Advertisement

ಟಿ20 ಸರಣಿ: ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲು ಪಾಕಿಸ್ತಾನಕ್ಕೆ ಗ್ರೀನ್‌ ಸಿಗ್ನಲ್‌

04:00 PM Jun 17, 2020 | sudhir |

ಕರಾಚಿ : ಕೋವಿಡ್‌-19 ಹಾವಳಿಯಿಂದ ಸ್ಥಗಿತಗೊಂಡಿದ್ದ ಕೆಲವೊಂದು ಕ್ರೀಡಾಕೂಟಗಳನ್ನು ನಿರ್ಬಂಧಗಳನ್ವಯ ನಡೆಸಲು ತಯಾರಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿಯೇ ಪಾಕಿಸ್ತಾನ ಕ್ರಿಕೆಟ್‌ ತಂಡದ ಇಂಗ್ಲೆಂಡ್‌ ಪ್ರವಾಸಕ್ಕೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅನುಮತಿ ನೀಡಿದ್ದು, ಈ ತಿಂಗಳ ಅಂತ್ಯದಲ್ಲಿ ಪ್ರಯಾಣ ಪ್ರಾರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.

Advertisement

ಪಿಸಿಬಿ ಅಧ್ಯಕ್ಷ ಎಹ್ಸಾನ್‌ ಮಣಿ ಇಸ್ಲಾಮಾಬಾದ್‌ನಲ್ಲಿ ಇಮ್ರಾನ್‌ ಖಾನ್‌ ಭೇಟಿಯಾಗಿ ಕ್ರಿಕೆಟ್‌ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದು, ಆ ಈ ವಿಷಯದ ಕುರಿತಾಗಿ ಅನುಮೋದನೆ ಹೊರಡಿಸಲಾಗಿದೆ.

“ಕೋವಿಡ್ ವೈರಸ್‌ ನಡುವೆಯೂ ಕ್ರಿಕೆಟ್‌ ಮತ್ತು ಇತರ ಕ್ರೀಡಾ ಚಟುವಟಿಕೆಗಳನ್ನು ಪುನಾರಂಭಿಸಲು ಜನರು ಬಯಸುತ್ತಿರುವುದರಿಂದ ಪಾಕಿಸ್ತಾನ ತಂಡವು ಟೆಸ್ಟ್ ಮತ್ತು ಟಿ- 20 ಸರಣಿಗಾಗಿ ಇಂಗ್ಲೆಂಡ್‌ಗೆ ಹೋಗಬೇಕು ಎಂದು ಪ್ರಧಾನಿ ಮಣಿಗೆ ತಿಳಿಸಿದರು” ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿರುವ ಎಲ್ಲ ಆಟಗಾರರು ಮತ್ತು ಅಧಿಕಾರಿಗಳ ಸುರಕ್ಷತೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಯು ಸರಿಯಾದ ಪ್ರೋಟೋಕಾಲ್‌ ಜಾರಿಗೆ ತರಬೇಕು ಎಂದು ಇಮ್ರಾನ್‌ ಪಿಸಿಬಿ ಮುಖ್ಯಸ್ಥರಿಗೆ ತಿಳಿಸಿದ್ದು, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮೂರು ಟೆಸ್ಟ್ ಮತ್ತು ಮೂರು ಟಿ – 20 ಸರಣಿ ಆಡಲು ಪಾಕಿಸ್ತಾನ ತಂಡ ಈ ತಿಂಗಳ ಅಂತ್ಯದ ವೇಳೆಗೆ ಇಂಗ್ಲೆಂಡ್‌ ತಲುಪಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.

ಇನ್ನು ಒಟ್ಟು 29 ಆಟಗಾರರು ಮತ್ತು 14 ಅಧಿಕಾರಿಗಳು ಈ ಒಂದು ಪ್ರಯಾಣದಲ್ಲಿ ಭಾಗಿಯಾಗಲಿದ್ದು, ಇಂಗ್ಲೆಂಡ್‌ ತಲುಪಿದ ಬಳಿಕ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರುತ್ತಾರೆ. ಆ ಬಳಿಕ ಮೂರು – ನಾಲ್ಕು ವಾರಗಳ ಕಾಲ ಅವರನ್ನು ಸುರಕ್ಷಿತ ವಾತಾವರಣದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next