ನೌಕರರು ನಗರದಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿ ಮುಖ್ಯ ಅಂಚೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಶನಿವಾರ ನಗರದಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಗ್ರಾಮೀಣ ಅಂಚೆ ನೌಕರರು, ನಂತರ ಜಿಲ್ಲಾ ಧಿಕಾರಿ
ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಗ್ರಾಮೀಣ ಅಂಚೆ ನೌಕರರಿಗೆ ಸೇವಾಭದ್ರತೆ ಇಲ್ಲವಾಗಿದ್ದು, ಶೋಷಣೆ ಅಧಿ
ಕವಾಗಿದೆ. ಕೂಡಲೇ ಸೇವೆ ಕಾಯಂ ಮಾಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಬಿ.ಎನ್. ಬಿರಾದಾರ, ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಈ ಹಿಂದೆ ಅನಿರ್ದಿಷ್ಟಾವ ಧಿ ಧರಣಿ ಹಮ್ಮಿಕೊಂಡಿದ್ದಾಗ ನೀಡಿದ್ದ ಭರವಸೆ ಈಡೇರಿಲ್ಲ. ಸೇವೆ ಕಾಯಂ ಮಾಡುವ ಪ್ರಮಖ ಬೇಡಿಕೆ ಈಡೇರಿಲ್ಲ. ನೌಕರರಿಗೆ ಕನಿಷ್ಠ ಸೌಲಭ್ಯಗಳನ್ನೂ ನೀಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಜನ ಸಮುದಾಯ ಮಧ್ಯೆ ಉತ್ತಮ ಸೇವೆ ನೀಡುತ್ತಿರುವ ಅಂಚೆ ನೌಕರರು ಮಾತ್ರ ಕಷ್ಟಗಳಲ್ಲೇ ಜೀವನ ನಡೆಸುತ್ತಿದ್ದಾರೆ. ಆದರೂ ಅವರ ಸಮಸ್ಯೆ ಆಲಿಸಿ, ಪರಿಹಾರ ಕ್ರಮಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ ಎಂದು ಹರಿಹಾಯ್ದರು. ಗ್ರಾಮೀಣ ಅಂಚೆ ನೌಕರರನ್ನು ಕಾಯಂಗೊಳಿಸುವುದು, 7ನೇ ವೇತನ ಆಯೋಗ ಜಾರಿಗೆ ತರುವುದು, ಗ್ರಾಮೀಣ ಅಂಚೆ ನೌಕರರಿಗೆ ಪಿಂಚಣಿ ನೀಡುವುದು, ಇಲಾಖೆಯು ಟಾರ್ಗೆಟ್ ಹೆಸರಿನಲ್ಲಿ ಗ್ರಾಮೀಣ ಅಂಚೆ ನೌಕರರ ಮೇಲಿನ ದೌರ್ಜನ್ಯ ತಡೆಯುವುದು. ಅಂಚೆ ನೌಕರರ ಕೆಲಸದ ಅವ ಧಿಯನ್ನು 8 ತಾಸು ನಿಗದಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಂಡಿಸಿದರು. ಎಂ.ವಿ. ತಿಮ್ಮಾಪುರ, ಪಿ.ಬಿ.ದೇಸಾಯಿ, ಐ.ಎಸ್.ಅವಟೆ, ಎಂ.ವೈ.ಹೊಗೋಡಿ, ವಿ.ವಿ.ದೇಶಪಾಂಡೆ, ಮಲ್ಲಮ್ಮ ಪಾಟೀಲ, ಜ್ಯೋತಿ ಬಿರಾದಾರ, ಎಸ್.ವೈ.ಕಡ್ಲಿ, ಸುಲೋಚನಾ ನಾಲವಾರ, ಎಸ್.ಎಸ್.ತಾಜಿ, ಎಸ್.ಎ. ತಾಜಿ, ಎಂ.ಎನ್. ಮರಳಿ, ಪ್ರಶಾಂತ ಕುಲಕರ್ಣಿ, ವೈ.ಸಿ. ಬೋಸ್ಲೆ ಪಾಲ್ಗೊಂಡಿದ್ದರು. ಅಂಚೆ ನೌಕರರ ಬೇಡಿಕೆಗೆ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟ ಹೋರಾಟದಲ್ಲಿ ಪಾಲ್ಗೊಂಡ ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಸಂಗಮೇಶ ಹೌದಿ, ಪಾಲಿಕೆ ಸದಸ್ಯ ಉಮೇಶ ವಂದಾಲ, ಶಿವಾನಂದ ಭುಯ್ನಾರ, ಶರಣು ಸಬರದ, ಶಹಜಾನ್ ಮುಲ್ಲಾ ಇತರರು ಬೆಂಬಲ ವ್ಯಕ್ತಪಡಿಸಿದರು.
Advertisement