ಕರಾಚಿ: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆಯ ಸಂಚು ಸಮರ್ಪಕವಾಗಿ ಜಾರಿ ನಿಟ್ಟಿನಲ್ಲಿ ಉಗ್ರ ಸಂಘಟನೆ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಆಪಾ^ನಿಸ್ತಾನಕ್ಕೆ ತನ್ನ ನೆಲೆ ವರ್ಗಾಯಿಸಿದ್ದ. ಜತೆಗೆ ಮಾಜಿ ಅಧ್ಯಕ್ಷ ಜ.ಪರ್ವೇಜ್ ಮುಷರ್ರಫ್ ಅವರನ್ನೂ ಕೊಲ್ಲಲು ಸಂಚು ರೂಪಿಸಿದ್ದ. ಹೀಗೆಂದು ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್‌ಐ ಮೂಲಗಳನ್ನು ಉಲ್ಲೇಖೀಸಿ ಪಾಕಿಸ್ಥಾನ ಮಾಧ್ಯಮಗಳು ವರದಿ ಮಾಡಿವೆ.
ರಾವಲ್ಪಿಂಡಿಯ ಲಿಯಾಖತ್ ಬಾಘ…ನಲ್ಲಿ 2007ರ ಡಿ. 27ರಂದು ಭುಟ್ಟು ಅವರು ಉಗ್ರರ ಬಂದೂಕು ಹಾಗೂ ಬಾಂಬ್ ದಾಳಿಗೊಳಗಾಗಿ ಹತ್ಯೆಯಾಗಿದ್ದರು. ಅವರ 10ನೇ ಪುಣ್ಯ ತಿಥಿಯ ಸಂದರ್ಭದಲ್ಲಿ ಈ ವರದಿಗಳು ಬಂದಿವೆ.
2007ರ ಡಿ. 19ರಂದು ಪಾಕಿಸ್ಥಾನದ ಆಂತರಿಕ ವ್ಯವಹಾರಗಳ ಸಚಿವಾಲಯ ಹಾಗೂ ಪಾಕಿಸ್ಥಾನ ಸೇನಾ ಮುಖ್ಯಸ್ಥರಿಗೆ ಪತ್ರ ಬರೆದಿದ್ದ ಐಎಸ್‌ಐ, “”ಭುಟ್ಟೋ ಮಾತ್ರವಲ್ಲದೆ, ಅಂದಿನ ಪಾಕಿಸ್ಥಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಹಾಗೂ ಉಲೇಮಾ-ಎ-ಇಸ್ಲಾಂ-ಫಾಝಲ್ ಸಂಘಟನೆಯ ಮುಖ್ಯಸ್ಥ ಫಝೂÉರ್ ರಹಮಾನ್ ಅವರ ಹತ್ಯೆಗೂ ಲಾಡೆನ್ ಸಂಚು ರೂಪಿಸಿದ್ದಾನೆ. ಇವರ ಹತ್ಯೆಗಾಗಿ ತಯಾರಿಸಲಾಗಿರುವ ವಿಶೇಷ, ಶಕ್ತಿಶಾಲಿ ಬಾಂಬ್‌ಗಳನ್ನು ವಾಜಿರಿಸ್ತಾನದ ಮುಸಾ ತಾರೀಖ್ ಎಂಬಾತನೊಂದಿಗೆ ಪಾಕಿಸ್ಥಾನದಲ್ಲಿರುವ ತನ್ನ ವಿಧೇಯರಿಗೆ ಕಳುಹಿಸಲೂ ಸಿದ್ಧತೆ ನಡೆಸಿದ್ದಾನೆ. ಹಾಗಾಗಿ, ತುರ್ತಾಗಿ ಈ ಮೂವರ ಭದ್ರತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಪತ್ರದಲ್ಲಿ ಆಗ್ರಹಿಸಲಾಗಿತ್ತು.