Advertisement

Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ

07:36 PM Nov 20, 2024 | Team Udayavani |

ಉಡುಪಿ: ಪರ್ಯಾಯ ಶ್ರೀಪುತ್ತಿಗೆ ಮಠದ ಬೃಹತ್‌ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞದಂಗವಾಗಿ ಶ್ರೀಕೃಷ್ಣಮಠದಲ್ಲಿ ಬುಧವಾರ ಆರಂಭಗೊಂಡ ಗೀತೋತ್ಸವವನ್ನು ಉದ್ಘಾಟಿಸಲು ಆಗಮಿಸಿದ ಕಾಂಚಿ ಕಾಮಕೋಟಿ ಪೀಠದ ಶ್ರೀಶಂಕರ ವಿಜಯೇಂದ್ರ ಸರಸ್ವತೀ ಸ್ವಾಮೀಜಿಯವರು ಶ್ರೀಚಂದ್ರಮೌಳೀಶ್ವರ, ಶ್ರೀಅನಂತೇಶ್ವರ, ಶ್ರೀಕೃಷ್ಣ- ಮುಖ್ಯಪ್ರಾಣ ದೇವರ ದರ್ಶನವನ್ನು ಪಡೆದರು.

Advertisement

ಸಂಸ್ಕೃತ ಕಾಲೇಜಿನಿಂದ ವೇದಘೋಷ, ವಾದ್ಯಘೋಷ, ಬಿರುದುಬಾವಲಿಗಳ ಸಹಿತ ಸಂಭ್ರಮದ ಮೆರವಣಿಗೆಯಲ್ಲಿ ಕಾಂಚೀ ಶಂಕರಾಚಾರ್ಯರನ್ನು ಪೂರ್ಣಕುಂಭದೊಂದಿಗೆ ಪುತ್ತಿಗೆ ಮಠದ ಪ್ರತಿನಿಧಿಗಳು ಸ್ವಾಗತಿಸಿದರು. ಶ್ರೀಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟದ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಶ್ರೀಶಂಕರ ವಿಜಯೇಂದ್ರ ಸ್ವಾಮೀಜಿಯವರನ್ನು ಆದರದಿಂದ ಬರಮಾಡಿಕೊಂಡರು. ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನವನ್ನು ಪುತ್ತಿಗೆ ಶ್ರೀಪಾದರು ಕಾಂಚೀ ಸ್ವಾಮೀಜಿಯವರಿಗೆ ಮಾಡಿಸಿದರು. ಚಂದ್ರಶಾಲೆಯಲ್ಲಿ ನಡೆದ ಸಾಂಪ್ರದಾಯಿಕ ಸ್ವಾಗತ ಕಾರ್ಯಕ್ರಮದಲ್ಲಿ ಕಾಂಚಿ ಮಠಾಧೀಶರನ್ನು ಪರ್ಯಾಯ ಮಠದಿಂದ ಗೌರವಿಸಲಾಯಿತು.

ಬಳಿಕ ಗೀತಾ ಮಂದಿರಕ್ಕೆ ತೆರಳಿದ ಕಾಂಚೀ ಸ್ವಾಮೀಜಿಯವರಿಗೆ ಪುತ್ತಿಗೆ ಶ್ರೀಪಾದರು ಮಂದಿರದ ವೈಶಿಷ್ಟéಗಳನ್ನು ವಿವರಿಸಿದರು. ಗೀತೋತ್ಸವದ ಆಕರ್ಷಕ ಮೆರವಣಿಗೆಯಲ್ಲಿ ಕಾಂಚೀ ಸ್ವಾಮೀಜಿ, ಪುತ್ತಿಗೆ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ರಥಬೀದಿಯಲ್ಲಿ ನಡೆದು ರಾಜಾಂಗಣವನ್ನು ಪ್ರವೇಶಿಸಿತು. ನ. 21ರಿಂದ ಡಿ. 29ರ ವರೆಗೆ ನಡೆಯುವ ವೈಭವದ ಗೀತೋತ್ಸವವನ್ನು ರಾಜಾಂಗಣದಲ್ಲಿ ಕಾಂಚಿ ಮಠಾಧೀಶರು ಉದ್ಘಾಟಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next