Advertisement

CM Siddaramaiah: ನಕ್ಸಲ್‌ ಚಟುವಟಿಕೆ ನಿಗ್ರಹಿಸಲು ವಿಕ್ರಂ ಗೌಡ ಎನ್‌ಕೌಂಟರ್‌

12:43 AM Nov 21, 2024 | Team Udayavani |

ಬೆಂಗಳೂರು: ವಿಕ್ರಂ ಗೌಡ ಹಲವು ನಕ್ಸಲ್‌ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವನಾಗಿದ್ದು, ನಕ್ಸಲ್‌ ಚಟುವಟಿಕೆ ನಿಗ್ರಹಿಸಲು ಆತನನ್ನು ಎನ್‌ಕೌಂಟರ್‌ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ವಿಕ್ರಂ ಗೌಡಗೆ ಶರಣಾಗುವಂತೆ ಆದೇಶ ನೀಡಲಾಗಿತ್ತು. ಆದರೆ ಶರಣಾಗಿರಲಿಲ್ಲ. ವಿಕ್ರಂನನ್ನು ಹಿಡಿದವರಿಗೆ ಕೇರಳ ಸರಕಾರ 25 ಲಕ್ಷ ರೂ. ಹಾಗೂ ಕರ್ನಾಟಕ ಸರಕಾರ 5 ಲಕ್ಷ ರೂ. ಬಹುಮಾನವನ್ನು ಘೋಷಿಸಿತ್ತು. ನಕ್ಸಲ್‌ ಚಟುವಟಿಕೆ ನಿಗ್ರಹಿಸಲು ಎನ್‌ಕೌಂಟರ್‌ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.

ಅಪಾಯಕಾರಿ ಶಸ್ತ್ರಾಸ್ತ್ರಗಳಿದ್ದವು
ಪ್ರಗತಿಪರ ಚಿಂತಕರು ವಿಕ್ರಂ ಗೌಡ ಸಾವಿನ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ| ಜಿ. ಪರಮೇಶ್ವರ್‌, ವಿಕ್ರಂ ಗೌಡ ಬಳಿ ಅಟೋಮ್ಯಾಟಿಕ್‌ ಮಷಿನ್‌ಗನ್‌ ಸೇರಿದಂತೆ ಅಪಾಯಕಾರಿ ಶಸ್ತ್ರಾಸ್ತ್ರಗಳಿದ್ದವು. ಪೊಲೀಸರು ಶೂಟ್‌ ಮಾಡದಿದ್ದರೆ, ಪೊಲೀಸರನ್ನೇ ವಿಕ್ರಂ ಶೂಟ್‌ ಮಾಡುವ ಸಾಧ್ಯತೆ ಇತ್ತು. ಅವರ ಮೇಲೆ 60ಕ್ಕೂ ಹೆಚ್ಚು ಕೇಸ್‌ಗಳು ಕೂಡ ಇದ್ದವು. ಇದು ನನಗೆ ಬಂದಿರುವ ಮಾಹಿತಿ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next