Advertisement

ಕಾಡ್ಗಿಚ್ಚಿನ ಕೆನ್ನಾಲಿಗೆಗೆ ಹೆದರಿ, ಹೆಲಿಕಾಪ್ಟರ್‌ ಏರಿದ ಗೂಬೆ!

12:07 PM Nov 03, 2015 | Nagendra Trasi |

ನ್ಯೂಯಾರ್ಕ್‌: ಕಾಡ್ಗಿಚ್ಚಿನ ಕೆನ್ನಾಲಿಗೆಗೆ ಬೆಚ್ಚಿದ ಗೂಬೆ, ಆಕಾಶದಿಂದ ನೀರು ಸುರಿಸಿ ಬೆಂಕಿ ನಂದಿಸುತ್ತಿದ್ದ ಹೆಲಿಕಾಪ್ಟ್ ರ್‌ ‌ ನೊಳಗೆ ಬಂದು ಕುಳಿತು ನಿಟ್ಟುಸಿರುಬಿಟ್ಟ ಕರುಣಾ ಜನಕ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

Advertisement

ದಟ್ಟ ಬೆಂಕಿಯಿಂದ ಪ್ರಾಣ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದ ಗೂಬೆ ಹೆಲಿಕಾಪ್ಟರ್‌ನ ಪೈಲಟ್‌ ಜತೆ ಬಂದು ಕುಳಿತು ಪ್ರಾಣಾಪಾಯದಿಂದ ಪಾರಾಗಿದೆ. ಪೈಲಟ್‌ ದಾಲ್‌ ಆಲ್ಪೆನರ್‌ ಕ್ಲಿಕ್ಕಿಸಿರುವ ಗೂಬೆಯ ಫೋಟೊವನ್ನು ಕ್ಲಿಕ್ಕಿಸಿರುವ ಏವಿಯೇಶನ್‌ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದು, ಭಾರೀ ವೈರಲ್‌ಆಗಿದೆ.

ಗೂಬೆಯ ಪ್ರಾಣ ರಕ್ಷಿಸಿದ ಪೈಲಟ್‌ಗೆ ಹಲವು ನೆಟ್ಟಿಗರು ಶಹಬ್ಟಾಶ್ ‌ಹೇಳಿದ್ದಾರೆ. ಕಾಡ್ಗಿಚ್ಚಿಗೆ ಗುರಿಯಾದ ಸಿಯೆರ್ರಾ ರಾಷ್ಟ್ರೀಯ ಉದ್ಯಾನದಿಂದ ಗೂಬೆ ಬೇರೆಡೆ ವಲಸೆ ಹೋಗಲು ಯತ್ನಿಸುತ್ತಿತ್ತು.

ಅಮೆರಿಕ “ರಫ್ತು ನಿಯಂತ್ರಣ’ಕ್ಕೆಚೀನ ನೂತನ ಕಾಯ್ದೆ ಜಾರಿ
ರಾಷ್ಟ್ರೀಯ ಸುರಕ್ಷತೆ ನೆಪವೊಡ್ಡಿ ಅಮೆರಿಕಕ್ಕೆ ಆರ್ಥಿಕ ಆಘಾತ ನೀಡಲು “ಸೂಕ್ಷ್ಮ ರಫ್ತು ನಿರ್ಬಂಧ ಕಾಯ್ದೆ’ ಜಾರಿಗೆ ಚೀನ ನಿರ್ಧರಿಸಿದೆ.ಡಿ.1ರಿಂದ ಜಾರಿಗೆ ಬರುವ ಈ ಕಾಯ್ದೆ ಅನ್ವಯ, ರಫ್ತು ನಿಯಂತ್ರಣ ನಿಯಮಾವಳಿಗಳನ್ನು ದುರುಪಯೋಗಪಡಿಸಿಕೊಳ್ಳುವ ಯಾವುದೇ ದೇಶಗಳ ಉತ್ಪನ್ನಗಳ ವಿರುದ್ಧ ಬೀಜಿಂಗ್‌ ಸರಕಾರ ನಿರ್ಬಂಧ ಹೇರಬಹುದಾಗಿದೆ.

ರಾಷ್ಟ್ರೀಯ ಸುರಕ್ಷತೆಗೆ ಧಕ್ಕೆ ತರುವ ನಾಗರಿಕ ಬಳಕೆ ವಸ್ತುಗಳು, ಮಿಲಿಟರಿ ಮತ್ತು ನ್ಯೂಕ್ಲಿಯರ್‌ ಉತ್ಪನ್ನಗಳು, ವಿವಿಧ ಸರಕುಗಳು, ತಂತ್ರಜ್ಞಾನ ಸೇವೆಗಳ
ರಫ‌¤ನ್ನು ಈ ಕಾಯ್ದೆ ನಿರ್ಬಂಧಿಸಲಿದೆ.

Advertisement

ಅಮೆರಿಕ ಟಾರ್ಗೆಟ್‌: ಇತ್ತೀಚೆಗಷ್ಟೇ ಟೆಲಿಕಮ್ಯುನಿಕೇಶನ್‌ ದೈತ್ಯ ಹುವೈ ಸೇರಿದಂತೆ ವಿವಿಧ ಚೀನೀ ಟೆಕ್‌ ಕಂಪೆನಿಗಳು, ಅಲ್ಲದೆ ಟಿಕ್‌ಟಾಕ್‌ ಒಳಗೊಂಡಂತೆ ಹಲವು ಚೀನೀ ಆ್ಯಪ್‌ ಗಳನ್ನು ಅಮೆರಿಕ ನಿರ್ಬಂಧಿಸಿತ್ತು. ನೂತನ ಕಾಯ್ದೆ ಮೂಲಕ ಚೀನ, ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next