Advertisement

ಪಾಕ್‌ ಟೆರರಿಸ್ತಾನ; ಉಗ್ರರನ್ನು ತಯಾರಿಸಿ ರಫ್ತು ಮಾಡುತ್ತಿರುವ ದೇಶ

07:48 AM Sep 23, 2017 | Team Udayavani |

ವಿಶ್ವಸಂಸ್ಥೆ: “”ಪಾಕಿಸ್ತಾನ ಈಗ “ಟೆರರಿಸ್ತಾನ’ ಆಗಿದೆ. ಈ ದೇಶ ಭಯೋತ್ಪಾದಕರನ್ನು ಸೃಷ್ಟಿಸಿ ಬೇರೆ ಕಡೆಗೆ ರಫ್ತು ಮಾಡುತ್ತಿದೆ” ಎಂದು ಭಾರತ ವಿಶ್ವಸಂಸ್ಥೆಯ ವೇದಿಕೆಯಲ್ಲಿ ನೆರೆಯ ದೇಶಕ್ಕೆ ಖಡಕ್ಕಾಗಿಯೇ ಉತ್ತರ ನೀಡಿದೆ.

Advertisement

ಕಾಶ್ಮೀರದಲ್ಲಿ ವಿಶೇಷ ಪ್ರತಿನಿಧಿ ನೇಮಿಸಬೇಕೆಂಬ ಪಾಕ್‌ ಪ್ರಧಾನಿ ಶಾಹಿದ್‌ ಖಖಾನ್‌ ಅಬ್ಟಾಸಿ ಕುಚೋದ್ಯಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ವಿಶ್ವಸಂಸ್ಥೆಯಲ್ಲಿರುವ ಭಾರತದ ಮೊದಲ ಕಾರ್ಯದರ್ಶಿ ಈನ ಮ್‌ ಗಂಭೀರ್‌, “ಪಾಕಿಸ್ತಾನ ಒಸಾಮ ಬಿನ್‌ ಲಾಡೆನ್‌ನಂಥ ವಿಶ್ವದ ನಂ.1 ಉಗ್ರನಿಗೆ ಆಶ್ರಯ ನೀಡಿದ್ದೂ ಅಲ್ಲದೆ, ಹಲವಾರು ಭಯೋತ್ಪಾದಕರನ್ನು ಇಂದಿಗೂ ಸಾಕಿ ಬೆಳೆಸುತ್ತಿದೆ.
ಉರ್ದುವಿನಲ್ಲಿ ಪಾಕ್‌ ಎಂದರೆ ಶುದ್ಧ ಎಂದರ್ಥ ಪಾಕಿಸ್ತಾನ ಈಗ ಶುದ್ಧ ಭಯೋತ್ಪಾದನೆಯ ನೆಲ’ ಎಂದು ಹೇಳಿದರು.

“ಆ ದೇಶದ ಪುಟ್ಟ ಇತಿಹಾಸ ನೋಡಿದರೆ ಭಯೋತ್ಪಾದನೆ ಮತ್ತು ಪಾಕಿಸ್ತಾನ ಒಂದಕ್ಕೊಂದು ಸಂಯೋಜಿತಗೊಂಡಿವೆ. ಈಗಂತೂ ಆ ದೇಶ ನೈಜ ಭಯೋತ್ಪಾದಕರ ನೆಲೆವೀಡು ಆದಂತಾಗಿದೆ. ಇದರಿಂದಾಗಿಯೇ ಈ ದೇಶವನ್ನು “ಟೆರರಿಸ್ತಾನ’ವೆಂದು ಕರೆಯಬಹುದು. ಅದು ಉಗ್ರರ ಉತ್ಪಾದನೆಯ ದೊಡ್ಡ ಕೈಗಾರಿಕೆಯಾಗಿದೆ. ಜಾಗತಿಕ ಭಯೋತ್ಪಾದನೆಗೆ ಬೇಕಾದ ಉಗ್ರರನ್ನು ಸೃಷ್ಟಿಸಿ ಕೊಡುತ್ತಿದೆ’ ಎಂದು ನೇರವಾಗಿಯೇ ಆರೋಪಿಸಿದ್ದಾರೆ. 

