Advertisement

BANvsSL; ಹೋರಾಟ ಮುಂದುವರಿಸಿದ ಬಾಂಗ್ಲಾ; ಸೋಲು ಖಚಿತ

07:59 PM Apr 02, 2024 | Team Udayavani |

ಚತ್ತೋಗ್ರಾಮ್‌: ಪ್ರವಾಸಿ ಶ್ರೀಲಂಕಾ ಎದುರಿನ ದ್ವಿತೀಯ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶ ಬ್ಯಾಟಿಂಗ್‌ ಹೋರಾಟವೊಂದನ್ನು ನಡೆಸಿದರೂ ಸೋಲನ್ನು ಖಚಿತಪಡಿಸಿದೆ. ಗೆಲುವಿಗೆ 511 ರನ್ನುಗಳ ಕಠಿನ ಗುರಿ ಪಡೆದಿದ್ದು, 4ನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ ನಷ್ಟಕ್ಕೆ 268 ರನ್‌ ಗಳಿಸಿದೆ.

Advertisement

353 ರನ್ನುಗಳ ಬೃಹತ್‌ ಮುನ್ನಡೆ ಬಳಿಕ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಶ್ರೀಲಂಕಾ, ದ್ವಿತೀಯ ಸರದಿಯಲ್ಲಿ 7ಕ್ಕೆ 157 ರನ್‌ ಗಳಿಸಿ ಡಿಕ್ಲೇರ್‌ ಮಾಡಿತು. ಚೇಸಿಂಗ್‌ ವೇಳೆ ಬಾಂಗ್ಲಾ ಮೊದಲ ಸರದಿಗಿಂತಲೂ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನೇನೋ ನೀಡಿದೆ, ಆದರೆ ಆತಿಥೇಯರ ಮುಂದೆ ಸೋಲಿನಿಂದ ಪಾರಾಗುವ ಯಾವುದೇ ಮಾರ್ಗ ಗೋಚರಿಸುತ್ತಿಲ್ಲ.

ಮೊಮಿನುಲ್‌ ಹಕ್‌ 50 ರನ್‌ ಮಾಡಿದರು. ಮೆಹಿದಿ ಹಸನ್‌ ಮಿರಾಜ್‌ 44 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಲಹಿರು ಕುಮಾರ, ಪ್ರಭಾತ್‌ ಜಯಸೂರ್ಯ ಮತ್ತು ಕಮಿಂಡು ಮೆಂಡಿಸ್‌ ತಲಾ 2 ವಿಕೆಟ್‌ ಉರುಳಿಸಿದರು. ನಾಳೆ ಪಂದ್ಯದ ಅಂತಿಮ ದಿನ.

ಮೊದಲ ಟೆಸ್ಟ್‌ ಪಂದ್ಯವನ್ನು 328 ರನ್ನುಗಳಿಂದ ಗೆದ್ದ ಶ್ರೀಲಂಕಾ 1-0 ಮುನ್ನಡೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next