Advertisement

ಪಡುಬಿದ್ರಿ: ಅಪಾಯಕಾರಿ ಒಳಚರಂಡಿ

11:33 PM May 14, 2020 | Sriram |

ಪಡುಬಿದ್ರಿ: ಮಾರುಕಟ್ಟೆ ಪ್ರವೇಶಿಸುವ ಜನನಿಬಿಡ ರಸ್ತೆ ಬಳಿಯೇ ಹೆದ್ದಾರಿ ಚತುಷ್ಪಥದೆಡೆಯ ಸರ್ವಿಸ್‌ ರಸ್ತೆಗೆ ತಾಗಿರುವ ಒಳಚರಂಡಿ ಸದ್ಯ ಅಪಾಯಕಾರಿ ಸ್ಥಿತಿಯಲ್ಲೇ ಮುಂದುವರಿದಿದೆ. ರಿಕ್ಷಾಸಹಿತ ಅತ್ತಿತ್ತ ನಡೆದಾಡುವ ಹಲವಾರು ಮಂದಿ ಈ ಗುಂಡಿಯೊಳಗೆ ಬಿದ್ದು ಗಾಯಗೊಂಡು ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿಯೂ ಚಿಕಿತ್ಸೆ ಪಡೆದಿದ್ದಾರೆ.

Advertisement

ಆರೇಳು ತಿಂಗಳಿಂದ ಬಾಯ್ದೆರೆದಿರುವ ಈ ಒಳ ಚರಂಡಿಯು ಇನ್ನೂ ನಿರ್ಮಾಣ ಹಂತದಲ್ಲೇ ಇದೆ. ಕಬ್ಬಿಣದ ರಾಡ್‌ಗಳನ್ನು ಕಟ್ಟಿಡಲಾಗಿದೆ. ಇದನ್ನು ಅಪರ ಜಿಲ್ಲಾಧಿಕಾರಿಗಳ ಗಮನಕ್ಕೂ ಈ ಹಿಂದೆಯೇ ತರಲಾಗಿದೆ. ಆದರೂ ಹೆದ್ದಾರಿ ಗುತ್ತಿಗೆಯನ್ನು ಹೊಂದಿರುವ ನವಯುಗ ನಿರ್ಮಾಣ ಕಂಪೆನಿಗೆ ಇನ್ನೂ ಇದರ ಅಪಾಯದ ಅರಿವಾದಂತಿಲ್ಲ.

ಬರುತ್ತಿರುವ ಮಳೆಗಾಲಕ್ಕೆ ಮೊದಲೇ ಈ ಚರಂಡಿಯ ಕಾಮಗಾರಿ ಮುಕ್ತಾಯವಾಗಬೇಕು. ತಾನೂ ಗಮನಿಸಿದ್ದೇನೆ. ಅಪರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮಗದೊಮ್ಮೆ ಒತ್ತಡವನ್ನು ಹೇರುವುದಾಗಿ ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಹೇಳಿದ್ದಾರೆ.

ಈ ಕುರಿತಾಗಿ ಸೈಟ್‌ ಎಂಜಿನಿಯರ್‌ ಕಿರಣ್‌ಅವರನ್ನು ಮಾತನಾಡಿದಾಗ ಕಾಂಕ್ರೀಟ್‌ ಕಾಮಗಾರಿ ನಿರ್ವಹಿಸುವ ನವಯುಗ ತಂಡದ ಕಾರ್ಮಿಕರು ಉತ್ತರ ಪ್ರದೇಶ ಮುಂತಾದೆಡೆಗಳಿಗೆ ಕೊರೊನಾ ಮಹಾಮಾರಿಯಿಂದಾಗಿ ತೆರಳುವಂತಾಗಿದೆ. ತಮಗೀಗ ಈ ಕಾರ್ಯ ಪೂರ್ಣಗೊಳಿಸಲು ಕಾರ್ಮಿಕರ ಕೊರತೆಯಿದೆ.

ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ ಇಲ್ಲವಾದಲ್ಲಿ ಮಳೆಗಾಲಕ್ಕೆ ಮೊದಲು ಕಾಂಕ್ರೀಟ್‌ ಸ್ಲ್ಯಾಬ್‌ಗಳನ್ನಿರಿಸಿ ತಾತ್ಕಾಲಿಕವಾಗಿ ಮುಚ್ಚಿಬಿಡುತ್ತೇವೆ ಎಂದಿದ್ದಾರೆ.

Advertisement

ಅಂತೂ ಇಂತೂ ಮಳೆಗಾಲದೊಳಗೆ ಈ ಗುಂಡಿ ಯನ್ನು ಮುಚ್ಚದಿದ್ದರೆ ಇದೇ ಮರಣಗುಂಡಿಯೂ ಆಗಬಹುದೆಂದು ಸಾರ್ವಜನಿಕರು ಹೇಳತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next