Advertisement

SL vs BAN; ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಜಯಭೇರಿ

01:08 AM Apr 04, 2024 | Team Udayavani |

ಚತ್ತೋಗ್ರಾಮ್‌: ಆತಿಥೇಯ ಬಾಂಗ್ಲಾದೇಶ ವಿರು ದ್ಧದ ದ್ವಿತೀಯ ಟೆಸ್ಟ್‌ ಪಂದ್ಯವನ್ನು 192 ರನ್ನುಗಳಿಂದ ಗೆದ್ದ ಶ್ರೀಲಂಕಾ, 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ.

Advertisement

ಬಾಂಗ್ಲಾದಲ್ಲಿ ತನ್ನ ಅಜೇಯ ಟೆಸ್ಟ್‌ ದಾಖಲೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಗೆಲುವಿಗೆ 511 ರನ್ನುಗಳ ಕಠಿನ ಗುರಿ ಪಡೆದಿದ್ದ ಬಾಂಗ್ಲಾದೇಶ 4ನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ ಕಳೆದುಕೊಂಡು 268 ರನ್‌ ಗಳಿಸಿತ್ತು. ಅಂತಿಮ ದಿನಾ ಆಟ ಮುಂದುವರಿಸಿ 318ಕ್ಕೆ ಆಲೌಟ್‌ ಆಯಿತು. ಮೆಹಿದಿ ಹಸನ್‌ ಮಿರಾಜ್‌ 81 ರನ್‌ ಮಾಡಿ ಅಜೇಯರಾಗಿ ಉಳಿದರು. ಕಮಿಂಡು ಮೆಂಡಿಸ್‌ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಆಟಗಾರನಾಗಿ ಮೂಡಿಬಂದರು.

ಮೊದಲ ಟೆಸ್ಟ್‌ ಪಂದ್ಯವನ್ನು ಶ್ರೀಲಂಕಾ 328 ರನ್ನುಗಳಿಂದ ಜಯಿಸಿತ್ತು. ಇದಕ್ಕೂ ಮೊದಲು ಟಿ20 ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next