Advertisement

ಪೇಜಾವರ  ಶ್ರೀಗಳದ್ದು  ಸಲಹೆ, ಟೀಕೆಯಲ್ಲ: ಡಿವಿಎಸ್‌

06:20 AM Jun 05, 2018 | Team Udayavani |

ಹಾಸನ: “ಪೇಜಾವರ ಶ್ರೀಗಳು ಕೇಂದ್ರ ಸರ್ಕಾರದ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿರುವುದನ್ನು ಟೀಕೆ, ಅಸಮಾಧಾನ ಎಂದು ಪರಿಗಣಿಸುವುದಿಲ್ಲ. ಅವರ ಸಲಹೆ, ಸೂಚನೆ ಎಂದು ಪರಿಗಣಿಸಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಪ್ರಯತ್ನಿಸುತ್ತೇವೆ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕಳೆದ ನಾಲ್ಕು ವರ್ಷಗಳ ಸಾಧನೆಯ ಪಟ್ಟಿಯನ್ನು ಜನ ಸಾಮಾನ್ಯರ ಮುಂದೆ ಮಂಡಿಸಿ ಅವರಿಂದ  ಮತ್ತಷ್ಟು  ಸಲಹೆ ಸೂಚನೆಗಳನ್ನು ಪಡೆದು ಕಾರ್ಯೋನ್ಮುಖರಾಗಲು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಹಾಗಾಗಿ ಪಕ್ಷದ ಎಲ್ಲಾ ಮುಖಂಡರೂ ಅವರವರ  ವ್ಯಾಪ್ತಿಯಲ್ಲಿ  ಸರ್ಕಾರದ ಸಾಧನೆ, ಚುನಾವಣೆಯ ಸಂದರ್ಭದಲ್ಲಿ  ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದ ವಿವರಗಳನ್ನುಮಾಧ್ಯಮಗಳ ಮೂಲಕ ಜನ ಸಾಮಾನ್ಯರಿಗೆ ತಲಪಿಸುತ್ತಿದ್ದಾರೆ. ಹಾಗೆಯೇ ಪೇಜಾವರ ಶ್ರೀಗಳಿಂದಲೂ ಸರ್ಕಾರದ ಮುಂದಿನ ನಡೆ ಹೇಗಿರಬೇಕೆಂಬ  ಸೂಚನೆ ಬಂದಿದೆ. ಅದನ್ನು ಸಕಾರಾತ್ಮಕವಾಗಿ ಪರಿಣಿಸುತ್ತೇವೆ ಎಂದು ಹೇಳಿದರು.

ಹಣ್ಣು ಮಾಗಿದೆ , ಬೀಳುವುದ ಕಾಯ್ತಿದ್ದೇವೆ: ಸಮ್ಮಿಶ್ರ ಸರ್ಕಾರಕ್ಕೆ ನಿಪ ವೈರಸ್‌ ಹರಡುತ್ತಿದ್ದು, ಈಗಾಗಲೇ ಮಾವಿನ ಹಣ್ಣಿನಂತೆ ಸಮ್ಮಿಶ್ರ ಸರ್ಕಾರ ಮಾಗಿದೆ. ಯಾವ ಸಂದರ್ಭದಲ್ಲಾದರೂ ಕೆಳಗೆ ಬೀಳಬಹುದು. ಆನಂತರ ಬಿಜೆಪಿ ಸರ್ಕಾರ ರಚನೆ ಮಾಡಿ ಉತ್ತಮ ಆಡಳಿತ ನೀಡಲಿದೆ ಎಂದು ಡಿ.ವಿ.ಸದಾನಂದಗೌಡ  ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next