Advertisement

ಪಾರು ಮದುವೆ ಸಂಭ್ರಮ

09:30 AM Apr 19, 2019 | Lakshmi GovindaRaju |

ಕಿರುತೆರೆಯ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಪಾರು’ ಧಾರಾವಾಹಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗ “ಪಾರು’ಗೆ ಮದುವೆ ಸಂಭ್ರಮ. ಪಾರುಗೆ ಅಖೀಲಾಂಡೇಶ್ವರಿಯ ಹಿರಿಯ ಮಗ ಆದಿತ್ಯ ಗ್ರೂಪ್‌ ಆಫ್ ಕಂಪನೀಸ್‌ ಒಡೆಯ ಆದಿತ್ಯನೊಂದಿಗೆ ಮದುವೆಯ ಯೋಗ ಕೂಡಿಬಂದಿದೆ.

Advertisement

ಧಾರಾವಾಹಿಯಲ್ಲಿ ಆದಿತ್ಯ ಮತ್ತು ಪಾರು ಇಬ್ಬರ ಮದುವೆ ಅದ್ದೂರಿಯಾಗಿ ಚಿತ್ರಿಸಲಾಗಿದ್ದು, ಮದುವೆಯ ಎಲ್ಲಾ ಶಾಸ್ತ್ರ ಸಂಪ್ರದಾಯಗಳನ್ನು ಚಾಚೂ ತಪ್ಪದೆ ತೆರೆಮೇಲೆ ತೆರೆದಿಡಲು ಜೀ ವಾಹಿನಿ ಪ್ಲಾನ್‌ ಮಾಡಿಕೊಂಡಿದೆ. ಅಖೀಲಾಂಡೇಶ್ವರಿಯನ್ನು ಸದಾ ದೇವತೆಯಂತೆ ಆರಾಧಿಸುವ, ಅವರ ಮಾತನ್ನು ವೇದವಾಕ್ಯದಂತೆ ಪಾಲಿಸುವ ಪಾರು

-ಅಖೀಲಾಂಡೇಶ್ವರಿಯ ಮಗನನ್ನು ಮದುವೆಯಾಗಲು ಹೇಗೆ ಸಾಧ್ಯವಾಯಿತು ಎನ್ನುವ ವೀಕ್ಷಕರ ಪ್ರಶ್ನೆಗಳಿಗೆ ಮುಂದಿನನದಿನಗಳಲ್ಲಿ ಉತ್ತರ ಸಿಗುವುದಂತೂ ಪಕ್ಕಾ. ಅಂದಹಾಗೆ, ಪಾರು ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ.

ಒಟ್ಟಾರೆ ತನ್ನ ಕಾರ್ಯಕ್ರಮಗಳಲ್ಲಿ ಹೊಸ ಪ್ರಯೋಗಗಳ ಮೂಲಕ ಪ್ರೇಕ್ಷಕರ ಮನಗೆಲ್ಲುತ್ತಿರುವ ಜೀ ವಾಹಿನಿಯ ಈ ಹೊಸ ಪ್ರಯೋಗ ಕಿರುತೆರೆ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next