Advertisement
32ರ ಹರೆಯದ ಸರ್ಫಾರಾಜ್, ನಾಯಕತ್ವದಿಂದ ಕೆಳಗಿಳಿಯುವ ಬಗ್ಗೆ ಯಾವುದೇ ಯೋಜನೆ ತನ್ನಲ್ಲಿಲ್ಲ ಎಂದು ಹೇಳಿಕೆ ನೀಡಿದ ಬಳಿಕ ಪಿಸಿಬಿ ಬದಲಾವಣೆಯ ಸೂಚನೆ ನೀಡಿರುವುದು ಗಮನಾರ್ಹ.
“ಜಿಯೋ ನ್ಯೂಸ್’ ವರದಿ ಪ್ರಕಾರ ಮುಂಬರುವ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ಗ್ೂ ಮೊದಲು ಪಾಕಿಸ್ಥಾನ ಟೆಸ್ಟ್ ತಂಡದ ನಾಯಕತ್ವವನ್ನು ಬದಲಿಸಲಿದೆ. ಪಾಕ್ ಕ್ರಿಕೆಟ್ ಮಂಡಳಿಯ ಸಭೆ ಆ. 2ರಂದು ಲಾಹೋರ್‌ನಲ್ಲಿ ನಡೆಯಲಿದ್ದು, ಇಲ್ಲಿ ನಾಯಕತ್ವದ ಬದಲಾವಣೆಯೇ ಮುಖ್ಯ ಅಜೆಂಡಾ ಆಗಿರಲಿದೆ. ಸಫìರಾಜ್ ಅವರನ್ನು ಕೆಳಗಿಳಿಸಿ 29ರ ಹರೆಯದ ಎಡಗೈ ಬ್ಯಾಟ್ಸ್‌ಮನ್ ಶಾನ್ ಮಸೂದ್ ಅವರಿಗೆ ಟೆಸ್ಟ್ ನಾಯಕತ್ವ ವಹಿಸುವ ಸಾಧ್ಯತೆ ಇದೆ. ಖಾಯಂ ಸ್ಥಾನ ಪಡೆಯದ ಮಸೂದ್
ಆದರೆ ಶಾನ್ ಮಸೂದ್ ಪಾಕ್ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನ ಸಂಪಾದಿಸುವಲ್ಲಿ ವಿಫಲರಾದ್ದರಿಂದ ಅವರಿಗೆ ನಾಯಕತ್ವ ನೀಡುವ ಬಗ್ಗೆ ಕೆಲವರಿಗೆ ಅಸಮಾಧಾನ ಇದೆ ಎನ್ನಲಾಗಿದೆ. ಮಸೂದ್ 2013ರಲ್ಲೇ ಟೆಸ್ಟ್ ಪದಾರ್ಪಣೆ ಮಾಡಿದರೂ ಆಡಿದ್ದು 15 ಪಂದ್ಯಗಳನ್ನು ಮಾತ್ರ. 26.42ರ ಸರಾಸರಿಯಲ್ಲಿ 797 ರನ್ ಗಳಿಸಿದ್ದು ಇವರ ಸಾಧನೆ. ಆದರೆ ಪಾಕಿಸ್ಥಾನ ದೇಶಿ ಕ್ರಿಕೆಟ್‌ನಲ್ಲಿ ಶಾನ್ ಮಸೂದ್ “ನ್ಯಾಶನಲ್ ಬ್ಯಾಂಕ್’ ತಂಡದ ನಾಯಕತ್ವ ವಹಿಸಿ ಸಾಕಷ್ಟು ಯಶಸ್ಸು ಕಂಡಿದ್ದಾರೆ.
Related Articles
ಸರ್ಫಾರಾಜ್ ಅಹ್ಮದ್ 13 ಟೆಸ್ಟ್‌ಗಳಲ್ಲಿ ಪಾಕಿಸ್ಥಾನವನ್ನು ಮುನ್ನಡೆಸಿದ್ದು, ನಾಲ್ಕರಲ್ಲಿ ಜಯ ಕಂಡಿದ್ದಾರೆ. 8 ಟೆಸ್ಟ್‌ಗಳಲ್ಲಿ ಸೋಲು ಎದುರಾಗಿದೆ. ಸರ್ಫಾರಾಜ್ ಅವರ ಒಟ್ಟು ಬ್ಯಾಟಿಂಗ್ ಸರಾಸರಿ 36.39 ಆಗಿದ್ದರೆ, ನಾಯಕನಾಗಿ 25.81ರಷ್ಟು ಕೆಳ ಮಟ್ಟದ ಎವರೇಜ್ ಹೊಂದಿದ್ದಾರೆ. ಹಾಗೆಯೇ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಪಾಕ್ ಏಳರಷ್ಟು ಕೆಳಸ್ಥಾನದಲ್ಲಿದೆ.
Advertisement