Advertisement

ಸಂಘಟನಾ ಸಾಮರ್ಥ್ಯದ ಅನಾವರಣ : ಮಹೇಶ್‌ ಠಾಕೂರ್‌

07:40 AM Sep 12, 2017 | |

ಉಡುಪಿ: ಪರ್ಕಳದಂತಹ ಸಣ್ಣ ಊರಿನಲ್ಲಿ ಅನೇಕ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು 9 ದಿನಗಳ ವೈಭವಯುತ ಮತ್ತು ಸ್ಮರಣೀಯ ಸುವರ್ಣ ಮಹೋತ್ಸವವನ್ನು ಯಶಸ್ವಿಯಾಗಿ ಸಂಪನ್ನಗೊಳಿಸಿದ್ದು, ನಮ್ಮ ಸಂಘಟನಾ ಸಾಮರ್ಥ್ಯದ ಅರಿವಾಗಿದೆ ಎಂದು ಪರ್ಕಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮಹೇಶ್‌ ಠಾಕೂರ್‌ ಹೇಳಿದರು. 

Advertisement

ಅವರು ಪರ್ಕಳ ವಿಘ್ನೇಶ್ವರ ಸಭಾಭವನದಲ್ಲಿ ಸುವರ್ಣ ಸಮಿತಿಯು ಆಯೋಜಿಸಿದ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.ಪ್ರ. ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಮಾತನಾಡಿ, ಸುವರ್ಣ ಸಂಭ್ರಮಾಚರಣೆಯ ಸಂದರ್ಭದಲ್ಲಿ ಊರಿನ ಹೆಚ್ಚಿನ ಎಲ್ಲ ಮಹಿಳೆಯರು ನಮ್ಮೊಂದಿಗೆ ಸಹಕರಿಸಿ, ದುಡಿದು ಕಾರ್ಯಕ್ರಮಗಳ ಯಶಸ್ಸಿನ ಕಾರಣೀಕರ್ತರಾಗಿದ್ದಾರೆ. ಹಾಗೆಯೇ ಸುವರ್ಣ ಮಹೋತ್ಸವ ಆಚರಣೆಯ ಆರಂಭದಲ್ಲಿ ಹಾಕಿಕೊಂಡ ಶೌಚಾಲಯ, ಬಸ್‌ ನಿಲ್ದಾಣ ನಿರ್ಮಾಣ ಮುಂತಾದ ಸಮಾಜಮುಖೀ ಕಾರ್ಯಕ್ರಮಗಳನ್ನು ಪೂರ್ಣ ಗೊಳಿಸಲು ತಾವು ಬದ್ಧ ಎಂದರು.  ಕಾರ್ಯಕರ್ತರ ಪರವಾಗಿ ಮಾತನಾಡಿದ ಅಲ್ವಿನ್‌ ಡಿಸೋಜ, ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ತಮ್ಮ ತಮ್ಮ ಧಾರ್ಮಿಕತೆಯನ್ನು ಬದಿಗೊತ್ತಿ ಕೇವಲ ಭಾರತೀಯರಂತೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡಲು ಅವಕಾಶ ದೊರಕಿದ್ದು ನನ್ನ ಜೀವನದ ಅಪೂರ್ವ ಕ್ಷಣ ಎಂದರು. ಮಣಿಪಾಲ ಠಾಣಾಧಿಕಾರಿ ಗೋಪಾಲಕೃಷ್ಣ, ಶಿವರಾಂ ಶೆಟ್ಟಿ, ಸುಮಾ ನಾಯಕ್‌, ಸರಳ ಶೆಟ್ಟಿ, ಸುಂದರ್‌ ಶೆಟ್ಟಿ ಮಾತನಾಡಿದರು. ಪದಾಧಿಕಾರಿಗಳಾದ ಮನೋಜ್‌ ಹೆಗ್ಡೆ, ಸುರೇಶ ಶಾನುಭಾಗ್‌, ಭಾಸ್ಕರ್‌ ಆಚಾರ್ಯ, ರಘುರಾಮ ಉಪಾಧ್ಯ ಉಪಸ್ಥಿತರಿದ್ದರು.  ಸಮಿತಿ ಸಂಚಾಲಕ ದಿಲೀಪ್‌ ರಾಜು ಹೆಗ್ಡೆ ಸ್ವಾಗತಿಸಿದರು. ಕೋಶಾಧಿಕಾರಿ ಪ್ರಮೋದ್‌ ಕುಮಾರ್‌ ವಂದಿಸಿದರು. ಉಮೇಶ್‌ ಶಾನಭೋಗ್‌ ಕಾರ್ಯಕ್ರಮ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next