Advertisement

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

05:51 PM Nov 25, 2024 | Team Udayavani |

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳದಿಂದ ಕಟಪಾಡಿ ಉದ್ಯಾವರ ಪರಿಸರದಲ್ಲಿ ಹೆದ್ದಾರಿಯ ಅಂಚಿನಲ್ಲಿ ಹೊಂಡ ಗುಂಡಿಗಳು ಬಿದ್ದು, ಪಾದಚಾರಿಗಳು, ಸೈಕಲ್‌ ಸವಾರರು, ದ್ವಿಚಕ್ರ ವಾಹನಿಗರು ಸಂಚರಿಸಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಕೆಲವೆಡೆ ರಾಷ್ಟ್ರೀಯ ಹೆದ್ದಾರಿಯ ಅಂಚು ಎತ್ತರವಾಗಿದೆ. ಇಲ್ಲಿ ಹೆದ್ದಾರಿಯಿಂದ ವಾಹನ ಕೆಳಗಿಸುವಾಗ ಅಪಾಯವಿದೆ. ಕೆಲವೆಡೆ ಹೆದ್ದಾರಿ ಅಂಚಿನಲ್ಲಿ ಪಾದಚಾರಿ ಮಣ್ಣಿನ ರಸ್ತೆ ಹೊಂಡಗುಂಡಿಗಳಿಂದ ಆವರಿಸಿದೆ. ಇಲ್ಲಿ ಒಂದೊಮ್ಮೆ ದೊಡ್ಡ ವಾಹನಗಳು ರಸ್ತೆ ಬದಿಯಲ್ಲೇ ಸಾಗಿದಾಗ ರಕ್ಷಣೆಗಾಗಿ ಕೆಳಗೆ ಇಳಿಯಲೂ ಆಗದ ಸ್ಥಿತಿ ಇದೆ.

ರಾ.ಹೆ.ಯಲ್ಲಿ ಘನ ವಾಹನಗಳು ಪೈಪೋಟಿಯಲ್ಲಿ ಸಾಗುತ್ತಿರುವಾಗ ದ್ವಿಚಕ್ರ ವಾಹನ, ಸೈಕಲ್‌ ಸವಾರರು ರಾ.ಹೆ. ಬಿಟ್ಟು ಕೆಳಕ್ಕೆ ಇಳಿಯಲೇ ಬೇಕಾಗುತ್ತದೆ. ಆದರೆ ಹಾಗೆ ಇಳಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಅದರಲ್ಲೂ ಶಾಲೆಗೆ ತೆರಳುವ ಬಹುತೇಕ ವಿದ್ಯಾರ್ಥಿಗಳು ಸೈಕಲ್‌ ಬಳಸುತ್ತಿದ್ದು ಅವರು ಭಯದಿಂದಲೇ ಸೈಕಲ್‌ ಓಡಿಸಬೇಕಾಗಿದೆ. ಲಘು ವಾಹನಗಳು ಘನ ವಾಹನಗಳಿಗೆ ಸೈಡ್‌ ಕೊಡುವ ಧಾವಂತದಲ್ಲಿ ಕೆಳಗೆ ಇಳಿದರೆ ಹೊಂಡ ಗುಂಡಿಗೆ ಸಿಲುಕುತ್ತಾರೆ.

ಸ್ಥಳೀಯವಾಗಿ ಅಂಗನವಾಡಿ, ಹಾಲಿನ ಡೈರಿಗೆ, ಉದ್ಯೋಗಕ್ಕೆ ತೆರಳುವವರು, ಬಸ್ಸು ಕಾಯುವವರು ಈ ಭಾಗದಲ್ಲಿ ಹೆಚ್ಚು ಸಂಚರಿಸುತ್ತಿದ್ದಾರೆ. ಇಂತಹ ಅಪಾಯಕಾರಿ ಪ್ರದೇಶವನ್ನು ಗುರುತಿಸಿ ಮಣ್ಣು ಸುರಿದು ಸಮತಟ್ಟುಗೊಳಿಸುವ ಜತೆಗೆ ರಾ.ಹೆದ್ದಾರಿಯ ಅಂಚನ್ನು ಪಾದಚಾರಿ ಮಾರ್ಗಕ್ಕೆ ಸರಿ ಹೊಂದುವಂತೆ ಸಮರ್ಪಕವಾಗಿ ನಿರ್ವಹಣೆ ನಡೆಸಬೇಕಿದೆ.

ಕೂಡಲೇ ಸರಿಪಡಿಸಿ
ರಾ.ಹೆದ್ದಾರಿ ಅಂಚಿನಲ್ಲಿ ಅಪಾಯಕಾರಿ ಹೊಂಡಗುಂಡಿಗಳು ತಲೆ ಎತ್ತಿವೆ. ಸ್ವಲ್ಪ ಆಯತಪ್ಪಿದರೂ ಅಪಾಯ ಗ್ಯಾರಂಟಿ. ವೇಗವಾಗಿ ಸಂಚರಿಸುವ ವಾಹನಗಳ ಮೇಲಾಟದ ಸಂದರ್ಭ ಮತ್ತಷ್ಟು ಅಪಾಯಕಾರಿ ಪರಿಸ್ಥಿತಿ ಇದೆ. ಕೂಡಲೇ ಪಾದಚಾರಿ ಮಾರ್ಗ, ಹೆದ್ದಾರಿ ಅಂಚನ್ನು ಸರಿಪಡಿಸಿ ಸುವ್ಯವಸ್ಥೆ ಮಾಡಬೇಕು.
-ನಿತಿನ್‌ ವಿ. ಶೇರಿಗಾರ್‌, ಕಟಪಾಡಿ ಸಿ.ಎ. ಬ್ಯಾಂಕ್‌ ನಿರ್ದೇಶಕರು, ಮೂಡಬೆಟ್ಟು, ಕಟಪಾಡಿ

Advertisement

ಅಪಾಯ ಕಾದಿದೆ
ಹೊಂಡ ಗುಂಡಿಗಳಲ್ಲಿ ನೀರು ತುಂಬಿ ವಾಹನಗಳ ಭರಾಟೆಯ ಅತೀವೇಗದ ಸಂಚಾರದ ಸಂದರ್ಭ ರಿಕ್ಷಾ ಅಥವಾ ಲಘು ವಾಹನಗಳನ್ನು ಹೆದ್ದಾರಿ ಬಿಟ್ಟು ಕೆಳಗಿಳಿಸಿದಲ್ಲಿ ಬಹಳಷ್ಟು ಅಪಾಯವಾಗಲಿದೆ. ಕೂಡಲೇ ರಾ.ಹೆ. ಇಲಾಖೆಯವರು ಎಚ್ಚೆತ್ತು, ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿ ಪಾದಚಾರಿ ಮಾರ್ಗಕ್ಕೆ ಮಣ್ಣು, ಕ್ರಶರ್‌ ಹುಡಿ, ಅಥವಾ ಇತರ ವ್ಯವಸ್ಥೆ ಮಾಡಬೇಕು.
– ಭಾಸ್ಕರ ಪೂಜಾರಿ, ರಿಕ್ಷಾ ಚಾಲಕರು, ಕಟಪಾಡಿ

Advertisement

Udayavani is now on Telegram. Click here to join our channel and stay updated with the latest news.

Next