Advertisement

ಓಮಿಕ್ರಾನ್‍ಗೆ ಜನತೆ ಹೆದರುವ ಅಗತ್ಯವಿಲ್ಲ: ಪ್ರಮೋದ ಸಾವಂತ್

04:46 PM Dec 07, 2021 | Team Udayavani |

ಪಣಜಿ: ಕೋವಿಡ್-19 ರೂಪಾಂತರಿ ಓಮಿಕ್ರಾನ್‍ಗೆ ಜನತೆ ಹೆದರುವ ಅಗತ್ಯವಿಲ್ಲ, ಎಲ್ಲರೂ ಕೂಡ ಅಗತ್ಯ ಕಾಳಜಿ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದ್ದಾರೆ.

Advertisement

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ಗೋವಾದಲ್ಲಿ ಓಮಿಕ್ರಾನ್ ಶಂಕಿತರು ಪತ್ತೆಯಾಗಿದ್ದು, ಅವರ ತಪಾಸಣಾ ವರದಿ ಇನ್ನೂ ಬಂದಿಲ್ಲ. ಇದರಿಂದಾಗಿ ಖಚಿತ ವರದಿ ಬರುವ ಮುನ್ನವೇ ರಾಜ್ಯದಲ್ಲಿ ಯಾರೂ ಕೂಡ ಭಯದ ವಾತಾವರಣ ಸೃಷ್ಠಿಸಬಾರದು. ನಾನು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇನೆ ಎಂದು ನುಡಿದರು.

ರಾಜ್ಯದಲ್ಲಿ 1.20 ಲಕ್ಷ ಜನರು ಎರಡನೇಯ ಡೋಸ್ ಲಸಿಕೆ ಪಡೆದುಕೊಂಡಿಲ್ಲ, ಅವರು ಕೂಡಲೆ ಲಸಿಕೆ ಪಡೆದುಕೊಳ್ಳಬೇಕು ಎಂದು ಮಾಡಿದ್ದಾರೆ.

ನಾವು ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು, ಆದರೆ ಜನತೆ ಭಯಭೀತರಾಗುವ ಅಗತ್ಯವಿಲ್ಲ. ಡಿಸೆಂಬರ್ 19 ರ ಒಳಗೆ ಗೋವಾದಲ್ಲಿ ಎಲ್ಲರಿಗೂ 2 ನೇಯ ಡೋಸ್ ಲಸಿಕೆ ಪೂರ್ಣಗೊಳಿಸುವ ಉದ್ದೇಶ ನಾವು ಹೊಂದಿದ್ದೇವೆ. ಜನತೆ ನಮಗೆ ಸಹಕಾರ ನೀಡಬೇಕು. ಡಿಸೆಂಬರ್ 19 ರಂದು ಪ್ರಧಾನಿ ನರೇಂದ್ರ ಮೋದಿಯವರು ಗೋವಾಕ್ಕೆ ಆಗಮಿಸುತ್ತಿದ್ದಾರೆ. ಅದಕ್ಕೂ ಮುನ್ನ ರಾಜ್ಯದಲ್ಲಿ ಶೇ 100 ರಷ್ಟು ಜನರು ಕೋವಿಡ್ ಎರಡನೇಯ ಲಸಿಕೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next