Advertisement

ಸಂಜೆವರೆಗೂ ವ್ಯಾಪಾರಕ್ಕೆ ಅವಕಾಶ

06:17 AM May 22, 2020 | Team Udayavani |

ಕುಣಿಗಲ್‌: ಲಾಕ್‌ಡೌನ್‌ ನಿರ್ಬಂಧ ಸಡಿಲಿಕೆ ಹಿನ್ನೆಲೆಯಲ್ಲಿ ಷರತ್ತುಗಳು ಅನ್ವಯ ದಂತೆ ಬೆಳಗ್ಗೆ 6 ರಿಂದ ಸಂಜೆ 6 ರವೆರೆಗೆ ವ್ಯಾಪಾರ, ವಹಿವಾಟಿಗೆ ಅನುವು ಮಾಡಿ  ಕೊಡಲಾಗಿದೆ. ವರ್ತಕರು, ಗ್ರಾಹಕರು ಸದ್ಬಳಕ್ಕೆ  ಮಾಡಿಕೊಂಡಿಕೊಳ್ಳುವಂತೆ ಶಾಸಕ ಡಾ.ಎಚ್‌.ಡಿ.ರಂಗನಾಥ್‌ ಹೇಳಿದರು.

Advertisement

ತಾಪಂ ಸಭಾಂಗಣದಲ್ಲಿ ವರ್ತಕರ ಸಭೆಯಲ್ಲಿ ಮಾತನಾಡಿ, ಸರ್ಕಾರ ಲಾಕ್‌ ಡೌನ್‌ ಸಡಿಲಗೊಳಿಸಿ ಬೆಳಗ್ಗೆ 7 ರಿಂದ  ಸಂಜೆ 7ಗಂಟೆವರೆಗೆ ವ್ಯಾಪಾರ ವಹಿವಾಟು ಗಳಿಗೆ ಅವಕಾಶ ಮಾಡಿಕೊಟ್ಟಿದೆ. ಆದರೆ ತಾಲೂಕಿನಲ್ಲಿ ಕೊರೊನಾ ತಡೆಗಟ್ಟುವ ದಿಸೆಯಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆವರೆಗೆ ವ್ಯಾಪಾರ ವಹಿವಾಟಿಕೆ ಅವಕಾಶ ನೀಡಲಾಗಿತ್ತು.

ಆದರೆ ವರ್ತ ಕರು ಮತ್ತು ಗ್ರಾಹಕರು ಮತ್ತಷ್ಟು  ಸಮಯ ವನ್ನು ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ, ಈ ಕ್ರಮ ಕೈಗೊಳ್ಳಲಾಗಿದೆ. ವರ್ತಕರ, ಸಾರ್ವಜನಿಕರ ಸಹಕಾರದಿಂದ  ತಾಲೂಕಿನಲ್ಲಿ ಈವರೆಗೂ ಕೊರೊನಾ ಕಾಣಿಸಿಕೊಂಡಿಲ್ಲ ತಡೆಗಟ್ಟಲು ಸಹಕರಿಸಿದ ಎಲ್ಲರಿಗೂ  ಧನ್ಯವಾದ ಹೇಳಿದರು. ವರ್ತಕರು ಗ್ರಾಹಕರಿಂದ ದುಪಟ್ಟ ಹಣ ಪಡೆಯುತ್ತಿದ್ದಾರೆ ಎಂದು ಸಭೆಯ ಲ್ಲಿದ್ದ ಜನರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ರೈತರ ಮೇಲೆ ಹೊರೆ ಹಾಕಬೇಡಿ ಅಂಗಡಿಗಳ ಮುಂದೆ ಕಡ್ಡಾಯವಾಗಿ  ದರಗಳ ಪಟ್ಟಿ ಹಾಕುವಂತೆ ವರ್ತಕರಿಗೆ ಸೂಚಿಸಿದರು. ತಹಶೀಲ್ದಾರ್‌ ವಿಶ್ವನಾಥ್‌ ಮಾತನಾಡಿ ನಾಲ್ಕನೇ ಲಾಕ್‌ಡೌನ್‌ ಮೇ 31ರವರೆಗೂ ಮುಂದುವರೆದಿದ್ದು 144 ಸೆಕ್ಷನ್‌ ಜಾರಿ ಯಲ್ಲಿ ಇದೆ ಎಂದರು. ಸಿಪಿಐ ನಿರಂಜನ್‌ ಕುಮಾರ್‌, ಪುರಸಭೆ  ಮುಖ್ಯಾಧಿಕಾರಿ ಆರ್‌.ರಮೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next