Advertisement

Oh My God-2 ಗೆ ಇನ್ನೂ ಸಿಕ್ಕಿಲ್ಲ ಪ್ರಮಾಣಪತ್ರ

08:53 PM Jul 29, 2023 | Team Udayavani |

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ ಸಿನಿಮಾಗಳು ಒಂದಿಲ್ಲೊಂದು ರಗಳೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇವೆ. ಆದಿಪುರುಷ ವಿವಾದದ ಬೆನ್ನಲ್ಲೇ ಇದೀಗ ನಟ ಅಕ್ಷಯ್‌ ಕುಮಾರ್‌ ಅಭಿನಯದ ಓ ಮೈಗಾಡ್‌-2 ಚಿತ್ರವೂ ಕೂಡ ಅಂಥದ್ದೇ ಸಂದಿಗ್ಧತೆಗೆ ಸಿಕ್ಕಬಹುದೆಂಬ ಮಾತುಗಳು ಕೇಳಿಬಂದಿದೆ.

Advertisement

ಬಿಡುಗಡೆ ಹೊಸ್ತಿಲಿನಲ್ಲಿರುವ ಓ ಮೈಗಾಡ್‌-2ಗೆ ಕೇಂದ್ರೀಯ ಸಿನಿಮಾ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಇನ್ನೂ ಪ್ರಮಾಣಪತ್ರವನ್ನೇ ನೀಡದಿರುವುದು ಈ ವಾದಕ್ಕೆ ಪುಷ್ಟಿ ನೀಡಿದೆ. ಓ ಮೈಗಾಡ್‌-2 ಲೈಂಗಿಕ ಶಿಕ್ಷಣದ ಕಥಾಹಂದರವನ್ನು ಹೊಂದಿದ ಸಿನಿಮಾ ಆಗಿದ್ದು, ಚಿತ್ರದ 20 ದೃಶ್ಯಗಳಿಗೆ ಕತ್ತರಿ ಹಾಕುವ ಸಲಹೆಯನ್ನೂ ಮಂಡಳಿ ನೀಡಿದೆ. ಈ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಗೊಂಡ ಬಳಿಕ ಉಂಟಾಗುವ ಸವಾಲುಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪರಿಹರಿಸಲು ಮಂಡಳಿ ಯೋಜಿಸುತ್ತಿದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next