Advertisement

WhatsApp ಚಾಟ್‌ ಡಿಲೀಟ್‌ ಆಗಿದ್ಯಾ? ಚಾಟ್‌ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

03:37 PM Nov 10, 2024 | Team Udayavani |

ಮುಂಬೈ: ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಾಟ್ಸಾಪ್ (WhatsApp).‌ ತ್ವರಿತವಾಗಿ ಮೆಸೇಜ್ ಕಳುಹಿಸಲು ಬಳಕೆಯಾಗುವ ವಾಟ್ಸಾಪ್ ಡಿಜಿಟಲ್ ಸಂವಹನದ ಪ್ರಾಥಮಿಕ ಸಾಧನವಾಗಿದೆ.

Advertisement

ಇತ್ತೀಚಿನ ದಿನಗಳಲ್ಲಿ ವೃತ್ತಿಪರ ಚಾಟ್‌ಗಳು, ಕೆಲಸದ ಸಂದೇಶಗಳು, ವೈಯಕ್ತಿಕ ಸಂಭಾಷಣೆಗಳು ಮತ್ತು ಫೋಟೋಗಳನ್ನು ವಾಟ್ಸಾಪ್ ನಲ್ಲಿ ಸುರಕ್ಷಿತವಾಗಿರಿಸುವುದು ಅತ್ಯಗತ್ಯ. ಆದರೆ ವಾಟ್ಸಾಪ್ ಚಾಟ್‌ ಗಳು ಕಳೆದುಹೋದರೆ ಹಲವರು ಸಂಕಷ್ಟ ಪಡುತ್ತಾರೆ. ಅದೃಷ್ಟವಶಾತ್, ಆಂಡ್ರ್ಯಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಅಳಿಸಲಾದ ಚಾಟ್‌ ಗಳನ್ನು ಮರುಪಡೆಯಲು ಸಾಧ್ಯ.

Android ಗಾಗಿ ಗೂಗಲ್ ಡ್ರೈವ್ ಬ್ಯಾಕಪ್‌‌ ಗಳು, iOS ಗಾಗಿ ಐಕ್ಲೌಡ್ ಮತ್ತು ಇತರ ಪರ್ಯಾಯ ಪರಿಹಾರಗಳನ್ನು ಬಳಸುವುದು ಸೇರಿದಂತೆ ಕೆಲವೇ ನಿಮಿಷಗಳಲ್ಲಿ Android ಮತ್ತು iOS ನಲ್ಲಿ ಅಳಿಸಲಾದ WhatsApp ಚಾಟ್‌ ಗಳನ್ನು ಮರುಪಡೆಯಲು ಪರಿಣಾಮಕಾರಿ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ.

ಆಂಡ್ರಾಯ್ಡ್ ಮತ್ತು ಐಒಎಸ್‌ ನಲ್ಲಿ ಅಳಿಸಲಾದ ವಾಟ್ಸಪ್ ಚಾಟ್‌ಗಳನ್ನು ಮರುಪಡೆಯಲು ಹೀಗೆ ಮಾಡಿ

ಹಂತ 1: ನಿಮ್ಮ ಸಾಧನದಿಂದ ವಾಟ್ಸಪ್ ಅನ್‌ ಇನ್ಸ್ಟಾಲ್ ಮಾಡಿ.

Advertisement

ಹಂತ 2: ನಿಮ್ಮ ಆಪ್ ಸ್ಟೋರ್‌ಗೆ ಹೋಗಿ, ವಾಟ್ಸಪ್ ಮತ್ತೊಮ್ಮೆ ಡೌನ್‌ಲೋಡ್ ಮಾಡಿ ಮತ್ತು ಅದನ್ನು ನಿಮ್ಮ ಸಾಧನದಲ್ಲಿ ರಿ ಇನ್ಸ್ಟಾಲ್‌ ಮಾಡಿ.

