Advertisement
ಐತಿಹಾಸಿಕ ಹಿನ್ನೆಲೆಯ ದೇವಾಲಯಗಳು ನಾಡಿನ ಸಾಂಪ್ರದಾಯಿಕ ಪ್ರತೀಕಗಳಾಗಿದ್ದು, ಅವುಗಳ ಪೈಕಿ ಪ್ರಮುಖವಾಗಿ ಕಾಣಸಿಗುವ ದೇವಾಲಯಗಳಲ್ಲಿ ತಾಲೂಕಿನ ವೈದ್ಯನಾಥಪುರ ಗ್ರಾಮದ ಶ್ರೀ ಪ್ರಸನ್ನ ಪಾರ್ವತಾಂಭ, ವೈದ್ಯನಾಥೇಶ್ವರ ದೇವಾಲಯವೂ ಒಂದಾಗಿದ್ದು, ತನ್ನದೇ ಆದ ಇತಿಹಾಸ ಮತ್ತು ಭಕ್ತಗಣವನ್ನು ಹೊಂದಿದೆ. ಪುರಾಣ ಪ್ರಸಿದ್ಧ ದೇವಾಲಯ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವೈದ್ಯನಾಥಪುರದ ಶಿಂಷಾ ನದಿಯ ದಡದಲ್ಲಿದ್ದು, ಪೌರಾಣಿಕ ಪ್ರತೀತಿಯುಳ್ಳವೈದ್ಯನಾಥೇಶ್ವರಸ್ವಾಮಿ ನೆಲೆಗೊಂಡ ಬಗ್ಗೆ ಸಾಕಷ್ಟು ಭಕ್ತಿಪ್ರಧಾನ ನಂಬಿಕೆಗಳು ಈಗಲೂ ಜನರಲ್ಲಿ ಮನೆಮಾಡಿದೆ.
ಕ್ಷೇತ್ರದ ಸಮೀಪದಲ್ಲಿರುವ ನಗರಕೆರೆಯಲ್ಲಿ ಆಳ್ವಿಕೆ ನಡೆಸುತ್ತಿದ್ದ ಶ್ರೀ ಗಂಗ ಅರಸನು ಗೋ ಶಾಲೆ ನಿರ್ವಹಿಸುತ್ತಿದ್ದನು. ತಾನು ಸಾಕಿದ ಹಸುಗಳು ದಿನನಿತ್ಯ ಹಾಲು ನೀಡುತ್ತಿದ್ದವಾ ದರೂ, ಅವುಗಳ ಪೈಕಿ ಒಂದು ಹಸು ಮಾತ್ರ ದಿನನಿತ್ಯ ಹಾಲು ನೀಡುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಅರಸ ಹಸುವನ್ನು ಹಿಂಬಾಲಿಸಿದಾಗ ಅಚ್ಚರಿಯೊಂದು ಕಾದಿತ್ತು. ಹಸು ನದಿ ದಡದಲ್ಲಿದ್ದ ಹುತ್ತವೊಂದಕ್ಕೆ ಹಾಲೆರೆಯುವ ದೃಶ್ಯ ಕಂಡ ಅರಸ ಗಾಬರಿಗೊಂಡು ಕುತೂಹಲದಿಂದ ಹುತ್ತವನ್ನು
ಹೊಡೆಯುತ್ತಿದ್ದಾಗ ಹುತ್ತದೊಳಗಿದ್ದ ಉದ್ಭವ ಲಿಂಗಕ್ಕೆ ಆಯುಧ ದಿಂದ ಪೆಟ್ಟಾಗಿ ಲಿಂಗದ ತಲೆಯ ಭಾಗದಿಂದ ರಕ್ತಸುರಿಯಲಾರಂಭಿಸಿತು.
