Advertisement

“ಹಳೆಯಂಗಡಿ ಬಯಲು ಶೌಚಮುಕ್ತ ಗ್ರಾಮದ ಸಂಕಲ್ಪ ‘

07:35 AM Aug 10, 2017 | Team Udayavani |

ಹಳೆಯಂಗಡಿ: ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣವಾಗಿ ಬಯಲು ಶೌಚಮುಕ್ತಗೊಳಿಸಲು ಸಂಘ ಸಂಸ್ಥೆಗಳು ಸಹಕರಿಸಿದಲ್ಲಿ ಹಳೆಯಂಗಡಿ ಗ್ರಾಮ ಪಂಚಾಯತ್‌ನ್ನು ಬಯಲು ಶೌಚಮುಕ್ತ ಗ್ರಾಮವನ್ನಾಗಿ ಘೋಷಿಸಲು ಸಾಧ್ಯವಿದೆ. ಈ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹಳೆಯಂಗಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಜಲಜಾ ಹೇಳಿದರು.

Advertisement

ಹಳೆಯಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಾಮ ಪಂಚಾಯತ್‌ ಮತ್ತು ಲಯನ್ಸ್‌ ಹಾಗೂ ಲಿಯೋ ಕ್ಲಬ್‌ ಆಶ್ರಯದಲ್ಲಿ ನಡೆದ ಬಯಲು ಬಹಿರ್ದೆಸೆ ಮುಕ್ತ ಸ್ವಾತಂತ್ರ ಸಪ್ತಾಹದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಸ್ವತ್ಛತೆಯ ಬಗ್ಗೆ ಕಿರು ಚಿತ್ರವನ್ನು ಪ್ರದರ್ಶಿ ಸಲಾಯಿತು. ಸ್ವತ್ಛತಾ ನೀತಿ ಪ್ರತಿಜ್ಞಾ ವಿಧಿಯನ್ನು ಪಂಚಾಯತ್‌ ಅಧ್ಯಕ್ಷರು ಭೋಧಿಸಿದರು.

ಹಳೆಯಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್‌ ಖಾದರ್‌, ಅಬ್ದುಲ್‌ ಅಜೀಜ್‌, ಚಿತ್ರಾ ಸುರೇಶ್‌, ಶರ್ಮಿಳಾ ಎಸ್‌. ಕೋಟ್ಯಾನ್‌, ಬೇಬಿ ಸುಲೋಚನಾ, ಸುಗಂಧಿ, ಜಯಂತಿ, ಪ್ರಾಂಶುಪಾಲ ವಿಶ್ವನಾಥ ಭಟ್‌, ಲಯನ್ಸ್‌ ಉಪಾಧ್ಯಕ್ಷ ಯಶೋಧರ ಸಾಲ್ಯಾನ್‌, ಗೋಪಾಲ ಭಂಡಾರಿ, ಉಪನ್ಯಾಸಕರಾದ ರೋಶನಿ ಯಶವಂತ್‌, ಮಂಜುಳಾ ಮಯ್ಯ ಉಪಸ್ಥಿತರಿದ್ದರು. ಗ್ರಾ.ಪಂ. ಕಾರ್ಯದರ್ಶಿ ಕೇಶವ ಸ್ವಾಗತಿಸಿದರು. ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಎಚ್‌. ವಸಂತ್‌ ಬೆರ್ನಾರ್ಡ್‌ ವಂದಿಸಿದರು.  ಪಂ. ಸಿಬಂದಿ ಹರೀಶ್‌ ಮತ್ತು ಅಬ್ದುಲ್‌ ಸವಾದ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next