Advertisement

ಕರ್ನಾಟಕದಿಂದ ಆದೇಶ ಉಲ್ಲಂಘನೆ: ಸಾವಂತ್‌ 

06:30 AM Jan 29, 2018 | Team Udayavani |

ಬೆಳಗಾವಿ/ಖಾನಾಪುರ: ಕರ್ನಾಟಕ ಸರ್ಕಾರ ಮಹದಾಯಿ ನ್ಯಾಯಾಧಿಕರಣದ ಆದೇಶ ಉಲ್ಲಂಘಿಸಿ ಕಳಸಾ ನಾಲಾ ಪ್ರದೇಶದಲ್ಲಿ ಕಾಮಗಾರಿ ನಡೆಸಿದೆ ಎಂದು ಗೋವಾ ಸಭಾಪತಿ ಪ್ರಮೋದ ಸಾವಂತ್‌ ಮತ್ತು ಉಪಸಭಾಪತಿ ಮೈಕಲ್‌ ಲೋಬೋ ಗಂಭೀರ ಆರೋಪ ಮಾಡಿದರು. 

Advertisement

ಕಣಕುಂಬಿಯಲ್ಲಿ ಸುದ್ದಿಗಾರರೊಂದಿಗೆ‌ ಮಾತನಾಡಿ, ನ್ಯಾಯಾಧಿಕರಣದ ಆದೇಶ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ತಕ್ಷಣ ಸಮಿತಿ ರಚನೆ ಮಾಡಿ ತನಿಖೆ ನಡೆಸಬೇಕು ಎಂದು ನ್ಯಾಯಾಧಿಕರಣವನ್ನು ಒತ್ತಾಯಿಸಿದರು. ಕಳಸಾ ನಾಲಾ ಪ್ರದೇಶದಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ಕರ್ನಾಟಕ ಹೇಳಿದೆಯಾದರೂ ಇಲ್ಲಿನ ಸ್ಥಿತಿ ನೋಡಿದರೆ ನ್ಯಾಯಾಧಿಕರಣದ ಆದೇಶ ಉಲ್ಲಂಘನೆ ಯಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕರ್ನಾಟಕ ಸರ್ಕಾರ ಕಳಸಾ ನಾಲಾ ನೀರನ್ನು ತಿರುಗಿಸಿಕೊಳ್ಳಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ.

ಮಹದಾಯಿ ಮತ್ತು ಅದರ ಉಪನದಿಗಳು ನೈಸರ್ಗಿಕವಾಗಿ ಹರಿಯುತ್ತಿದ್ದು, ಅದನ್ನು ತಡೆಯಲು ಪ್ರಯತ್ನ ಮಾಡಬಾರದು. ನ್ಯಾಯಾಲಯದ ತೀರ್ಪು ಬರುವವರೆಗೆ ಕರ್ನಾಟಕ ಸರ್ಕಾರ ಯಾವುದೇ ಕಾಮಗಾರಿ ಕೈಗೊಳ್ಳಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next