Advertisement
ಬಿಬಿಎಂಪಿ ಅಧಿಕಾರಿಗಳು ಬುಧವಾರ ಪೂರ್ವ ವಲಯದ ಜೆ.ಸಿ.ನಗರ ವಾರ್ಡ್‌ನ ಮಠದಹಳ್ಳಿಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿದ್ದ ಕಟ್ಟಡಗಳ ತೆರವಿಗೆ ಮುಂದಾದಾಗ ಕಟ್ಟಡ ಮಾಲಿಕರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿ ಸ್ವಲ್ಪ ಕಾಲ ಕಾರ್ಯಾಚರಣೆಯೇ ಸ್ಥಗಿತಗೊಂಡಿತ್ತು.
Related Articles
Advertisement
ಸ್ವಯಂ ತೆರವಿಗೆ ಅವಕಾಶ: ಮತ್ತೂಂದೆಡೆ ಪಟೇಲ್ಸ್ ಕ್ಲಬ್‌ನಿಂದ 6.5 ಗುಂಟೆ ಜಾಗ ಒತ್ತುವರಿಯಾಗಿದ್ದು, ಒತ್ತುವರಿದಾರರು ಸ್ಥಳದಲ್ಲಿ ಕಾಂಪೌಂಡ್, ಅಡುಗಮನೆ, ಶೆಡ್ ಸಭಾಂಗಣ ನಿರ್ಮಾಣ ಮಾಡಿದ್ದಾರೆ. ಇವುಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದರೆ ವಾಟರ್, ಸ್ಯಾನಿಟರಿ ಸಂಪರ್ಕಗಳು ಹಾಳಾಗುತ್ತವೆ. ಹೀಗಾಗಿ ಸ್ವಯಂ ಪ್ರೇರಿತ ತೆರವಿಗೆ ಅವಕಾಶ ನೀಡಬೇಕು ಎಂದು ಕ್ಲಬ್‌ನವರು ಮನವಿ ಮಾಡಿ ಸ್ವತಃ ತೆರವಿಗೆ ಮುಂದಾದರು.
ಇನ್ನು ಎಂಬಸ್ಸಿ ಗ್ರೂಪ್‌ನ ಮಾಲಿಕರು ಸಹ ಬಿಬಿಎಂಪಿಗೆ ಸೇರಿದ 5 ಗುಂಟೆ ರಾಜಕಾಲುವೆ ಜಾಗ ಒತ್ತುವರಿ ಮಾಡಿಕೊಂಡಿದ್ದು, ಜಾಗದಲ್ಲಿ ನಿರ್ಮಿಸಿದ್ದ ಪಾರ್ಕ್, ಈಜುಕೊಳವನ್ನು ಬುಧವಾರ ತೆರವುಗೊಳಿಸಲಾಯಿತು. ಯಲಹಂಕ ವಲಯದ ಅನಂದಪುರ ಹಾಗೂ ಕೋಗಿಲು ಗ್ರಾಮದಲ್ಲಿ ಒತ್ತುವರಿಯಾಗಿದ್ದ ಖಾಲಿ ನಿವೇಶನಗಳನ್ನೂ ಇದೇ ವೇಳೆ ಅಧಿಕಾರಿಗಳು ತೆರವುಗೊಳಿಸಿದರು.
ಮಠದಹಳ್ಳಿ ಬಳಿ 4 ತಿಂಗಳ ಹಿಂದೆಯೇ ಒತ್ತುವರಿ ಗುರುತು ಮಾಡಿ ಮಾಲಿಕರಿಗೆ ಸೂಚನೆ ನೀಡಲಾಗಿತ್ತು. ಆದರೂ ಸ್ವಯಂ ಪ್ರೇರಿತ ತೆರವಿಗೆ ಮುಂದಾಗದ ಹಿನ್ನೆಲೆಯಲ್ಲಿ ಬುಧವಾರ ತೆರವಿಗೆ ತೆರಳಿದರೆ ದಬ್ಟಾಳಿಕೆ ಮಾಡಿ ಅಡ್ಡಿಪಡಿಸಿದ್ದಾರೆ. ಗುರುವಾರ ಪೊಲೀಸ್ ಸಹಕಾರದೊಂದಿಗೆ ತೆರವುಗೊಳಿಸುತ್ತೇವೆ.-ಬಸವರಾಜಪ್ಪ, ಕಾರ್ಯ ಪಾಲಕ ಎಂಜಿನಿಯರ್, ಪೂರ್ವ ವಲಯ