Advertisement

ಪೈ ಇಂಟರ್‌ ನ್ಯಾಷನಲ್‌: 56,100 ಗ್ರಾಹಕರಿಗೆ ಬಹುಮಾನ

10:34 PM Jun 02, 2019 | Lakshmi GovindaRaj |

ಬೆಂಗಳೂರು: ಪೈ ಇಂಟರ್‌ನ್ಯಾಷನಲ್‌ ಸೇಲ್‌ ತ್ರೀ ಸೀಸನ್‌ ಲಕ್ಕಿ ಡ್ರಾನಲ್ಲಿ 6,100 ಅದೃಷ್ಟಶಾಲಿ ಗ್ರಾಹಕರು ಒಟ್ಟು 6 ಕೋಟಿ ಮೌಲ್ಯದ ಬಹುಮಾನಗಳನ್ನು ಗೆದ್ದರು. ಮೊದಲ ಬಹುಮಾನ ನೂರು ಜನಕ್ಕೆ 50 ಸಾವಿರ ರೂ.,ದ್ವಿತೀಯ ಬಹುಮಾನ ಒಂದು ಸಾವಿರ ಜನಕ್ಕೆ 2500ಸಾವಿರ ರೂ. ಮತ್ತು ತೃತೀಯ ಬಹುಮಾನ 5 ಸಾವಿರ ಜನಕ್ಕೆ 1 ಸಾವಿರ ರೂ.ಮೊತ್ತದ ವಸ್ತುಗಳನ್ನು ಪೈ ಸೆಂಟರ್‌ಗಳಲ್ಲಿ ಉಚಿತವಾಗಿ ಖರೀದಿಸಬಹುದಾಗಿದೆ.

Advertisement

ಉಳಿದಂತೆ 50 ಸಾವಿರ ಜನ 8ನೇ ಹಂತದವರೆಗೆ ಟೀಶರ್ಟ್‌, ಬ್ಯಾಗ್‌, ಗಡಿಯಾರ ಸೇರಿ ವಿವಿಧ ಶಾಪಿಂಗ್‌ ಕೂಪನ್‌ ಪಡೆದರು. ಇವುಗಳ ಜತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೆಲ ಅದೃಷ್ಟಶಾಲಿಗಳು ವಿಶೇಷ ಬಹುಮಾನ ಪಡೆದರು. ಸೇಲ್‌ ತ್ರೀ ಸೀಸನ್‌ ಎನ್ನುವ ಪರಿಕಲ್ಪನೆಯೊಂದಿಗೆ ಗ್ರಾಹಕರಿಗೆ ಬಂಪರ್‌ ಬಹುಮಾನಗಳನ್ನು ನಿಗದಿಪಡಿಸಿ 10ಲಕ್ಷ ಗ್ರಾಹಕರಿಗೆ ಕೂಪನ್‌ಗಳನ್ನು ವಿತರಿಸಲಾಗಿತ್ತು.

ಅದರಂತೆ ಈಗ ಲಕ್ಕಿ ಡ್ರಾ ನಡೆದಿದ್ದು, ಒಟ್ಟು 56,100 ಗ್ರಾಹಕರಿಗೆ ಬಹುಮಾನಗಳನ್ನು ಪೈ ಇಂಟರ್‌ನ್ಯಾಷನಲ್‌ ವಿತರಿಸಿದೆ. ನಗರದ ಸೆಂಟ್ರಲ್‌ ಕಾಲೇಜು ಆವರಣದಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ನಡೆದ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಅದೃಷ್ಟಶಾಲಿ ಕೂಪನ್‌ ಸಂಖ್ಯೆಗಳನ್ನು ಪುಟ್ಟ ಮಕ್ಕಳಿಂದ ಪಾರದರ್ಶಕವಾಗಿ ಬಿಡುಗಡೆ ಮಾಡಲಾಯಿತು.

ಲಕ್ಕಿ ಡ್ರಾಗೂ ಮುನ್ನ ಪೈ ಇಂಟರ್‌ ನ್ಯಾಷನಲ್‌ ಎಲೆಕ್ಟ್ರಾನಿಕ್‌ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್‌ ಪೈ ಮಾತನಾಡಿ, ಉಳಿದ ಕಂಪನಿಗಳಿಗಿಂತ ಪೈ ಸಂಸ್ಥೆ ಗ್ರಾಹಕರ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬಂದಿದೆ. ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ವಸ್ತುಗಳನ್ನು ನೀಡುತ್ತಿದ್ದೇವೆ. ಹೀಗಾಗಿಯೇ ನಮ್ಮ ಬಳಿ ವ್ಯಾಪಾರ ಮಾಡುವವರು ನಿರಂತರವಾಗಿ ನಮ್ಮಲ್ಲೇ ವಸ್ತುಗಳನ್ನು ಖರೀದಿಸುತ್ತಿದ್ದಾರೆ ಎಂದು ಹೇಳಿದರು.

