Advertisement
ಮಹಿಳಾ ವಿಶ್ವವಿದ್ಯಾಲಯದಿಂದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ ಗಳಲ್ಲಿ 13,461 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಯಿತು. ಈ ಪೈಕಿ ಹೆಚ್ಚು ಅಂಕ ಪಡೆದ 63 ವಿದ್ಯಾರ್ಥಿನಿಯರು 80 ಚಿನ್ನದ ಪದಕಗಳು ಮತ್ತು 34 ವಿದ್ಯಾರ್ಥಿನಿಯರು ಪಿಎಚ್ಡಿ ಪದವಿಗಳನ್ನು ಪಡೆದರು. ಕನ್ನಡ ವಿಭಾಗದ ಮಂದಿರಾ ತೆಲಗಡೆ, ಸಮಾಜಶಾಸ್ತ್ರ ವಿಭಾಗದ ಶಿಲ್ಪಾ ಸತ್ತಪ್ಪ ಪಡೆಪ್ಪಗೊಳ, ಅರ್ಥಶಾಸ್ತ್ರ ವಿಭಾಗದ ಪಲ್ಲವಿ ಯರನಾಳ, ಆಹಾರ ಸಂಸ್ಕರಣೆ ಮತ್ತು ಪೋಷಕಾಂಶ ವಿಭಾಗದ ವನಿತಾ ಸಾವಂತ ಹಾಗೂ ಎಂ.ಪಿ.ಎಡ್ ವಿಭಾಗದ ಸೌಜನ್ಯ ಜಿಂಜರವಾಡ ಅತ್ಯಧಿಕ ತಲಾ ಮೂರು ಚಿನ್ನದ ಪದಕಗಳಿಗೆ ಮುತ್ತಿಕ್ಕಿದರು.
Related Articles
Advertisement
ಕ್ರಿಕೆಟರ್ಗೂ 3 ಚಿನ್ನದ ಪದಕ: ಎಂ.ಪಿ.ಎಡ್ ವಿಭಾಗದಲ್ಲಿ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸೌಜನ್ಯ ಜಿಂಜರವಾಡ ಕೂಡ ಮೂರು ಚಿನ್ನದ ಪದಕಗಳಿಗೆ ಭಾಜನರಾದರು. “ನಾನು ರೈತ ಕುಟುಂಬದ ವಿಠ್ಠಲ್ ಜಿಂಜರವಾಡ ಹಾಗೂ ಮಹಾದೇವಿ ದಂಪತಿಯ ಪುತ್ರಿ. ಕ್ರಿಕೆಟ್, ಬಾಸ್ಕೆಟ್ ಬಾಲ್ ಹಾಗೂ ಹ್ಯಾಂಡ್ಬಾಲ್ ಪಟು ಆಗಿದ್ದೇನೆ. ವಿವಿಧ ರಾಜ್ಯಗಳಲ್ಲಿ ನಡೆದ ಅಂತರ್ ವಿವಿಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಏಳು ಬಾರಿ ಪಾಲ್ಗೊಂಡಿರುವೆ. ಸದ್ಯ ಬೆಂಗಳೂರಿನಲ್ಲಿ ವೈಎಂಸಿಎ ಕಾಲೇಜಿನಲ್ಲಿ ಉದ್ಯೋಗ ಮಾಡುತ್ತಿದ್ದೇನೆ. ಚಿನ್ನದ ಪದಕಗಳನ್ನು ಪಡೆದಿರುವುದು ಖುಷಿ ನೀಡಿದೆ” ಎಂದು ಸೌಜನ್ಯ ತಮ್ಮ ಸಂತಸ ಹಂಚಿಕೊಂಡರು.
