ ಬ್ರಾತ್‌ವೇಟ್‌

10:14 PM Aug 14, 2021 | Team Udayavani |

ಕಿಂಗ್‌ಸ್ಟನ್‌ (ಜಮೈಕಾ): ಪ್ರವಾಸಿ ಪಾಕಿಸ್ಥಾನ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಎರಡು ರನ್ನಿಗೆ ಎರಡು ವಿಕೆಟ್‌ ಕಳೆದುಕೊಂಡು ತೀವ್ರ ಒತ್ತಡದಲ್ಲಿದ್ದ ವೆಸ್ಟ್‌ ಇಂಡೀಸಿಗೆ ನಾಯಕ ಕ್ರೆಗ್‌ ಬ್ರಾತ್‌ವೇಟ್‌ ಇನ್ನಿಂಗ್ಸ್‌ ಲೀಡ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ದ್ವಿತೀಯ ದಿನದಾಟದ ಅಂತ್ಯಕ್ಕೆ 8 ವಿಕೆಟಿಗೆ 251 ರನ್‌ ಮಾಡಿರುವ ವಿಂಡೀಸ್‌, 34 ರನ್ನುಗಳ ಅಲ್ಪ ಮುನ್ನಡೆಯಲ್ಲಿದೆ. ಪಾಕ್‌ 217ಕ್ಕೆ ಆಲೌಟ್‌ ಆಗಿತ್ತು.

Advertisement

ಆರಂಭಕಾರನೂ ಆಗಿರುವ ಬ್ರಾತ್‌ವೇಟ್‌ ಪಾಕ್‌ ಬೌಲಿಂಗ್‌ ಆಕ್ರಮಣವನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ 97 ರನ್‌ ಬಾರಿಸಿದರು. ಶತಕಕ್ಕೆ ಇನ್ನೇನು 3 ರನ್‌ ಬೇಕೆನ್ನುವಾಗ ರನೌಟ್‌ ದುರದೃಷ್ಟಕ್ಕೆ ಸಿಲುಕಿದರು. ಆಗಷ್ಟೇ ವಿಂಡೀಸ್‌ ಪಾಕಿಸ್ಥಾನದ ಮೊತ್ತವನ್ನು ಹಿಂದಿಕ್ಕಿತ್ತು.

ಬ್ರಾತ್‌ವೇಟ್‌ 221 ಎಸೆತಗಳಿಂದ ಕಪ್ತಾನನ ಇನ್ನಿಂಗ್ಸ್‌ ಕಟ್ಟಿದರು. ಹೊಡೆದದ್ದು 12 ಬೌಂಡರಿ. 100 ರನ್‌ ತಲಪುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡು ಮತ್ತೂಮ್ಮೆ ಸಂಕಟಕ್ಕೆ ಸಿಲುಕಿದ ತಂಡವನ್ನು ಬ್ರಾತ್‌ವೇಟ್‌-ಜಾಸನ್‌ ಹೋಲ್ಡರ್‌ ಸೇರಿಕೊಂಡು ಮೇಲೆತ್ತಿದರು. 31 ಓವರ್‌ಗಳನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿದ ಈ ಜೋಡಿ 6ನೇ ವಿಕೆಟಿಗೆ 96 ರನ್‌ ಪೇರಿಸಿತು. ಹೋಲ್ಡರ್‌ 108 ಎಸೆತ ಎದುರಿಸಿ 58 ರನ್‌ ಕೊಡುಗೆ ಸಲ್ಲಿಸಿದರು (10 ಬೌಂಡರಿ).

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-217. ವೆಸ್ಟ್‌ ಇಂಡೀಸ್‌-8 ವಿಕೆಟಿಗೆ 251 (ಬ್ರಾತ್‌ವೇಟ್‌ 97, ಹೋಲ್ಡರ್‌ 58, ಚೇಸ್‌ 21, ಅಬ್ಟಾಸ್‌ 42ಕ್ಕೆ 3, ಅಫ್ರಿದಿ 59ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next