Advertisement

Kerala ವಿಧಾನಸಭೆಯಲ್ಲಿ ಓಣಂ ಔತಣ ಕೂಟ; ಸ್ಪೀಕರ್ ಸೇರಿ ಹಲವರಿಗೆ ಸಿಗಲಿಲ್ಲ ಊಟ!

10:42 PM Aug 25, 2023 | Team Udayavani |

ತಿರುವನಂತಪುರಂ: ಕೇರಳದ ಅಸೆಂಬ್ಲಿ ನೌಕರರಿಗಾಗಿ ಆಯೋಜಿಸಲಾಗಿದ್ದ ಓಣಂ ಭೋಜನ ಕೂಟದಲ್ಲಿ ಸ್ಪೀಕರ್ ಸೇರಿ ಹಲವಾರು ಊಟ ಸಿಗದೇ ನಿರಾಶೆಯಿಂದ, ಹಸಿವಿನಿಂದ ವಾಪಾಸಾದ ಘಟನೆ ಶುಕ್ರವಾರ ನಡೆದಿದೆ.

Advertisement

ಭೋಜನ ಕೂಟದಲ್ಲಿ ಕೇರಳ ವಿಧಾನಸಭೆಯ ಸ್ಪೀಕರ್ ಎ.ಎನ್.ಶಂಸೀರ್ ಅವರು 20 ನಿಮಿಷಕ್ಕೂ ಹೆಚ್ಚು ಕಾಲ ಕಾದರೂ ಪೂರ್ಣ ಪ್ರಮಾಣದ ಊಟ ಸಿಗಲಿಲ್ಲ. ಅವರಿಗೆ ಬೇರೆ ದಾರಿಯೇ ಕಾಣದೆ ಬಾಳೆ ಎಲೆಯ ಮೇಲೆ ಮೊದಲು ಬಡಿಸಿದ ಪಾಯಸ ಮತ್ತು ಬಾಳೆಹಣ್ಣಿನೊಂದಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಮೊದಲು ಎಲ್ಲಾ ನೌಕರರು ಹಣ ಸಂಗ್ರಹಿಸಿ ಓಣಂ ಹಬ್ಬ ಆಚರಣೆ ಸೇರಿದಂತೆ ಔತಣಕೂಟ ಆಯೋಜಿಸುತ್ತಿದ್ದರು. ಆದರೆ, ಈ ಬಾರಿ ಜವಾಬ್ದಾರಿಯನ್ನು ಗುತ್ತಿಗೆ ನೀಡಿ ಸರಕಾರದ ಖರ್ಚಿನಲ್ಲಿ ನಡೆಸುವ ಪ್ರಯತ್ನ ವಿಫಲವಾಯಿತು.1300 ಜನರಿಗೆ ತರಿಸಲಾಗಿದ್ದ ವಿವಿಧ ಖಾದ್ಯಗಳ ಭೋಜನ ಕೇವಲ 800 ಮಂದಿ ಊಟ ಮಾಡಿದಾಗಲೇ ಮುಗಿದು ಹೋಗಿತ್ತು.

ವರದಿಗಳ ಪ್ರಕಾರ, ಉದ್ಯೋಗಿಗಳಲ್ಲೇ ಅಸಮಾಧಾನವಿದ್ದು, ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ವರದಿಯಾಗಿದೆ. ಹಲವರು ಹತ್ತಿರದ ಹೋಟೆಲ್, ಕ್ಯಾಂಟೀನ್ ಮತ್ತು ಅಂಗಡಿಗಳಿಗೆ ತೆರಳಿ ಹಸಿವು ನೀಗಿಸಿಕೊಂಡ ದೃಶ್ಯ ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next