Advertisement
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಆರ್.ಎಲ್.ಕಶ್ಯಪ್ (85) ಅವರು ಉತ್ತರಹಳ್ಳಿ ಸಮೀಪದ ಗುಬ್ಬಲಾಳದ ತಮ್ಮ ಸ್ವಗೃಹದಲ್ಲಿ ಬೆಳಗ್ಗೆ 10.30ಕ್ಕೆ ನಿಧನರಾದರು.
ಸಂಶೋಧನಾ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದ ಇವರು 350ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ. ಐವತ್ತು ಸಂಶೋಧನಾ ವಿದ್ಯಾರ್ಥಿಗಳಿಗೂ ಮಾರ್ಗದರ್ಶಿ ಆಗಿದ್ದರು.
Related Articles
Advertisement
ಕಶ್ಯಪ್ ಅವರ “ಋಗ್ವೇದವನ್ನು ಯಾಕೆ ಓದಬೇಕು” ಎಂಬ ಕೃತಿ ಸಾಹಿತ್ಯ ಲೋಕದಲ್ಲಿ ಬಹಳಷ್ಟು ಮೆಚ್ಚುಗೆ ಪಡೆದಿದೆ. ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರಕಟವಾಗಿದೆ. ಇವರು ರಚಿಸಿರುವ “ಋಗ್ವೇದದ ಅರ್ಥಾನುಸಂಧಾನ, “ಸೃಷ್ಟಿ ಹಾಗೂ ಮೃತ್ಯು ಸೂಕ್ತಗಳು, “ಸಂಕಲ್ಪದ ಅಧಿದೇವತೆ-ಅಗ್ನಿ, “ಆಧುನಿಕರಿಗಾಗಿ ವೇದ ಜ್ಞಾನ’ ಸೇರಿ ಹಲವು ಮಧ್ಯಮ ಗಾತ್ರದ ಪುಸ್ತಕಗಳು ವೇದಾಧ್ಯಯನಕ್ಕೆ ದಿಕ್ಸೂಚಿಯಂತಿವೆ. ಈಗಾಗಲೇ ಕನ್ನಡ, ತಮಿಳು, ತೆಲುಗು, ಮರಾಠಿ, ಮಲೆಯಾಳಂ ಭಾಷೆಗಳಲ್ಲಿ ಪ್ರಕಟಗೊಂಡಿವೆ.
ವೇದ ಜ್ಞಾನ ಸಂರಕ್ಷಣೆ, ಸಂಶೋಧನೆ ಹಾಗೂ ಪ್ರಸಾರಕ್ಕಾಗಿ ಡಾ.ಕಶ್ಯಪ್ ಅವರಿಗೆ “ಶ್ರೀ ಅರೋಬಿಂದೊ ಕಪಾಲಿ ಶಾಸ್ತ್ರಿ ವೇದಸಂಸ್ಕೃತ ಸಂಸ್ಥೆ’ ಯನ್ನು ಸ್ಥಾಪಿಸಿದ್ದಾರೆ. ಒಂದು ದಶಮಾನದಲ್ಲಿ 2 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ವೇದಾಸಕ್ತರ ಕೈಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಈ ಎಲ್ಲ ಕೆಲಸಗಳಿಗೆ ತಮ್ಮದೇ ಆದ ಕೋಟ್ಯಂತರ ರೂ.ವಿನಿಯೋಗಿಸಿದ್ದರು. ವೇದ ಮತ್ತು ತಂತ್ರಜ್ಞಾನ ಕ್ಷೇತ್ರಗಳೆರಡರಲ್ಲೂ ಅಪಾರ ಒಳನೋಟದಿಂದ ಕೂಡಿರುವ ಗ್ರಂಥರಾಶಿಯನ್ನು ರಚಿಸಿ ಜಗತ್ತಿನ ಜ್ಞಾನ ಕ್ಷೇತ್ರವನ್ನು ವಿಸ್ತರಿಸಿದ್ದಾರೆ.
ವೇದ ಜ್ಞಾನ ಸಂರಕ್ಷಣೆ, ಸಂಶೋಧನೆ, ಪ್ರಸಾರ ಕಾರ್ಯಕ್ಕೆ ಇವರು ನೀಡಿದ ಕೊಡುಗೆಯನ್ನ ಸ್ಮರಿಸಿ ಕೇಂದ್ರ ಸರ್ಕಾರ 2003ರಲ್ಲಿ “ವೇದಾಂಗ ವಿದ್ವಾನ್’ ಪ್ರಶಸ್ತಿ ನೀಡಿ ಗೌರವಿಸಿದೆ. ಜತೆಗೆ ರಾಜ್ಯ ಸರ್ಕಾರ 2012ರಲ್ಲಿ ” ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಸನ್ಮಾನಿಸಿವೆ. ಭಾರತೀಯ ವಿದ್ಯಾಭವನ, ಬೆಂಗಳೂರು “ವೇದ ಬ್ರಹ್ಮ’ ಪುರಸ್ಕಾರದೊಂದಿಗೆ ಸತ್ಕರಿಸಿದೆ. ಜತೆಗೆ 2021ರಲ್ಲಿ “ಪದ್ಮಶ್ರೀ’ ಪ್ರಶಸ್ತಿಗೂ ಕಶ್ಯಪ್ ಭಾಜನರಾಗಿದ್ದರು.