Advertisement

ಕರ್ತಾರ್‌ಪುರ , ಶಾರದಾ ಪೀಠ: ಪಾಕಿಗೆ ಹೊಸ ಸರಕಾರದ ಸ್ಪಂದನೆ, ಉಮರ್‌ ಹಾರೈಕೆ

09:18 AM Mar 29, 2019 | Sathish malya |

ಶ್ರೀನಗರ : 2019ರ ಲೋಕಸಭಾ ಚುನಾವಣೆಯ ಬಳಿಕ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿರುವ ಹೊಸ ಸರಕಾರವು ಪಾಕಿಸ್ಥಾನದ ವಿಶ್ವಾಸವೃದ್ದಿ ಉಪಕ್ರಮಗಳಿಗೆ ಧನಾತ್ಮಕವಾಗಿ ಸ್ಪಂದಿಸಿ, ಪಾಕ್‌ ಜತೆಗೆ ಸಮಗ್ರ ಶಾಂತಿ ಮಾತುಕತೆಗೆ ಮುಂದಾದೀತು ಎಂಬ ಹಾರೈಕೆಯನ್ನು ನ್ಯಾಶನಲ್‌ ಕಾನ್ಫರೆನ್ಸ್‌ ನಾಯಕ ಉಮರ್‌ ಅಬ್ದುಲ್ಲ ವ್ಯಕ್ತಪಡಿಸಿದ್ದಾರೆ.

Advertisement

ಸಿಕ್ಖರ ಪವಿತ್ರ ಗುರುದ್ವಾರ ಕರ್ತಾರ್‌ಪುರ್‌ ಸಾಹಿಬ್‌ ಗೆ ತೆರಳಲು ಕಾರಿಡಾರ್‌ ನಿರ್ಮಾಣಕ್ಕೆ ಮುಂದಾಗಿರುವ ಬೆನ್ನಿಗೇ ಇದೀಗ ಹಿಂದೂಗಳ ಪವಿತ್ರ ಶಾರದಾ ಪೀಠಕ್ಕೆ ತೆರಳಲು ಕಾರಿಡಾರ್‌ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಿರುವ ಪಾಕಿಸ್ಥಾನದ ಈ ವಿಶ್ವಾಸ ವೃದ್ಧಿ ಉಪಕ್ರಮಗಳಿಗೆ ಕೇಂದ್ರದಲ್ಲಿ ಸದ್ಯದಲ್ಲೇ ಅಧಿಕಾರಕ್ಕೆ ಬರಲಿರುವ ಹೊಸ ಸರಕಾರ ಸೂಕ್ತ ರೀತಿಯಲ್ಲಿ ಧನಾತ್ಮಕವಾಗಿ ಸ್ಪಂದಿಸಬೇಕಿದೆ ಎಂದು ಉಮರ್‌ ಅಬ್ದುಲ್ಲ ಹೇಳಿದ್ದಾರೆ.

ಮೇ 23ರಂದು ಲೋಕಸಭಾ ಚುನಾವಣಾ ಫ‌ಲಿತಾಂಶ ಪ್ರಕಟಗೊಂಡ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬರಲಿರುವ ಹೊಸ ಸರಕಾರ, ಪಾಕಿಸ್ಥಾನದ ಜತೆಗೆ ಶಾಂತಿ, ಸೌಹಾರ್ದದ ಸಮಗ್ರ ಮಾತುಕತೆ ಆರಂಭಿಸಲಿದೆ ಎಂದು ಹಾರೈಸಬಹುದಾಗಿದೆ; ಅಂತೆಯೇ ಆ ದಿಶೆಯಲ್ಲಿ ಹೊಸ ಶಕೆ ಆರಂಭಗೊಂಡೀತೆಂದು ಆಶಿಸಬಹುದಾಗಿದೆ ಎಂದು ಉಮರ್‌ ಅಬ್ದುಲ್ಲ ತಮ್ಮ ಸರಣಿ ಟ್ವೀಟ್‌ ನಲ್ಲಿ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next