Advertisement

ಬಾಂಗ್ಲಾ ಚುನಾವಣೆ ಬುಡಮೇಲು ಮಾಡಲು ಪಾಕ್‌ ಯತ್ನ: ಹಸೀನಾ

12:07 PM Dec 27, 2018 | udayavani editorial |

ಢಾಕಾ : ”ಬಾಂಗ್ಲಾದೇಶ್‌ ನ್ಯಾಶನಲಿಸ್ಟ್‌ ಪಾರ್ಟಿ (ಬಿಎನ್‌ಪಿ)ಯ  ಸಹಾಯ ಪಡೆದು ಪಾಕಿಸ್ಥಾನ, ಬಾಂಗ್ಲಾದೇಶದ ಮಹಾ ಚುನಾವಣೆಯನ್ನು ಬುಡಮೇಲು ಮಾಡಲು ಯತ್ನಿಸುತ್ತಿದೆ” ಎಂದು ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಆರೋಪಿಸಿದ್ದಾರೆ.

Advertisement

ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆ ಇದೇ ಡಿ.30ರಂದು ನಡೆಯುತ್ತಿದೆ. ಪ್ರಧಾನಿ ಹಸೀನಾ ಅವರ ಆವಾಮಿ ಲೀಗ್‌ ಮತ್ತು ಬಾಂಗ್ಲಾದೇಶ್‌ ನ್ಯಾಶನಲಿಸ್ಟ್‌ ಪಾರ್ಟಿ (ಬಿಎನ್‌ಪಿ) ವಿರುದ್ಧ ತೀವ್ರ ರಾಜಕೀಯ ಕದನ ನಡೆಯಲಿದೆ. 

‘ಬಾಂಗ್ಲಾದೇಶದ 11ನೇ ಮಹಾ ಚುನಾವಣೆಯನ್ನು ಬುಡಮೇಲು ಮಾಡುವ ಸಂಚನ್ನು ಪಾಕ್‌ ಐಎಸ್‌ಐ ಹೊಂದಿದ್ದು ಅದು ಬಿಎನ್‌ಪಿ ನಾಯಕರ ನೆರವಿನೊಂದಿಗೆ ಪಿತೂರಿ ನಡೆಸುತ್ತಿದೆ’ ಎಂದು ಪ್ರಧಾನಿ ಶೇಖ್‌ ಹಸೀನಾ ಆರೋಪಿಪಿಸಿದರು. 

“ನಾವು ಕೇವಲ ಪಾಕಿಸ್ಥಾನವನ್ನು ಮತ್ತು ಐಎಸ್‌ಐ ಅನ್ನು ಮಾತ್ರವೇ ಏಕೆ ದೂರಬೇಕು ? ನಾವು ದೂರುವುದಿದ್ದರೆ ಬಿಎನ್‌ಪಿ ಅನ್ನು ಕೂಡ ದೂರಬೇಕು. ಏಕೆಂದರೆ ಅದು ದೇಶದಲ್ಲಿನ ಪ್ರಜಾಸತ್ತೆಯನ್ನು ನಾಶ ಮಾಡುವುದಕ್ಕೆ ಐಎಸ್‌ಐ ನಿಂದ ಲಂಚ ಪಡೆಯುತ್ತಿದೆ. ಬಿಎನ್‌ಪಿ ಗೆ ದೇಶದ ಮೇಲಾಗಲೇ ಜನತೆಯ ಮೇಲಾಗಲೀ ಪ್ರೀತಿ ಇಲ್ಲ. ಬಿಎನ್‌ಪಿಗೆ ದೇಶ ಅಭಿವೃದ್ಧಿ ಹೊಂದುವುದು ಬೇಕಾಗಿಲ್ಲ; ಅದಕ್ಕೆ ಪ್ರಜಾಸತ್ತೆಯ ಮೇಲೂ ಗೌರವವಿಲ್ಲ” ಎಂದು ಹಸೀನಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next