Advertisement
ರಾಷ್ಟ್ರೀಯ ತನಿಖಾ ದಳ (ಎನ್ಐಎ) ಆಯೋಜಿಸಿದ್ದ ʼಭಯೋತ್ಪಾದನಾ ವಿರೋಧಿ ಸಮಾವೇಶ 2024’ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಅಮಿತ್ ಶಾ, ಭಯೋತ್ಪಾದಕ ದಾಳಿಗಳು ಮತ್ತು ಅವರ ಪಿತೂರಿಗಳನ್ನು ಎದುರಿಸಬೇಕಾದರೆ, ನಮ್ಮ ಯುವ ಅಧಿಕಾರಿಗಳು ಅತ್ಯುನ್ನತ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸಲು, ಮುಂದಿನ ದಿನಗಳಲ್ಲಿ ನಾವು ಅದನ್ನು ತರಬೇತಿಯ ಪ್ರಮುಖ ಭಾಗವಾಗಿ ಮಾಡುತ್ತೇವೆ ಎಂದಿದ್ದಾರೆ.ಮಾದರಿ ಎಟಿಎಸ್, ಎಸ್ಟಿಎಫ್ ರಚನೆ:
ಭಯೋತ್ಪಾದನೆ, ಭಯೋತ್ಪಾದಕರು ಮತ್ತು ಭಯೋತ್ಪಾದಕ ವ್ಯವಸ್ಥೆಯ ವಿರುದ್ಧದ ಹೋರಾಟ ಎಲ್ಲಾ ರಾಜ್ಯಗಳು ಮುನ್ನಡೆಸಬೇಕಾಗಿರುವುದರಿಂದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ಮತ್ತು ಕಾರ್ಯತಂತ್ರವು ಶೀಘ್ರದಲ್ಲೇ ಅನಾವರಣವಾಗಲಿದೆ. ಅದಕ್ಕಾಗಿ ಸರಕಾರವು ಮಾದರಿ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್) ಹಾಗೂ ಮಾದರಿ ವಿಶೇಷ ಟಾಸ್ಕ್ ಫೋರ್ಸ್ (ಎಸ್ಟಿಎಫ್) ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಳವಡಿಸಿ ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಡಲು ವೇದಿಕೆ ರೂಪಿಸಲಾಗುವುದು. ಗಡಿ ರಹಿತ ಮತ್ತು ಅದೃಶ್ಯ ಭಯೋತ್ಪಾದಕ ಬೆದರಿಕೆಗಳ ವಿರುದ್ಧ ಅವುಗಳ ಪರಿಣಾಮಕಾರಿಯಾಗಿ ಎದುರಿಸಲು ಅತ್ಯಾಧುನಿಕ ತಂತ್ರಜ್ಞಾನದ ಅಗತ್ಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಒತ್ತಿ ಹೇಳಿದ್ದಾರೆ.
Related Articles
Advertisement