Advertisement

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

12:01 AM Nov 19, 2024 | |

ಮುಂಬೈ: ಕೆಲವರಿಗೆ ಬ್ಯಾಂಕ್‌ನ ಅತಿ ಯಾದ ಬಡ್ಡಿ ದರವು ಹೊರೆಯಾಗುತ್ತಿದೆ. ಆದ್ದರಿಂದ ಬಡ್ಡಿ ದರಗಳನ್ನು ಕೈಗೆಟಕುವಂತೆ ಮಾಡಲು ಕೆಲ ಕ್ರಮಗಳ ಅಗತ್ಯವಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಭಾರತೀಯ ಸ್ಟೇಟ್‌ ಬ್ಯಾಂಕ್‌ ಆಯೋಜಿಸಿದ್ದ ವಾರ್ಷಿಕ ವ್ಯಾಪಾರ ಮತ್ತು ಆರ್ಥಿಕ ಸಮಾವೇಶದಲ್ಲಿ ಮಾತನಾಡಿದ ಅವರು, “ಹೆಚ್ಚಿನ ಬಡ್ಡಿಯಿಂದ ಸಾಲಗಾರರಿಗೆ ಒತ್ತಡ ಹೆಚ್ಚಾಗುತ್ತಿದೆ. ಕೈಗಾರಿಕೆಗಳು ತಮ್ಮ ಸಾಮರ್ಥ್ಯ ಹೆಚ್ಚಿಸಲು ಬಯಸುವ ಈ ಸಂದರ್ಭದಲ್ಲಿ ಬ್ಯಾಂಕ್‌ ಬಡ್ಡಿ ಕೈಗೆಟಕುವಂತಿರಬೇಕು ಎಂದರು. ಅಲ್ಲದೇ ಸಾಲಗಾರರಿಗೆ ಅಸಮರ್ಪಕ ವಿಮಾ ಮಾರಾಟ ನಡೆಸುವ ಮೂಲಕ ಸಾಲದ ಮೌಲ್ಯ ಹೆಚ್ಚಿಸದಂತೆ ಬ್ಯಾಂಕುಗಳಿಗೆ ನಿರ್ಮಲಾ ಮನವಿ ಮಾಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next