Advertisement
ಮೊಗವೀರ್ಸ್ ಬಹ್ರೈನ್ ಸಂಘಟನೆಯ ಸ್ಥಾಪಕ ಸದಸ್ಯರೂ, ಸಂಘಟನೆಯ ಉಪಾಧ್ಯಕ್ಷರೂ ಆಗಿ ಕಾರ್ಯನಿರ್ವಹಿಸಿ ಜನಾನುರಾಗಿಯಾಗಿ ಅಪಾರ ಮಿತ್ರ ಗೆಳೆಯರ ಬಳಗವನ್ನು ಹೊಂದಿ ಅಕಾಲಿಕ ನಿಧನ ಹೊಂದಿದ್ದ ದಿ| ತೀರ್ಥ ಸುವರ್ಣರವರ ಸ್ಮರಣಾರ್ಥ ಈ ಅಟಿಲ್ ಕಾರ್ಯಕ್ರಮವನ್ನು ಮೊಗವೀರ್ಸ್ ಬಹ್ರೈನ್ ಸಂಘಟನೆಯು ಆಯೋಜಿಸಿತ್ತು.
Related Articles
Advertisement
ಈ ಕಾರ್ಯಕ್ರಮದಲ್ಲಿ ಸುರೇಖಾ ಸುವರ್ಣ, ಮಂಗಳೂರು ಅಸೋಸಿಯೇಶನ್ ಓಫ್ ಸೌದಿ ಅರೇಬಿಯಾದ ಪ್ರಥಮ ಅಧ್ಯಕ್ಷ ಕರುಣಾಕರ ಸಾಲ್ಯಾನ್ ದಂಪತಿ, ಮೊಗವೀರ್ಸ್ ಬಹ್ರೈನ್‌ನ ಮಾಜಿ ಅಧ್ಯಕ್ಷ ಗಿರೀಶ್ ಇಡ್ಯಾ ದಂಪತಿ, ಗೀತಾ ಜಗನ್ನಾಥ್ ಸುವರ್ಣ ಕಾಪು ಇವರುಗಳನ್ನು ಮೊಗವೀರ್ಸ್ ಬಹ್ರೈನ್ ಸಂಘಟನೆಗಾಗಿ ನೀಡಿರುವ ಗಣನೀಯ ಕೊಡುಗೆಗಾಗಿ ಸ್ಮರಣಿಕೆಗಳನ್ನು ನೀಡಿ ಸಮ್ಮಾನಿಸಲಾಯಿತು. ರುಚಿ ಶುಚಿಯಾದ ಆಹಾರವನ್ನು ತಯಾರಿಸಿ ತಂದಿರುವ ಎಲ್ಲ ಅಭ್ಯರ್ಥಿಗಳನ್ನು ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.
ವೇದಿಕೆಯಲ್ಲಿ ಮೊಗವೀರ್ಸ್ ಬಹ್ರೈನ್‌ನ ಅಧ್ಯಕ್ಷರಾದ ಸುಧಾಕರ್ ಆನಗಳ್ಳಿ, ಉಪಾಧ್ಯಕ್ಷೆ ಶಿಲ್ಪಾ ಶಮಿತ್ ಕುಂದರ್, ಪ್ರಧಾನ ಕಾರ್ಯದರ್ಶಿ ಸುಮನ್ ಸುವರ್ಣ, ಕ್ರೀಡಾ ಕಾರ್ಯದರ್ಶಿ ರಾಜೇಶ್ ಮೆಂಡನ್, ಖಜಾಂಚಿ ಕೋದಂಡರಾಮ ಸಾಲ್ಯಾನ್, ಗೌರವಾಧ್ಯಕ್ಷ ಚಂದ್ರ ಮೆಂಡನ್, ಮೊಗವೀರ್ಸ್ ಬಹ್ರೈನ್‌ನ ಹಿರಿಯ ಸದಸ್ಯ ರಂಜನ್ ಸಾಲ್ಯಾನ್, ಮಾಜಿ ಅಧ್ಯಕ್ಷರಾದಂತಹ ಗಿರೀಶ್ ಇಡ್ಯಾ, ಕನ್ನಡ ಸಂಘದ ಅಧ್ಯಕ್ಷರಾದ ಅಮರನಾಥ್ ರೈ, ಸೌದಿ ಅರೇಬಿಯಾದ ಮಾಸ ಸಂಘಟನೆಯ ಅಧ್ಯಕ್ಷ ಗೋಪಾಲ್ ಶೆಟ್ಟಿ , ಮಾಸಸಂಘಟನೆಯ ಸ್ಥಾಪಕ ಸದಸ್ಯರಾದ ರವಿ ಕರ್ಕೇರ, ಪಟ್ಲ ಫೌಂಡೇಶನ್ ಬಹ್ರೈನ್ ಸೌದಿ ಘಟಕದ ಅಧ್ಯಕ್ಷರಾದ ನರೇಂದ್ರ ಶೆಟ್ಟಿ , ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸುರೇಖಾ ಸುವರ್ಣರವರು ಮಾತನಾಡಿ ತಮ್ಮ ಪತಿಯ ಸ್ಮರಣಾರ್ಥ ಆಯೋಜಿಸಿರುವ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿ ಕೃತಜ್ಞತೆಗಳನ್ನು ಸಲ್ಲಿಸಿದರು. ಕನ್ನಡ ಸಂಘದ ಅಧ್ಯಕ್ಷರಾದ ಅಮರನಾಥ್ ರೈ, ರವಿ ಕರ್ಕೇರ ಮುಂತಾದವರು ಮಾತನಾಡಿ ದಿ| ತೀರ್ಥ ಸುವರ್ಣರವರ ಕಾರ್ಯವೈಖರಿಯ ಬಗ್ಗೆ ಮಾತನಾಡಿ, ಈ ಕಾರ್ಯಕ್ರಮವು ಅವರಿಗೆ ಅರ್ಪಿಸುತ್ತಿರುವ ಅರ್ಥಪೂರ್ಣವಾದ ಗೌರವವಾಗಿದೆ. ಮೊಗವೀರ್ಸ್ ಬಹ್ರೈನ್‌ನ ಸಂಘಟನೆಯ ಈ ಕಾರ್ಯವೈಖರಿ ಅಭಿನಂದನೀಯ ಎಂದರು. ಮೊಗವೀರ್ಸ್ ಬಹ್ರೈನ್‌ನ ಪ್ರಧಾನ ಕಾರ್ಯದರ್ಶಿ ಸುಮನ್ ಸುವರ್ಣ ಅವರು ಎಲ್ಲರಿಗೂ ಧನ್ಯವಾದ ಅರ್ಪಿಸಿದರೆ ಕಮಲಾಕ್ಷ ಅಮೀನ್ ಅಅವರು ಕಾರ್ಯಕ್ರಮವನ್ನು ನಿರೂಪಿಸಿದರು. *ವರದಿ- ಕಮಲಾಕ್ಷ ಅಮೀನ್