Advertisement

ಸರ್ಜಿಕಲ್‌ ಸ್ಟ್ರೈಕ್‌ ಬಳಿಕ ಗಡಿ ದಾಟಿದ್ದ ಭಾರತೀಯ ಯೋಧ ಬಿಡುಗಡೆ

03:08 PM Jan 21, 2017 | Team Udayavani |

ಹೊಸದಿಲ್ಲಿ : ಹೊಸದಿಲ್ಲಿ ಮತ್ತು ಇಸ್ಲಾಮಾಬಾದ್‌ ನಡುವಿನ ದ್ವಿಪಕ್ಷೀಯ ಮಾತುಕತೆಗಳು ಸಂಪೂರ್ಣವಾಗಿ ನಿಂತು ಹೋಗಿರುವ ಹೊರತಾಗಿಯೂ ಕಳೆದ ವರ್ಷ ಸರ್ಜಿಕಲ್‌ ಸ್ಟ್ರೈಕ್‌ ನಡೆದ ಮರುದಿನ ಅಛಾನಕ್‌ ಆಗಿ ಪಾಕ್‌ ಗಡಿಯನ್ನು ಪ್ರವೇಶಿಸಿ ಬಂಧಿತನಾಗಿದ್ದ ಭಾರತೀಯ ಯೋಧ ಚಂದು ಬಾಬುಲಾಲ್‌ ಚೌಹಾಣ್‌ ನನ್ನು ಪಾಕ್‌ ಸೇನೆ ಇಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ಬಿಡುಗಡೆ ಮಾಡಿದೆ.

Advertisement

ಭಾರತೀಯ ಯೋಧ ಚಂದು ಬಾಬುಲಾಲ್‌ ಚೌಹಾಣ್‌ ಕಳೆದ ವರ್ಷ ಸೆಪ್ಟಂಬರ್‌ 29ರಂದು, ಅಂದರೆ ಭಾರತೀಯ ವಿಶೇಷ ಸೈನಿಕರು ಪಾಕ್‌ ಗಡಿಯೊಳಗೆ ನುಗ್ಗಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ ಮರುದಿನ, ಅಛಾನಕ್‌ ಆಗಿ ಪಾಕ್‌ ಗಡಿಯನ್ನು ಪ್ರವೇಶಿಸಿದ್ದ; ಒಡನೆಯೇ ಆತನನ್ನು ಪಾಕ್‌ ಸೈನಿಕರು ಬಂಧಿಸಿದ್ದರು. 

ಯೋಧ ಚಂದುವನ್ನು ಪಾಕಿಸ್ಥಾನ ಬಿಡುಗಡೆ ಮಾಡುತ್ತಿರುವುದು ಎರಡನೇ ಧನಾತ್ಮಕ ಬೆಳವಣಿಗೆಯಾಗಿದೆ. ಕಳೆದ ಡಿ.25ರರಂದು, ಅಂದರೆ ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಅವರ ಹುಟ್ಟುಹಬ್ಬದ ದಿನದಂದು ಪಾಕ್‌ ಸೇನೆ ತನ್ನ ಸೆರೆಯಲ್ಲಿದ್ದ 220 ಭಾರತೀಯ ಬೆಸ್ತರನ್ನು ಸದ್ಭಾವನೆಯ ಕ್ರಮವಾಗಿ ಬಿಡುಗಡೆಮಾಡಿತ್ತು. 

ಯೋಧ ಚಂದು ನನ್ನು ಪಾಕ್‌ ಸೇನೆ ಇಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ವಾಘಾ ಗಡಿಯಲ್ಲಿ ಬಿಡುಗಡೆ ಮಾಡಿರುವುದಾಗಿ ನ್ಯೂಸ್‌ 18 ವರದಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next