ಉಗ್ರರಿಗೆ ಪ್ರೋತ್ಸಾಹ: ಇದಷ್ಟೇ ಅಲ್ಲ, ಪಾಕಿಸ್ತಾನ ಭಯೋತ್ಪಾದಕರ ನಿಗ್ರಹ ನೀತಿಯೂ ಉಗ್ರರನ್ನು ಮುಖ್ಯವಾಹಿನಿಗೆ ತರುವ ಮತ್ತು ರಾಜಕೀಯಕ್ಕೆ ಬಳಸಿಕೊಳ್ಳುವ ಮಾದರಿಯಲ್ಲಿಯೇ ಇದೆ. ಇದಕ್ಕೆ ಉದಾಹರಣೆ ಜಾಗತಿಕ ಉಗ್ರ ಒಸಾಮ ಬಿನ್‌ ಲಾಡೆನ್‌. ಆತನನ್ನು ತನ್ನ ಮಿಲಿಟರಿ ಸೇನಾ ನೆಲೆಯ ಬಳಿಯನ್ನೇ ಸಾಕಿ ಸಲುಹಿತು. ಇನ್ನು, ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಹμàಜ್‌ ಸಯೀದ್‌ ಜಾಗತಿಕ ಉಗ್ರ ಎಂದು  ಘೋಷಿಸಲ್ಪಟ್ಟಿರುವವ. ಈತ ಇತರೆ ದೇಶಗಳಿಗೆ ಮಾರಕವಾಗಿದ್ದಾನೆ. ಇದೀಗ ರಾಜಕೀಯ ಪಕ್ಷ ಸ್ಥಾಪಿಸುವ ಬಗ್ಗೆ ಮಾತನಾಡುತ್ತಿದ್ದಾನೆ. ಉಗ್ರರಿಗೆ ಪಾಕಿಸ್ತಾನ ಪ್ರೋತ್ಸಾಹ ನೀಡುತ್ತಾ ಬಂದಿರುವುದಕ್ಕೆ ಇದಕ್ಕಿಂತ ಉತ್ತಮ ಸಾಕ್ಷಿ ಬೇಕಾಗಿಲ್ಲ ಎಂದು ತೀವ್ರವಾಗಿ ಟೀಕಾ ಪ್ರಹಾರ ನಡೆಸಿದರು. ಇದರ ಜತೆಗೆ ಪಾಕಿಸ್ತಾನ, ಉಗ್ರರ ಸೃಷ್ಟಿಗಾಗಿ ಬಿಲಿಯನ್‌ ಡಾಲರ್‌ಗಟ್ಟಲೇ ಹಣ ಸುರಿದಿದ್ದೂ ಅಲ್ಲದೇ, ಈಗ ಮಾಲಿನ್ಯ ಸೃಷ್ಟಿಸಿ, ಬಳಿಕ ಇದಕ್ಕೆ ತಕ್ಕ ದಂಡ ತೆರುವ ಬಗ್ಗೆ ಮಾತನಾಡುತ್ತಿದೆ ಎಂದು ಆರೋಪಿಸಿದರು.

ದಾಳಿಗೆ ಪ್ರತ್ಯುತ್ತರ ನೀಡುತ್ತೇವೆ: ಡಿಜಿಎಂಒ
“”ನೀವು ನಡೆಸುವ ಗುಂಡಿನ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವ ಅಧಿಕಾರ ನಮಗಿದೆ”. ಹೀಗೆಂದು, ಭಾರತದ ಡಿಜಿಎಂಒ ಪಾಕಿಸ್ತಾನದ ಡಿಜಿಎಂಒಗೆ ಕಟ್ಟುನಿಟ್ಟಿನ ಉತ್ತರ ನೀಡಿದ್ದಾರೆ. ಎಲ್‌ ಓಸಿಯಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಬಗ್ಗೆ ನಡೆದ ಫೋನ್‌ ಸಂಭಾಷಣೆಯಲ್ಲಿ ಈ ಅಂಶ ಪ್ರಸ್ತಾಪಿಸಲಾಗಿದೆ. ಬಿಎಸ್‌ಎಫ್ ಮತ್ತು ಇತರ ಭಾರತೀಯ ಪಡೆಗಳ ದಾಳಿ ನಡೆಸುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದಾಗ ಭಾರತದ ಡಿಜಿಎಂಒ ತಿರುಗೇಟು ನೀಡಿ, ಉಗ್ರರ ಒಳನುಸುಳುವಿಕೆ ಹೆಚ್ಚಾಗಿದೆ ಎಂದು ಹೇಳಿದರು. ಈ ನಡುವೆ ಇಸ್ಲಾಮಾಬಾದ್‌ನಲ್ಲಿ ಪಾಕ್‌ ವಿದೇಶಾಂಗ ಇಲಾಖೆ ಭಾರತದ ಹೈಕಮಿಷನರ್‌ ಗೌತಮ್‌ ಬಂಬಾವೆ ಅವರನ್ನು ಕರೆಸಿ ಬಿಎಸ್‌ಎಫ್ ಯೋಧರ ಗುಂಡಿನಿಂದ ಆರು ಮಂದಿ ನಾಗರಿಕರ ಹತ್ಯೆಯಾಗಿದೆ ಎಂದು ಆರೋಪಿಸಿ, ಪ್ರತಿಭಟನೆ ವ್ಯಕ್ತಪಡಿಸಿದೆ.

