ಮೈಸೂರು : ವಿಧಾನ ಪರಿಷತ್‌ಗೆ ತಜ್ಞರು, ಬುದ್ದಿಜೀವಿಗಳು ಆಯ್ಕೆಯಾಗಿ ಹೋಗಬೇಕು.ಆದರೆ ಹಿನ್ನೆಲೆ ಹೇಗೇ ಇದ್ದರೂ ದುಡ್ಡೊಂದಿದ್ದಾರೆ ಸಾಕು ಎನ್ನುವಂತಾಗಿದೆ ಎಂದು ಶುಕ್ರವಾರ ಶಾಸಕ ಜಿ.ಟಿ. ದೇವೆಗೌಡ ಹೇಳಿಕೆ ನೀಡಿದ್ದಾರೆ.
ಪರಿಷತ್ ಚುನಾವಣೆಗೆ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಮೈಸೂರಿಗಷ್ಟೇ ಅಲ್ಲ ಇಡೀ ರಾಜ್ಯಕ್ಕೆ ಒಂದು ಹೊಸ ಶಕ್ತಿ ತುಂಬಲಿದೆ.
ಬಹುಮತ ಪಡೆದ ಪಕ್ಷಕ್ಕೆ ಒಂದು ಹೊಸ ಚೈತನ್ಯ ತುಂಬಲಿದೆ ಎಂದರು.
ಮೈಸೂರಿನಲ್ಲಿ ಎರಡು ಮತಗಳಿಗೆ ಅವಕಾಶ ಇದೆ.ನಾನು ಮೊದಲ, ಎರಡನೇ ಪ್ರಾಶಸ್ತ್ಯ ಮತ ಹಾಕಿದ್ದೇನೆ. ಯಾರಿಗೆ ಎಂಬುದನ್ನು ಬಹಿರಂಗಪಡಿಸಿದರೆ ಕಾನೂನು ಉಲ್ಲಂಘನೆ ಆಗುತ್ತದೆ ಎಂದು ಕುತೂಹಲ ಮೂಡಿಸಿದರು.
ಮೈಸೂರಿನಲ್ಲಿ ಮಂಜುನಾಥ ಸ್ವಾಮಿಯ ಬೆಳ್ಳಿಯ ಕಾಯಿನ್, ಜೊತೆಗೆ ಉಪ್ಪು, ಮಾರಿ ಕೂದಲು ಇಟ್ಟು ಆಣೆ ಪ್ರಮಾಣ ಮಾಡಿಸಲಾಗಿದೆ. ಇದನ್ನೆಲ್ಲ ನೋಡಿದರೆ ವಿಧಾನ ಪರಿಷತ್‌ನ ಪಾವಿತ್ರ್ಯತೆಗೆ ಕಳಂಕ ಅಲ್ಲವೇ..? ಎಂದು ಪ್ರಶ್ನಿಸಿದರು.
ನನಗೇನು ಜೆಡಿಎಸ್ ಬಾಗಿಲು ಬಂದ್ ಮಾಡೋದು..?.ನಾನೇ ದೇವೆಗೌಡರ ಮನೆ ಬಾಗಿಲನ್ನು ದಡಾರಂತ ಕ್ಲೋಸ್ ಮಾಡಿಕೊಂಡು ಬಂದಿದ್ದೇನೆ.ಅಂದಿನಿಂದ ಬಾಗಿಲು ಹಾಕಿದ್ದರೋ, ತೆಗೆದಿದ್ದಾರೋ ನಾನ್ಯಾಕೆ ನೋಡಲಿ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.