Advertisement
ನಾಡದೋಣಿ ಮೀನುಗಾರರಿಗೆ ಹೊಸ ಎಂಜಿನ್ ಖರೀದಿಸಲು ಸರಕಾರದಿಂದ ಸಿಗುತ್ತಿದ್ದ ಸಹಾಯ ಧನ 2 ವರ್ಷದಿಂದ ಸಿಗುತ್ತಿಲ್ಲ. ಸಹಾಯಧನ ಮುಂದುವರಿಸಬೇಕೆಂಬ ಮೀನು ಗಾರರ ಬೇಡಿಕೆ ಇನ್ನೂ ಈಡೇರಿಲ್ಲ. ಬಜೆಟ್ ಪೂರ್ವ ಸಭೆಯಲ್ಲಿ ಉಲ್ಲೇ ಖೀಸಿದ್ದು, ಇಲಾ ಖೆಯ ವಿವಿಧ ಸಭೆಗಳಲ್ಲಿ ಚರ್ಚಿಸಿ ದರೂ ಉಪಯೋಗವಾಗಿಲ್ಲ. ದ.ಕ. ಜಿಲ್ಲೆಯಲ್ಲಿ 2,000 ಕ್ಕೂ ಹೆಚ್ಚು ಹಾಗೂ ಉಡುಪಿ ಜಿಲ್ಲೆಯಲ್ಲಿ 3,000ಕ್ಕೂ ಹೆಚ್ಚು ನಾಡ ದೋಣಿಗಳಿವೆ.
ಮೀನುಗಾರಿಕೆ ಇಲಾಖೆಯ ಅಧಿಕಾ ರಿಗಳ ಪ್ರಕಾರ “ಕೇಂದ್ರ ಪುರಸ್ಕೃತ ನೀಲಿ ಕ್ರಾಂತಿ ಯೋಜನೆಯು 2019- 20ಕ್ಕೆ ಮುಗಿದಿದೆ. 2020- 21ನೇ ಸಾಲಿನಿಂದ ಕೇಂದ್ರದ “ಪಿಎಂಎಂಎಸ್‌ವೈ’ ಯೋಜನೆ ಜಾರಿಗೆ ಬಂದಿದ್ದು, ಅದರಲ್ಲಿ ನಾಡದೋಣಿ ಔಟ್‌ಬೋ ರ್ಡ್ ಎಂಜಿನ್‌ಗೆ ಸಹಾಯಧನ ನೀಡಲು ಅವಕಾಶವಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಕಾಯುತ್ತಿವೆ ಅರ್ಜಿಗಳು
ನಾಡದೋಣಿ ಔಟ್‌ಬೋರ್ಡ್ ಎಂಜಿನ್ ಖರೀದಿಗೆ 1.40 ಲಕ್ಷ ರೂ. ತಗಲುತ್ತದೆ. ಅದಕ್ಕೆ 60 ಸಾವಿರ ರೂ. ಸಹಾಯ ಧನ ಸಿಗುತ್ತಿತ್ತು. ಸುದೀರ್ಘ ವರ್ಷ ದಿಂದ ಜಾರಿಯಲ್ಲಿದ್ದ ಯೋಜನೆ ಈಗ ಇಲ್ಲ. ಆದರೆ ಮೀನುಗಾರರು ನಿರೀಕ್ಷೆಯಿಂದ ಅರ್ಜಿ ಹಾಕುತ್ತಲೇ ಇದ್ದಾರೆ. ಸಹಾಯ ಧನ ಮಾತ್ರ ಸಿಗುತ್ತಿಲ್ಲ’ ಎನ್ನುತ್ತಾರೆ ಕರಾವಳಿ ನಾಡದೋಣಿ ಮೀನುಗಾರರ ಸಂಘ, ನವ ಮಂಗಳೂರು ವಲಯ ಅಧ್ಯಕ್ಷ ವಾಸುದೇವ ಬಿ. ಕರ್ಕೇರ.