Advertisement
ಕೇಂದ್ರ ಸರ್ಕಾರದ ಸರಳ ವಿವಾಹ ಮಾರ್ಗಸೂಚಿ ದುರ್ಬಳಕೆ ಮಾಡಿಕೊಂಡ ಕೆಲವರು, ಅಪ್ರಾಪ್ತರಿಗೆ ಮದುವೆ ಮಾಡಿಸಲುಮುಂದಾಗಿದ್ದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಜಿಲ್ಲಾಡಳಿತದಿಂದ ಬಾಲ್ಯವಿವಾಹ ತಡೆಗಟ್ಟಲು ಸಾಕಷ್ಟು ಕಾನೂನು ಜಾರಿಗೆ ತಂದಿದೆ. ಪ್ರತಿ ತಿಂಗಳು ಬಾಲ್ಯವಿವಾಹದ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ, ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನೂ ಮಾಡಲಾಗುತ್ತಿದೆ. ದೇವಸ್ಥಾನ,ಕಲ್ಯಾಣಮಂಟಪ, ಇತರೆ ಕಡೆ ಬಾಲ್ಯ ವಿವಾಹ ಪ್ರಕರಣ ಕಂಡುಬಂದರೆ ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
17 ವರ್ಷ ತುಂಬಿದವರದ್ದೇ ಹೆಚ್ಚು ಪ್ರಕರಣ : ಜಿಲ್ಲೆಯಲ್ಲಿ 16 ರಿಂದ 17 ವರ್ಷದ ಮದುವೆ ಪ್ರಕರಣಗಳೇ ಹೆಚ್ಚು ಪತ್ತೆಯಾಗಿವೆ. ಬಹಳಷ್ಟು ಪಾಲಕರು 17 ತುಂಬಿದ ಹೆಣ್ಣು ಮಕ್ಕಳನ್ನು 18 ವರ್ಷ ಎಂದು ಹೇಳಿ ಮದುವೆಗೆ ಮುಂದಾಗಿದ್ದಾರೆ. ಕಾನೂನಿನಡಿ 18 ವರ್ಷ ತುಂಬಿದ ಮೇಲಷ್ಟೇ ಮದುವೆಗೆ ಅರ್ಹರು ಎಂಬುದರ ಕುರಿತು ಪೋಷಕರಿಗೆಅರಿವಿಲ್ಲ.ಜಿಲ್ಲೆಯಲ್ಲಿಪತ್ತೆಯಾದಪ್ರಕರಣಗಳಲ್ಲಿ ಕೆಲವು ಪ್ರೇಮ ವಿವಾಹಕ್ಕೆ ಸಂಬಂಧಿಸಿದ್ದೇ ಹೆಚ್ಚು. ಪ್ರೇಮ ಪಾಶಕ್ಕೆ ಬಿದ್ದ ಮಕ್ಕಳು ದಾರಿ ತಪ್ಪುವ ಆತಂಕದಿಂದ ಬೇಗನೆ ಮದುವೆ ಮುಗಿಸಲು ಪಾಲಕರು ಮುಂದಾಗಿದ್ದರು. ಮತ್ತೂಂದೆಡೆ ಪ್ರೀತಿ ಪ್ರೇಮ ನೆಪದಲ್ಲಿ ಮನೆಯಲ್ಲಿ ಮರ್ಯಾದೆ ಹಾಳಾಗುತ್ತದೆ ಎಂಬ ಕಾರಣಕ್ಕೆ ಬೇರೆಯವರೊಂದಿಗೆ ಮದುವೆ ಮಾಡಿ ಮುಗಿಸಲು ಯೋಜಿಸುತ್ತಿದ್ದರು ಎಂಬುದು ಅಧಿಕಾರಿಗಳ ತನಿಖೆಯಿಂದ ಬೆಳಕಿಗೆ ಬಂದಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪ್ರತಿ ತಿಂಗಳು ಬಾಲ್ಯ ವಿವಾಹ ಹಾಗೂ ಇಲಾಖೆಗೆ ಸಂಬಂಧಿಸಿದಂತೆ, ಪ್ರತಿ ತಿಂಗಳು ಸಭೆ ಮಾಡಿ, ಅಧಿಕಾರಿಗಳಿಗೆ ಸೂಚನೆಮಾರ್ಗದರ್ಶನ ನೀಡಲಾಗಿದೆ. ಪೊಲೀಸರು, ಆಯಾ ತಾಲೂಕಿನ ಸಿಡಿಪಿಒ ಸೇರಿ ವಿವಿಧ ಇಲಾಖೆ ಒಳಗೊಂಡಂತೆ ಬಾಲ್ಯ ವಿವಾಹ ತಡೆಗೆ ತಂಡವನ್ನು ರಚಿಸಲಾಗಿದೆ. – ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ
ಈಗಾಗಲೇ ಬಾಲ್ಯ ವಿವಾಹ ನಡೆಯುತ್ತಿರುವ ಮಾಹಿತಿ ತಿಳಿದಕೂಡಲೇ ದಾಳಿ ನಡೆಸಿದ್ದರಿಂದ 37 ಬಾಲ್ಯ ವಿವಾಹ ತಡೆಯಲು ಸಾಧ್ಯ ವಾಯಿತು.ಪೋಕ್ಸೋ ಕಾಯಿದೆಯಡಿ 1 ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಜಿಲ್ಲೆಯಲ್ಲಿಹೆಚ್ಚು ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಪಾಲಕರು ಹಾಗೂ ಮದುವೆ ಸಂದರ್ಭದಲ್ಲಿ ಹಾಜರಿದ್ದ ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ. –ಪುಷ್ಪಾ ರಾಯ್ಕರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಪ ನಿರ್ದೇಶಕಿ
–ಎಸ್.ಮಹೇಶ್