Related Articles
ಗಾಯವಾದ ಭಾಗಕ್ಕೆ ಲೇಪಿಸು’ ಎಂಬುದಾಗಿ ಕೇಳಿಸಿತು. ಅದರಂತೆ ಅರಸ ನಡೆದುಕೊಂಡಾಗ ರಕ್ತಸ್ರಾವ ನಿಲ್ಲುತ್ತದೆ. ಇದರಿಂದ ಭಕ್ತಿ ಪರವಶನಾದ ಅರಸನು ಆ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲು ಮುಂದಾಗುತ್ತಾನೆ. ತನಗೆ ತಾನೇ ವೈದ್ಯ ಮಾಡಿಕೊಂಡದ್ದರಿಂದಾಗಿ ಈ ಕ್ಷೇತ್ರಕ್ಕೆ ವೈದ್ಯನಾಥೇಶ್ವರ ಎಂದು ಹೆಸರು ಬಂದಿದ್ದು, ಗ್ರಾಮಕ್ಕೆ ವೈದ್ಯನಾಥಪುರ ಎಂಬ ಹೆಸರಾಯಿತೆಂಬುದು ಪ್ರತೀತಿ.
Advertisement
ಗೋವಿನ ಹಾಡಿನ ತವರೂರು“ಧರಣಿ ಮಂಡಲ ಮಧ್ಯದೊಳಗೆ……”ಎಂಬ ಪ್ರಸಿದ್ಧ ಜನಪದ ಹಾಡಿನ ಹುಟ್ಟು ಈ ಕ್ಷೇತ್ರದಲ್ಲಾಗಿದ್ದು, ಹಾಡನ್ನು ಒಬ್ಬ ಅಜ್ಞಾತ ಬ್ರಾಹ್ಮಣ ಕವಿಯು ರಚಿಸಿದ್ದಾನೆ ಎಂಬುದು ಇತಿಹಾಸದ ಉಲ್ಲೇಖ. ಅಂತೆಯೇ ಕದಂಬ ಋಷಿಗಳ ತಪೋಭೂಮಿ ಎಂದೂ ಸಹ ಕರೆಯಲಾಗಿದೆ. ಈ ಕ್ಷೇತ್ರದಲ್ಲಿ ಕದಂಬ ಜಂಗಮ ಮಠವೂ ಇದ್ದು, ಈ ಮಠವನ್ನು ಮಠಾಧೀಶರಾದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮಿಗಳು ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಮಠದಲ್ಲಿ ಸಂಸ್ಕೃತ ವಿದ್ಯಾಪೀಠವನ್ನೂ ತೆರೆಯಲು ಸಿದ್ಧತೆಗಳು ನಡೆದಿವೆ. “ಚರ್ಮವ್ಯಾಧಿ’ಗೆ ಹುತ್ತದ ಮಣ್ಣು “ಔಷಧಿ’!
ವೈದ್ಯನಾಥೇಶ್ವರ ಎಂಬ ಹೆಸರಿನ ದೇವಾಲಯಗಳು ದೇಶದಲ್ಲಿ ಕೇವಲ ಮೂರು ಸ್ಥಳಗಳಲ್ಲಿ ಮಾತ್ರವಿದ್ದು, ಅವುಗಳಲ್ಲಿ ಎರಡು ಕರ್ನಾಟಕದ ವೈದ್ಯನಾಥಪುರ ಮತ್ತು ತಲಕಾಡಿನಲ್ಲಿವೆ. ಮತ್ತೊಂದು ನೆರೆಯ ರಾಜ್ಯದ ತಮಿಳುನಾಡಿನಲ್ಲಿದ್ದು, ಈ ಐತಿಹಾಸಿಕ
ದೇವಾಲಯದಲ್ಲಿ ಬರುವ ಭಕ್ತರಿಗೆ ಚರ್ಮ ಸಂಬಂಧಿ ಕಾಯಿಲೆಗಳಾದ ಅದರಲ್ಲೂ ಮಕ್ಕಳಿಗೆ ತಲೆಯಲ್ಲಾಗುವ ನಾಗರ ಎಂಬ ಗಾಯಕ್ಕೆ ಇಲ್ಲಿನ ಹುತ್ತದ ಮಣ್ಣನ್ನೇ ಪ್ರಸಾದವಾಗಿ ನೀಡಲಾಗುತ್ತದೆ. ಇದರಿಂದ ಸಾವಿರಾರು ಮಕ್ಕಳಿಗೆ ಚರ್ಮವ್ಯಾಧಿ ಕಾಯಿಲೆಗಳು ಗುಣವಾಗಿರುವ ಉದಾಹರಣೆಗಳು ಸಾಕಷ್ಟಿವೆ. ದೇವಾಲಯಕ್ಕೆ ಆಗಮಿಸುವ ಭಕ್ತರು ಶ್ರದ್ಧೆ, ಮಡಿ ಮತ್ತು ಭಕ್ತಿಯಿಂದ ದೇವರ ಸೇವೆ ಮಾಡಿದರೆ, ಯಾವುದೇ ಕಾಯಿಲೆಗಳು 3 ರಿಂದ 5 ವಾರಗಳಲ್ಲಿ ಗುಣಮುಖವಾಗಲಿವೆ.
