Advertisement

Congress: ಹಣ, ಮದ್ಯ ಹಂಚಿಕೆಯಲ್ಲಿ ಬಿಜೆಪಿ ಜತೆ ಪೈಪೋಟಿ: ಬಿ.ಕೆ.ಹರಿಪ್ರಸಾದ್‌

03:24 AM Nov 25, 2024 | Team Udayavani |

ಮಂಗಳೂರು: ಹಣ, ಹೆಂಡ ಹಂಚಿಕೆಯಲ್ಲಿ ನಾವು ಬಿಜೆಪಿ ಜತೆ ಪೈಪೋಟಿ ನಡೆಸಿದ್ದೇವೆ. ನಾವೇನೂ ಸಾಧು ಸಂತರಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದರು.

Advertisement

ಮಂಗಳೂರಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2 ರಾಜ್ಯಗಳ ವಿಧಾನಸಭಾ ಫಲಿತಾಂಶವನ್ನು ಗಮನಿಸಿದಾಗ ಜನ ಮಿಶ್ರ ಪ್ರತಿಕ್ರಿಯೆ ನೀಡಿದಂತಿದೆ. ಝಾರ್ಖಂಡ್‌ನ‌ ಮತದಾರರು ಬಿಜೆಪಿಯ ಸುಳ್ಳು ಪ್ರಚಾರಕ್ಕೆ ಬೆಲೆ ನೀಡದೆ, ಐಎನ್‌ಡಿಐಯ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿದ್ದಾರೆ. ಝಾರ್ಖಂಡ್‌ ಮುಖ್ಯಮಂತ್ರಿಯನ್ನು ಜೈಲಿಗೆ ಹಾಕಿ ಸುಳ್ಳು ಹೇಳಿ ಬಿಜೆಪಿ ಚುನಾವಣೆ ಗೆಲ್ಲಲು ಪ್ರಯತ್ನಿಸಿದರೂ ಜನ ಅದಕ್ಕೆ ಸ್ಪಂದಿಸಲಿಲ್ಲ ಎಂದರು.

ನಿರುದ್ಯೋಗ ಹೆಚ್ಚಳ
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಿರುದ್ಯೋಗ, ಭ್ರಷ್ಟಾಚಾರ ಹೆಚ್ಚಿದೆ. ಅಮೆರಿಕದ ಸಂಸ್ಥೆಯೂ ಭಾರತದ ಭ್ರಷ್ಟಾಚಾರದ ಬಗ್ಗೆ ಮಾತನಾಡುವಂತಾಗಿದೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಕಾಂಗ್ರೆಸ್‌ಗಿಂತ ಅಧಿಕವಿದೆ ಎಂದರು.

ರಾಜ್ಯದಲ್ಲಿ “ಕೈ’ ಹಿಡಿದ ಗ್ಯಾರಂಟಿ
ರಾಜ್ಯದಲ್ಲಿ ಗ್ಯಾರಂಟಿ ಅನುಷ್ಠಾನ, ಜನರಿಗೆ ನೆಮ್ಮದಿಯ ಬದುಕು ನೀಡಿರುವುದು, ಅಲ್ಪಸಂಖ್ಯಾ ಕರು ನೆಮ್ಮದಿಯಿಂದ ಬಂದು ಮತದಾನ ಮಾಡುವ ವಾತಾವರಣ ಸೃಷ್ಟಿಸಿರುವುದು ಕಾಂಗ್ರೆಸ್‌ ಗೆಲುವಿಗೆ ಕಾರಣವಾದ 3 ಪ್ರಮುಖ ಅಂಶಗಳು ಎಂದರು.

ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಸಿಎಂ ಬದಲಾವಣೆಯ ಯಾವುದೇ ಪ್ರಸ್ತಾವವಿಲ್ಲ. ಎರಡೂವರೆ ವರ್ಷ ಅಧಿಕಾರ ಹಂಚಿಕೆ ಸೂತ್ರ ಮಾಧ್ಯಮಗಳಲ್ಲಿ ಮಾತ್ರ ವರದಿಯಾಗಿದೆ ಹೊರತು ಬೇರೆಲ್ಲೂ ಆಗಿಲ್ಲ ಎಂದು ಹೇಳಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಸಚಿವ ಅಭಯಚಂದ್ರ ಜೈನ್‌, ಮಾಜಿ ಶಾಸಕ ಜೆ.ಆರ್‌. ಲೋಬೊ, ಮಾಜಿ ಮೇಯರ್‌ ಶಶಿಧರ ಹೆಗ್ಡೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್‌ ಪೂಜಾರಿ, ಮಿಥುನ್‌ ರೈ, ಮೊದಲಾದವರು ಉಪಸ್ಥಿತರಿದ್ದರು.

Advertisement

ಮಹಾರಾಷ್ಟ್ರಕ್ಕೆ ಕಂಟೈನರ್‌ನಲ್ಲಿ ಹಣ ರವಾನೆ
ಮಹಾರಾಷ್ಟ್ರದಲ್ಲಿ ಹಣ ಬಲದಿಂದ ಬಿಜೆಪಿ ಗೆದ್ದಿದೆ. ಅಲ್ಲಿಗೆ ಕಂಟೈನರ್‌ನಲ್ಲಿ ಹಣ ಬಂದಿದೆ. ಅಲ್ಪಸಂಖ್ಯಾಕರು, ದಲಿತರು ಹೆಚ್ಚಿನ ಪ್ರಮಾಣದಲ್ಲಿ ಇರುವ ಕಡೆಯೂ ಬಿಜೆಪಿ ಗೆದ್ದಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಂಪಾಯರ್‌ ಬೆಂಬಲಿಸುವ ತಂಡಕ್ಕೆ ಗೆಲುವು ಖಚಿತ ಎಂಬಂ ತಾಗಿದೆ ಎಂದು ಹರಿಪ್ರಸಾದ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next