ಹಂತ 3: ವಾಟ್ಸಪ್ ತೆರೆಯಿರಿ ಮತ್ತು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸುವ ಮೂಲಕ ನಿಮ್ಮ ಫೋನ್ ಸಂಖ್ಯೆಯನ್ನು ಪರಿಶೀಲಿಸಿ.

ಹಂತ 4: ಸೆಟಪ್ ಸಮಯದಲ್ಲಿ, ಬ್ಯಾಕಪ್‌ನಿಂದ ನಿಮ್ಮ ಚಾಟ್‌‌ ಗಳನ್ನು ಮರುಪಡೆಯಲು ಅವಕಾಶ ಸಿಗುತ್ತದೆ.

ಹಂತ 5: ಪ್ರಕ್ರಿಯೆಯನ್ನು ಪ್ರಾರಂಭಿಸಲು “ಮರುಸ್ಥಾಪಿಸು” ಟ್ಯಾಪ್ ಮಾಡಿ ಮತ್ತು ರೆಸ್ಟೋರೇಶನ್ ಪೂರ್ಣಗೊಳ್ಳುವವರೆಗೆ ಕಾಯಿರಿ.‌

ಹೊಸ ಫೀಚರ್

ಮತ್ತೊಂದೆಡೆ, ವಾಟ್ಸಪ್ ಪ್ರಸ್ತುತ ಗೂಗಲ್ ಲೆನ್ಸ್‌ನಂತೆಯೇ ಆನ್‌ಲೈನ್‌ನಲ್ಲಿ ಚಾಟ್ ಸಂದೇಶಗಳ ಮೂಲಕ ಹಂಚಿಕೊಂಡ ಚಿತ್ರಗಳ ದೃಢೀಕರಣವನ್ನು ಪರಿಶೀಲಿಸಲು ಹೊಸ ವೈಶಿಷ್ಟ್ಯ‌ ತಂದಿದೆ. ವೆಬ್‌ನಲ್ಲಿ ಚಿತ್ರಗಳನ್ನು ಹುಡುಕಿ ವೈಶಿಷ್ಟ್ಯವು ತಪ್ಪು ಮಾಹಿತಿಯ ಪ್ರಸರಣ ಮತ್ತು ತಪ್ಪುದಾರಿಗೆಳೆಯುವ ವಿಷಯದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ವಾಟ್ಸಾಪ್ ನಲ್ಲಿ ಹಂಚಿಕೊಳ್ಳಲಾದ ನಕಲಿ ಮತ್ತು ನೈಜ ಚಿತ್ರಗಳನ್ನು ಗುರುತಿಸುವುದು ಹೇಗೆ? (ಬೀಟಾ ಬಳಕೆದಾರರು)

ಹಂತ 1: ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ನೀವು ಹುಡುಕಲು ಬಯಸುವ ಚಿತ್ರವನ್ನು ಡೌನ್‌ಲೋಡ್ ಮಾಡಿ.

ಹಂತ 2: ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಡಾಟ್ ಮೆನು ಮೇಲೆ ಟ್ಯಾಪ್ ಮಾಡಿ.

ಹಂತ 3: ಡ್ರಾಪ್‌ಡೌನ್ ಮೆನುವಿನಿಂದ “ವೆಬ್‌ನಲ್ಲಿ ಹುಡುಕಾಟ” (search on the web) ಆಯ್ಕೆಯನ್ನು ಆಯ್ಕೆಮಾಡಿ.

ಹಂತ 4: ಈ ಕ್ರಿಯೆಯು ಚಿತ್ರವನ್ನು ಗೂಗಲ್ ಹುಡುಕಾಟಕ್ಕೆ ಕಳುಹಿಸುತ್ತದೆ, ಇದು ಒಂದೇ ರೀತಿಯ ಚಿತ್ರಗಳನ್ನು ಮತ್ತು ಹೆಚ್ಚುವರಿ ಮಾಹಿತಿಯನ್ನು ನೋಡಲು ನಿಮಗೆ ಅವಕಾಶ ನೀಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next