ಪ್ರತೀ ವರ್ಷ ಕಾರ್ತಿಕ ಮಾಸದ ಸೋಮವಾರಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ಅಪಾರ ಸಂಖ್ಯೆಯ ಭಕ್ತರು, ಶಿಂಷಾ ನದಿಯಲ್ಲಿ ಮಿಂದು ಬಳಿಕ ಹಲವು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ತಮ್ಮ ಇಷ್ಟಾರ್ಥಗಳನ್ನು ಪ್ರಾರ್ಥಿಸಿ
ನೆರವೇರಿಸಿಕೊಳ್ಳಲಿದ್ದಾರೆ. ದೇವಾಲಯದಲ್ಲಿ ಸ್ವಾಮಿಯವರಿಗೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ
ವಿನಿಯೋಗ ಜತೆಗೆ ಪ್ರತೀ ವರ್ಷದ ಮಾಘ ಬಹುಳ ಸಪ್ತಮಿಯಂದು ಈ ಕ್ಷೇತ್ರದಲ್ಲಿ ಮಹಾರಥೋತ್ಸವವು ಸಾವಿರಾರು ಭಕ್ತರ
ಸಮ್ಮುಖದಲ್ಲಿ ಜರುಗುತ್ತದೆ. ಪ್ರತಿ ಮಹಾ ಶಿವರಾತ್ರಿ ಆಚರಣೆಯಂದು ಭಕ್ತ ಸಮೂಹ ಬಂದು ರಾತ್ರಿಯಿಡೀ ಜಾಗರಣೆ ಮೂಲಕ
ವಿಶೇಷ ಪೂಜೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಹೊಯ್ಸಳ ಶೈಲಿಯಲ್ಲಿ ದೇಗುಲ ನಿರ್ಮಾಣ ದೇವಾಲಯ ನಿರ್ಮಾಣವು ಹೊಯ್ಸಳ ಶೈಲಿಯಲ್ಲಿದ್ದು, ಪ್ರಾಂಗಣವನ್ನು ಸುತ್ತಿದಾಗ
ದೇಗುಲದ ಕಟ್ಟಡವು ನಕ್ಷತ್ರಾಕಾರದಲ್ಲಿರುವುದು ಸ್ಪಷ್ಟವಾಗಿ ಗೋಚರಿಸಲಿದೆ. ವೈದ್ಯನಾಥೇಶ್ವರ, ಅರ್ಕೇಶ್ವರ, ಪಾತಾಳೇಶ್ವರ, ಮರುಳೇಶ್ವರ, ಮಲ್ಲಿಕಾರ್ಜುನ ಎಂಬ ಪಂಚ ಲಿಂಗಗಳಿದ್ದು, ಹಾಗೆಯೇ ವೈದ್ಯನಾಥೇಶ್ವರ ಸ್ವಾಮಿ ಪತ್ನಿ ಪ್ರಸನ್ನ ಪಾರ್ವತಾಂಬ ದೇವಿಯು ನೆಲೆಸಿದ್ದಾಳೆ. ಚಂಡಿಕೇಶ್ವರ ಹಾಗೂ ಅತ್ಯಂತ ವಿರಳವಾಗಿ ಕಾಣುವ ಸೂರ್ಯ ನಾರಾಯಣದೇವರ ಮೂರ್ತಿಯೂ ಇಲ್ಲಿ ಭಕ್ತರಿಗೆ ಪ್ರದರ್ಶನವಾಗಲಿದೆ. ನವಗ್ರಹ ಮತ್ತು ಗಣೇಶ ವಿಗ್ರಹಗಳ ಜತೆಗೆ ದೇವಾಲಯದ ಆವರಣದಲ್ಲಿ ಬಿಲ್ವ ಪತ್ರೆಯ
ಮರ ಇರುವುದು ವಿಶೇಷ. ■ ಎಸ್.ಪುಟ್ಟಸ್ವಾಮಿ