Advertisement

ಈನಂ ಗಂಭೀರ್‌ ಯಾರು?
ನವದೆಹಲಿ ಮೂಲದ ಈನಂ ಗಂಭೀರ್‌ 2005ನೇ ಬ್ಯಾಚ್‌ ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್‌) ಅಧಿಕಾರಿ. ದೆಹಲಿ ವಿವಿ ವ್ಯಾಪ್ತಿಯ ಹಿಂದೂ ಕಾಲೇಜಿನಿಂದ ಗಣಿತ ಶಾಸ್ತ್ರದಲ್ಲಿ ಪದವೀಧರೆ. ಜತೆಗೆ ಜಿನೀವಾ ವಿವಿಯಿಂದಲೂ ಆಕೆ ಪದವಿ ಪಡೆದಿದ್ದಾರೆ. ಐಎಫ್ಎಸ್‌ ಸೇವೆಯ ಆರಂಭದಲ್ಲಿ ಅವರು ಮೊದಲ ಬಾರಿಗೆ ಸ್ಪೇನ್‌ನ ಮ್ಯಾಡ್ರಿಡ್‌ನ‌ಲ್ಲಿ ವೃತ್ತಿ ಆರಂಭಿಸಿದ್ದರು. ಅಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಮೂರನೇ ಕಾರ್ಯದರ್ಶಿಯಾಗಿದ್ದರು. ಬಳಿಕ ದಕ್ಷಿಣ ಅಮೆರಿಕದ ಅರ್ಜೆಂಟೀನಾದಲ್ಲಿರುವ ಭಾರತೀಯ
ರಾಯಭಾರ ಕಚೇರಿಯಲ್ಲಿ ಎರಡನೇ ರ್ಯದರ್ಶಿಯಾಗಿದ್ದರು. ಸದ್ಯ ಅವರು ವಿಶ್ವಸಂಸ್ಥೆಯಲ್ಲಿದ್ದಾರೆ. ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸುಧಾರಣೆಗೆ ಸಂಬಂಧಿಸಿದ ಸಲಹಾ ಸಮಿತಿ, ಉಗ್ರ ನಿಗ್ರಹ ಮತ್ತು ಸೈಬರ್‌ ಸೆಕ್ಯುರಿಟಿ ವಿಚಾರಕ್ಕೆ ಸಂಬಂಧಿಸಿದ ಸಮಿತಿಗಳಲ್ಲಿದ್ದಾರೆ. ಜತೆಗೆ ವಿಶ್ವಸಂಸ್ಥೆ ಅನುಮೋದಿಸಿದ ವಿಶೇಷ ಸಮಿತಿ, ನಿಯೋಗದಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ.

ಆ ದೇಶವು ಉಗ್ರರನ್ನು ಬೀದಿ ಬೀದಿಗಳಲ್ಲಿ ರಾಜಾರೋಷವಾಗಿ ತಿರುಗಾಡಲು ಬಿಟ್ಟಿದೆ. ಈಗ ಇನ್ನೊಂದು ದೇಶಕ್ಕೆ ಉಪದೇಶ ಮಾಡಲು ಬರುತ್ತಿದೆ. ಒಂದು ವಿಫಲ ದೇಶದಿಂದ ಬುದ್ಧಿವಾದ ಹೇಳಿಸಿಕೊಳ್ಳುವ ಸ್ಥಿತಿ ಇಡೀ ಜಗತ್ತಿನಲ್ಲೇ ಬೇರಾವ ದೇಶಕ್ಕೂ ಬಂದಿಲ್ಲ.
ಈನಮ್‌ ಗಂಭೀರ್‌

Advertisement

Udayavani is now on Telegram. Click here to join our channel and stay updated with the latest news.

Next