ಮಸ್ಕತ್: ಗಲ್ಫ್ ರಾಷ್ಟ್ರದ ರಾಜಧಾನಿ ಮಸ್ಕತ್‌ನಲ್ಲಿ ಓಮನ್ ಬಿಲ್ಲವಾಸ್ ಸಂಘಟನೆಯ ವತಿಯಿಂದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಪೂಜೆಯು ವಿಜೃಂಭಣೆಯೊಂದಿಗೆ ನಡೆಯಿತು.
ಇದನ್ನೂ ಓದಿ:ಸ್ವರಭ್ರಾಮರಿ ಹಾಡಿನ ಲೋಕಾರ್ಪಣೆ, ಯುಎಇ ಕನ್ನಡ ಮಕ್ಕಳ ಗಾಯನ ಸ್ಪರ್ಧೆ
ಪುರೋಹಿತರಾದ ಚರಣ್ ಶಾಂತಿ ಕಟಪಾಡಿ ಅವರ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ದೇವರ ವಿಸ್ತಾರವಾದ ಕಥೆ, ಭಕ್ತಿಯ ಪೂಜಾ ಕೈಂಕರ್ಯ, ಭಜನೆ, ಚೆಂಡೆ, ಮಹಿಳೆಯರಿಂದ ಕಲಶ ಪ್ರದಾನ ನƒತ್ಯ ಹಾಗೂ ಭಕ್ತಿ ಭಾವದೊಂದಿಗೆ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಪೂಜೆಯು ಕಾರ್ಯಕ್ರಮ ಸಂಪನ್ನಗೊಂಡಿತು.
ಸಂಘದ ಯುವಕರು ದೇವಸ್ಥಾನದ ಪಾಕಶಾಲೆಯಲ್ಲಿ ವಿವಿಧ ಖಾದ್ಯ ಪದಾರ್ಥ ಹಾಗೂ ಪ್ರಸಾದವನ್ನು ತಯಾರಿಸಿ, ವಿತರಿಸಿದರು. ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅನ್ನಪ್ರಸಾದವನ್ನು ಸ್ವೀಕರಿಸಿದರು.
ಓಮನ್ ಬಿಲ್ಲವಾಸ್ ಸಂಘಟನೆಯ ಅಧ್ಯಕ್ಷ ಸುಜಿತ್ ಅಂಚನ್, ಮಾಜಿ ಅಧ್ಯಕ್ಷ ಹಾಗೂ ಸ್ಥಾಪಕ ಸದಸ್ಯ ಎಸ್. ಕೆ. ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯರು, ವಿವಿಧ ಸಂಘಟನೆಗಳ ಮುಖ್ಯಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.