Advertisement
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗುಜರಾತ್ ನ ಕೆವಡಿಯಾದಲ್ಲಿ ಸಭಾಧ್ಯಕ್ಷರ 80ನೇ ಸಮ್ಮೇಳನ ನಡೆದಿದ್ದು, ಇದರಲ್ಲಿ ಹಲವು ಮಹತ್ವದ ಚರ್ಚೆಗಳು ನಡೆದಿವೆ. 25 ರಾಜ್ಯಗಳ ಸಭಾಧ್ಯಕ್ಷರು ಪಾಲ್ಗೊಂಡಿದ್ದು, ನವೆಂಬರ್ 26 ರಂದು ರಾಷ್ಟ್ರಪತಿಗಳು ಸಂವಿಧಾನದ ಪ್ರಸ್ತಾವನೆ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ ಸಮಾರೋಪ ಭಾಷಣ ಮಾಡಿದರು. ಸಂವಿಧಾನ ಬದ್ದ ಜವಾಬ್ದಾರಿ ಇರುವ ನಾವು ಸಮರ್ಥವಾಗಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದೇವೆ.
Related Articles
Advertisement
ಪ್ರಧಾನಿ ಮೋದಿ, ಒಂದು ರಾಷ್ಟ್ರ ಒಂದು ಚುನಾವಣೆಯ ಬಗ್ಗೆ ಪ್ರಸ್ತಾಪಿಸಿದ್ದು, ಇದನ್ನು ಲೋಕಸಭೆಯಲ್ಲಿ ಚರ್ಚೆಗೆ ಬರುವಂತೆ ಮಾಡುವ ಜವಾಬ್ದಾರಿ ಇದೆ. ಈ ವಿಷಯದಲ್ಲಿ ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ. ಕುಮಾರಸ್ವಾಮಿ, ಮಾಧುಸ್ವಾಮಿ ಜೊತೆ ಮಾತನಾಡಿ, ಅಧಿವೇಶನದ ಕೊನೆಯ ಎರಡು ದಿನ ಚರ್ಚಿಸಲು ತೀರ್ಮಾನಿಸಲಾಗಿದೆ.
ಶಾಸನ ಸಭೆಯ ಸದಸ್ಯರು ಇದನ್ನು ಗಂಭೀರವಾಗಿ ತೆಗೆದುಕೊಂಡು, ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ತಮ್ಮ ಸಲಹೆ ಸೂಚನೆ ನೀಡಿ, ಫಲಪ್ರದ ಚರ್ಚೆಯಾಗಿಸಬೇಕು. ಚುನಾವಣೆ ಸುಧಾರಣೆಯ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಕೆಲವು ಜಿಜ್ಞಾಸೆಗಳಿದ್ದು, ಮುಕ್ತವಾಗಿ ಚರ್ಚೆಯಾಗಲಿ ಎಂದು ತಿಳಿಸಿದರು.
ಕಳೆದ ಬಾರಿಯಂತೆ ಈ ಬಾರಿಯೂ ಅಧಿವೇಶನ ನಡೆಯಲಿದೆ. ಶಾಸಕರಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಗುವುದು. ಪತ್ರಕರ್ತರಿಗೂ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 10 ಬಿಲ್ ಅಧಿವೇಶನದಲ್ಲಿದಲ್ಲಿ ಮಂಡನೆಯಾಗುವ ಸಾಧ್ಯತೆಯಿದ್ದು, ಇನ್ನು ಕೆಲವು ಬಿಲ್ ಗಳು ಸರ್ಕಾರದಿಂದ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಪ್ರಯತ್ನದ ಹಿಂದೆ ವಿಜಯೇಂದ್ರ ಒತ್ತಡ ಇರಬಹುದು: ಕಾಂಗ್ರೆಸ್
ಕೋವಿಡ್ ಟೆಸ್ಟ್ ಮಾಡುವ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ಆರೋಗ್ಯ ಇಲಾಖೆ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು.
ಸಂವಿಧಾನದ ಬಗ್ಗೆ ಚರ್ಚೆ ಮಾಡಿದ್ದು ರಾಷ್ಟ್ರಪತಿಗೆ ಪ್ರಧಾನಿಗೆ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ, ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಮಾಹಿತಿ ನೀಡಲು ಎಲ್ಲ ಸಿದ್ಧತೆಗಳನ್ನು.ಮಾಡಿಕೊಂಡಿದ್ದೇವೆ. ಈ ಕುರಿತ ಒಂದು ಪುಸ್ತಕ ಹೊರತರಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ.
ನಾವು ಮಾಡಿದ ಚರ್ಚೆಯ ಬಗ್ಗೆ, ಸಭೆಯ ಮಾಹಿತಿಯನ್ನು ಸ್ಪೀಕರ್ ಸಮ್ಮೇಳನದಲ್ಲಿ ಎಲ್ಲರಿಗೂ ನೀಡಲಾಗಿದೆ. ಶೀಘ್ರವಾಗಿ ದೆಹಲಿಗೆ ತೆರಳಿ ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುವುದು ಎಂದರು.
ಇದನ್ನೂ ಓದಿ: ಕೋವಿಡ್-19ಗೆ ಸಂಭಾವ್ಯ ಚಿಕಿತ್ಸೆ ಅಭಿವೃದ್ಧಿಪಡಿಸಿದ ಅನಿಕಾ ಚೆಬ್ರೊಲು