ಇಸ್ಲಾಮಾಬಾದ್: ”1960ರ ಇಂಡಸ್ ವಾಟರ್ ಒಪ್ಪಂದಕ್ಕೆ ಭಾರತ ಬದ್ಧವಾಗಿರುವಂತೆ ನೋಡಿಕೊಳ್ಳಬೇಕು” ಎಂದು ಪಾಕಿಸ್ಥಾನ ವಿಶ್ವ ಬ್ಯಾಂಕ್‌ಗೆ ಪುನಃ ಪತ್ರ ಬರೆದಿದೆ.
ಕೃಷ್ಣಗಂಗಾ ಜಲ ವಿದ್ಯುತ್ ಯೋಜನೆಯ ನಿರ್ಮಾಣ ಕಾಮಗಾರಿಯನ್ನು ಭಾರತ ಮುಗಿಸಿದ್ದು ಇದರ ವಿದ್ಯುತ್ ಉತ್ಪಾದನಾ ಘಟಕದ ಕಾರ್ಯಾರಂಭವು ಅಂತಿಮ ಹಂತದಲ್ಲಿರುವ ವರದಿಗಳು ಪ್ರಕಟವಾಗಿರುವುದನ್ನು ಅನುಸರಿಸಿ ಪಾಕಿಸ್ಥಾನ ವಿಶ್ವ ಬ್ಯಾಂಕಿಗೆ ತನ್ನ ಒತ್ತಡ ತಂತ್ರದ ಅಂಗವಾಗಿ ಪತ್ರಬರೆದಿರುವುದಾಗಿ ತಿಳಿಯಲಾಗಿದೆ.
ಆದರೆ ಕೃಷ್ಣಗಂಗಾ ಯೋಜನೆಯ ನಿರ್ಮಾಣದ ಸಲುವಾಗಿ ಭಾರತಕ್ಕೆ ಅಂತಾರಾಷ್ಟ್ರೀಯ ಸಂಧಾನ ನ್ಯಾಯಾಲಯ, ವಿಶ್ವ ಬ್ಯಾಂಕ್ ಮತ್ತು ಅಲಿಪ್ತ ಪರಿಣತರು ಕಾನೂನು ಹಸಿರು ನಿಶಾನೆಯನ್ನು ತೋರಿದ್ದರಿಂದಲೇ ಕಾಮಗಾರಿ ಆರಂಭಗೊಂಡು ಈಗ ಮುಗಿತಾಯದ ಹಂತವನ್ನು ತಲುಪಿದೆ ಎನ್ನುವುದು ಗಮನಾರ್ಹ.
ಕೃಷ್ಣಗಂಗಾ ಯೋಜನೆಯ ಬಗ್ಗೆ ಇಸ್ಲಾಮಾಬಾದ್ ವಿಶ್ವ ಬ್ಯಾಂಕಿನ ಉಪಾಧ್ಯಕ್ಷರಿಗೆ ಪತ್ರಬರೆದು “ತನ್ನ ಹೊಣೆಗಾರಿಕೆಯನ್ನು ಕಂಡುಕೊಳ್ಳುವಂತೆ’ ಕೇಳಿಕೊಂಡಿದೆ.
ಇಂಡಸ್ ವಾಟರ್ ಒಪ್ಪಂದದಡಿ ವಿಶ್ವ ಬ್ಯಾಂಕ್, ಭಾರತ ಮತ್ತು ಪಾಕಿಸ್ಥಾನದ ನಡುವೆ ಸಂಧಾನಕಾರ ಸಂಸ್ಥೆಯಾಗಿದ್ದು ಸುಮಾರು 9 ವರ್ಷಗಳ ಸುದೀರ್ಘ ಅವಧಿಯಲ್ಲಿ ಅದು ಉಭಯ ದೇಶಗಳ ನಡುವೆ ಚೌಕಾಶಿ ಮಾತುಕತೆಗೆ ನೆರವಾಗಿದೆ.