ಗುಣಮಟ್ಟದ ಉತ್ಪನ್ನಗಳಿಗೆ ನಾವು ಆದ್ಯತೆ ನೀಡುತ್ತಿದ್ದೇವೆ. 2000ರಲ್ಲಿ ಕರ್ನಾಟಕದ ಇಂದಿರಾನಗರದಲ್ಲಿ ಪ್ರಾರಂಭವಾದ ಪೈ ಸೆಂಟರ್‌ ಇಂದು ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ ಪೈ ಇಂಟರ್‌ನ್ಯಾಷನಲ್‌ನ ಮಳಿಗೆಗಳಿವೆ. ಪ್ರಸ್ತುತ 2020ರ ವೇಳೆಗೆ 2,500 ಕೋಟಿ ವಹಿವಾಟಿನ ಗುರಿಯನ್ನು ಹೊಂದಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ 200 ಪೈ ಸೆಂಟರ್‌ಗಳನ್ನು ತೆರೆಯಲಿದ್ದೇವೆ. 198 ಮೊಬೈಲ್‌ ಸೆಂಟರ್‌ಗಳನ್ನು ಪ್ರಾರಂಭಿಸಿದ್ದು, ಜನಸ್ನೇಹಿಯಾಗಿ ನಡೆಸಲಾಗುತ್ತಿದೆ ಎಂದರು.

Advertisement

ಈ ಬಾರಿ ಸೇಲ್‌ ತ್ರೀ ಸೀಸನ್‌ ಸೇಲ್‌ನಲ್ಲಿ 56,100 ಬಹುಮಾನಗಳನ್ನು ನಿಗದಿ ಪಡಿಸಿ ಒಟ್ಟು 10ಲಕ್ಷ ಕೂಪನ್‌ಗಳನ್ನು ಮುದ್ರಿಸಲಾಗಿದೆ. ಅವುಗಳಲ್ಲಿ 9,98,240 ಕೂಪನ್‌ಗಳನ್ನು ನಮ್ಮ ಮಳಿಗೆಗಳಲ್ಲಿ ಖರೀದಿ ಮಾಡಿದ ಗ್ರಾಹಕರಿಗೆ ವಿತರಿಸಲಾಗಿತ್ತು. ಪ್ರಸ್ತುತ ಪಾರದರ್ಶಕ ರೀತಿಯಲ್ಲಿ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಈ ಲಕ್ಕಿ ಡ್ರಾ ಮುಂದುವರೆಯಲಿದ್ದು, ಇನ್ನು ಈ ಬಾರಿ ಲಕ್ಕಿ ಡ್ರಾ ವಿಜೇತರ ಹೆಸರು, ವಿಳಾಸ ಹಾಗೂ ಬಹುಮಾನದ ಮಾಹಿತಿಗಳು ಎಲ್ಲ ಪೈ ಇಂಟರ್‌ನ್ಯಾಷನಲ್‌ ಮಳಿಗೆಗಳಲ್ಲಿ ವåತ್ತು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತೇವೆ. ಎಲ್ಲ ವಿಜೇತರಿಗೆ ಬಹುಮಾನ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ನಮ್ಮ ಸಂಸ್ಥೆಯು ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡಿದ್ದು, 2018ರಲ್ಲಿ 20 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌ಗಳನ್ನು ವಿತರಿಸಲಾಗಿದೆ. ಈ ವರ್ಷ ಪರಿಸರವನ್ನು ಉಳಿಸುವ ಉದ್ದೇಶದಿಂದ 1ಕೋಟಿ ಸಸಿಗಳನ್ನು ನೆಡಲಿದ್ದೇವೆ. ಸಸಿಗಳನ್ನು ನೆಡುವುದರ ಜೊತೆಗೆ ಅವುಗಳ ಸಂಪೂರ್ಣ ಕಾಳಜಿಯನ್ನು ಸಂಸ್ಥೆಯೇ ವಹಿಸಿಕೊಳ್ಳಲಿದೆ ಎಂದು ವಿವರಿಸಿದರು.

ನೂರಾರು ಕಂಪನಿಗಳು ಬಂದರೂ ನಮ್ಮಲ್ಲಿ ವ್ಯಾಪಾರ ಮಾಡುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿಲ್ಲ. ಇದಕ್ಕೆ ನಾವು ಗುಣಮಟ್ಟದ ವಸ್ತುಗಳನ್ನು ನೀಡುತ್ತಿರುವುದೇ ಕಾರಣ. ಕಂಪನಿ ವ್ಯಾಪಾರದ ಜತೆಗೆ ಸಾಮಾಜಿಕ ಜವಾಬ್ದರಿಯನ್ನು ಮುಂದುವರೆಸಿಕೊಂಡು ಬರುತ್ತಿದೆ.
-ರಾಜ್‌ಕುಮಾರ್‌ ಪೈ, ಪೈ ಇಂಟರ್‌ ನ್ಯಾಷನಲ್‌ ಎಲೆಕ್ಟ್ರಾನಿಕ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next