ಮೆಹಂದಿ ಹಣದಲ್ಲಿ ಉನ್ನತ ಶಿಕ್ಷಣ: ಹಿಂದಿ ವಿಭಾಗದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದ ಬೆಳಗಾವಿ ಜಿಲ್ಲೆಯ ಚಿಕ್ಕುಂಬಿ ಗ್ರಾಮದ ಆಫ್ರೀನ್ ಶಿಲೇದಾರ್ ತಮ್ಮ 18ನೇ ವಯಸ್ಸಿನಿಂದ ತಾವೇ ದುಡಿದು, ಅದರಿಂದ ಬಂದ ಹಣದಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆಫ್ರೀನ್ ಅವರ ಚಿಕ್ಕ ವಯಸ್ಸಿನಲ್ಲೇ ತಂದೆ ನಿಧನ ಹೊಂದಿದ್ದಾರೆ. ತಾಯಿ ಕೂಲಿ ಕೆಲಸ ಮಾಡುತ್ತಿದ್ದು, ಮೂವರು ಹೆಣ್ಣು ಮಕ್ಕಳೇ ಇದ್ದಾರೆ. ಧಾರವಾಡದಲ್ಲಿ ಪದವಿ ಮುಗಿಸಿರುವ ಆಫ್ರೀನ್, ಕಾಲೇಜಿನ ನಂತರ ಮದುವೆ ಮನೆಗಳಲ್ಲಿ ಮೇಹಂದಿ ಹಾಕುತ್ತಾರೆ. ಜತೆಗೆ ಬ್ಯೂಟಿ ಪಾರ್ಲರ್ ತರಬೇತಿ ಪಡೆದುಕೊಂಡಿದ್ದು, ಈ ದುಡುಮೆಯ ಹಣವನ್ನೇ ತಮ್ಮ ಶಿಕ್ಷಣಕ್ಕೆ ಆಸರೆ ಮಾಡಿಕೊಂಡಿದ್ದಾರೆ. ಬಿಇಡಿ ಕೂಡ ಮುಗಿಸಿರುವ ಆಫ್ರೀನ್, “ಮುಂದೆ ಪಿಎಚ್ಡಿ ಮಾಡಬೇಕು. ಜತೆಗೆ ವೃತ್ತಿ ಕೌಶಲ್ಯಯನ್ನು ಮುಂದುವರೆಸಿಕೊಂಡು ಸರ್ಕಾರಿ ನೌಕರಿ ಪಡೆಯುವ ಆಸೆ ಇದೆ” ಎಂದು ಹೇಳಿದರು.
ಜತೆಗೆ ಸಮಾಜಶಾಸ್ತ್ರ ವಿಭಾಗದ ಶಿಲ್ಪಾ ಸತ್ತಪ್ಪ ಪಡೆಪ್ಪಗೊಳ ಮತ್ತು ಅರ್ಥಶಾಸ್ತ್ರ ವಿಭಾಗದ ಪಲ್ಲವಿ ಯರನಾಳ ಸಹ ತಲಾ ಮೂರು ಚಿನ್ನದ ಪದಕಗಳಿಗೆ ಭಾಜನರಾದರು. ಉಳಿದ ವಿದ್ಯಾರ್ಥಿನಿಯರು ಎರಡು ಹಾಗೂ ಒಂದು ಚಿನ್ನದ ಪದಕಗಳನ್ನು ಸ್ವೀಕರಿಸಿದರು.
ನಾನು ಕುರಿ ಕಾಯುತ್ತೇನೆ. ಮಗಳು ಕಲಿಯಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದಳು. ಹೀಗಾಗಿ ಶಾಲೆಗೆ ಸೇರಿಸಿದ್ದೇವು. ಕಷ್ಟದ ಜೀವನದ ನಡುವೆಯೂ ಓದಿಸಿದ್ದೇವೆ. ಮಗಳು ಇವತ್ತು ನಮಗೆ ಹೆಸರು ತಂದಿದ್ದಾಳೆ. ನಮಗೆ ಈ ಖುಷಿಯೇ ಸಾಕು.– ಹನುಮಂತ, 3 ಚಿನ್ನದ ಪದಕ ಪಡೆದ ಮಂದಿರಾಳ ತಂದೆ