Advertisement

ಟೆಸ್ಟ್‌ : ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ 8 ವಿಕೆಟ್‌ ಜಯ

11:52 PM Nov 30, 2021 | Team Udayavani |

ಚಿತ್ತಗಾಂಗ್‌ : ಆತಿಥೇಯ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದ ಪಾಕಿಸ್ಥಾನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Advertisement

ಗೆಲುವಿಗೆ 202 ರನ್‌ ಗಳಿಸಬೇಕಿದ್ದ ಪಾಕ್‌, ಅಂತಿಮ ದಿನವಾದ ಮಂಗಳವಾರ 2 ವಿಕೆಟಿಗೆ 203 ರನ್‌ ಬಾರಿಸಿತು. ಆರಂಭಿಕರಾದ ಅಬಿದ್‌ ಅಲಿ 91, ಅಬ್ದುಲ್ಲ ಶಫೀಕ್‌ 73 ರನ್‌ ಹೊಡೆದು ತಂಡಕ್ಕೆ ಭದ್ರ ಬುನಾದಿ ನಿರ್ಮಿಸಿದರು.

ಇವರಿಂದ ಮೊದಲ ವಿಕೆಟಿಗೆ 42.5 ಓವರ್‌ಗಳಿಂದ 151 ರನ್‌ ಒಟ್ಟುಗೂಡಿತು. ಅಜರ್‌ ಅಲಿ ಅಜೇಯ 24 ಹಾಗೂ ನಾಯಕ ಬಾಬರ್‌ ಆಜಂ ಅಜೇಯ 13 ರನ್‌ ಮಾಡಿ ತಂಡದ ಗೆಲುವು ಸಾರಿದರು.

ಇದನ್ನೂ ಓದಿ:ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ-330 ಮತ್ತು 157. ಪಾಕಿಸ್ಥಾನ-286 ಮತ್ತು 2 ವಿಕೆಟಿಗೆ 203. ಪಂದ್ಯಶ್ರೇಷ್ಠ: ಅಬಿದ್‌ ಅಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next